ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೋಕ್ಷ ತೆರಿಗೆ ರೂ.3.75 ಲಕ್ಷ ಕೋಟಿ

Last Updated 23 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜನವರಿ ಅವಧಿಯಲ್ಲಿ ರೂ.3.75 ಲಕ್ಷ ಕೋಟಿ ಪರೋಕ್ಷ ತೆರಿಗೆ ಸಂಗ್ರಹಿಸಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಎಸ್.ಎಸ್. ಪಳನಿಮಾಣಿಕ್ಯಂ ಶುಕ್ರವಾರ ಲೋಕಸಭೆಗೆ ತಿಳಿಸಿದ್ದಾರೆ.

ಏಪ್ರಿಲ್-ಜನವರಿ ಅವಧಿಯಲ್ಲಿ ಕೇಂದ್ರೀಯ ಅಬಕಾರಿ ತೆರಿಗೆ ರೂ.1.38ಲಕ್ಷ  ಕೋಟಿ ಸಂಗ್ರಹವಾಗಿದೆ. ಸೀಮಾ ಸುಂಕ ಮತ್ತು ಸೇವಾ ತೆರಿಗೆ ಕ್ರಮವಾಗಿ ರೂ.1.34 ಲಕ್ಷ ಕೋಟಿ ಮತ್ತು  ರೂ.1.02 ಲಕ್ಷ ಕೋಟಿ ಸಂಗ್ರಹಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಪರೋಕ್ಷ ತೆರಿಗೆ ಮೂಲಕ ರೂ.5.05 ಲಕ್ಷ ಕೋಟಿ ಸಂಗ್ರಹಿಸುವ ಗುರಿ ಇದ್ದು,  ಶೇ 74.41ರಷ್ಟು ಗುರಿ ತಲುಪಲಾಗಿದೆ ಎಂದು ವಿವರಿಸಿದ್ದಾರೆ.

2011-12ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಬಾರಿ ತೆರಿಗೆ ಸಂಗ್ರಹ ಶೇ 27ರಷ್ಟು ಹೆಚ್ಚುವ ಅಂದಾಜಿದೆ. ರೂ.1.87 ಲಕ್ಷ ಕೋಟಿ ಸೀಮಾ ಸುಂಕ, ರೂ.1.93 ಲಕ್ಷ ಕೋಟಿ ಅಬಕಾರಿ ತೆರಿಗೆ ಮತ್ತು ರೂ.1.24 ಲಕ್ಷ ಕೋಟಿ ಸೇವಾ ತೆರಿಗೆ ಸಂಗ್ರಹ ನಿಗದಿಪಡಿಸಲಾಗಿದೆ.  ಮೊದಲ 8 ತಿಂಗಳಲ್ಲಿ ಪರೋಕ್ಷ ತೆರಿಗೆ ಸಂಗ್ರಹ ಶೇ 16.8ರಷ್ಟು ಹೆಚ್ಚಿ ರೂ.2.92 ಲಕ್ಷ ಕೋಟಿಗೆ ಏರಿದೆ. ಕಳೆದ ಹಣಕಾಸು ವರ್ಷ ಇದೇ ಅವಧಿಯಲ್ಲಿ ರೂ.2.50 ಲಕ್ಷ ಕೋಟಿ ಸಂಗ್ರಹವಾಗಿತ್ತು.
16,700 ಹುದ್ದೆ ಖಾಲಿ

ಆದಾಯ ತೆರಿಗೆ ಇಲಾಖೆಯಲ್ಲಿ ಸದ್ಯ 16,700 ಹುದ್ದೆ ಖಾಲಿ ಇದ್ದು, ಈಗಿ ರುವ ಸಿಬ್ಬಂದಿಯೇ ಹೆಚ್ಚುವರಿ ಹೊಣೆ ನಿಭಾಯಿಸುತ್ತಿದ್ದಾರೆ. ಇದು ಕೆಲಸದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಪಳನಿಮಾಣಿಕ್ಯಂ ಹೇಳಿದರು.
ನಿವೃತ್ತರ ಲೆಕ್ಕಪತ್ರ ನಿರ್ವಹಣೆ, ವಿಆರ್‌ಎಸ್  ವಿಭಾಗ ಸೇರಿದಂತೆ ಗ್ರೂಪ್ `ಸಿ' ಮತ್ತು `ಎ'ನಲ್ಲಿ ಕ್ರಮವಾಗಿ 15,002 ಮತ್ತು 1,137 ಹುದ್ದೆ ಖಾಲಿ ಇವೆ ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT