ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡುರಂಗಿಗೆ ಗೌರವ

Last Updated 10 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು ವಿಶ್ವವಿದ್ಯಾಲಯ: ಶನಿವಾರ `ಸಂಸ್ಕೃತಿ ಚಿಂತನ~ ಕಾರ್ಯಕ್ರಮದ ಅಂಗವಾಗಿ `ಅಪೂರ್ವ ಸಾಧಕರು~ ಮಾಲಿಕೆಯಲ್ಲಿ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಪ್ರೊ. ಕೆ.ಟಿ. ಪಾಂಡುರಂಗಿ ಅವರಿಗೆ ಗೌರವ ಸಮರ್ಪಣೆ, ವಿಶ್ವವಿದ್ಯಾಲಯ ಮತ್ತು ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ.
 
ಅತಿಥಿ: ಡಾ.ಎಂ. ಶಿವಕುಮಾರ ಸ್ವಾಮಿ, ಅಧ್ಯಕ್ಷತೆ: ಪ್ರೊ.ಎನ್. ಪ್ರಭುದೇವ
ಸಂಸ್ಕೃತ ಮತ್ತು ದ್ವೈತ ವೇದಾಂತದಲ್ಲಿ ಮಹಾನ್ ವಿದ್ವಾಂಸರಾಗಿರುವ ಪ್ರೊ. ಕೆ.ಟಿ. ಪಾಂಡುರಂಗಿ ಈ ಎರಡರ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ್ದಾರೆ. ಇದೇ ಕಾರಣಕ್ಕಾಗಿ ವಿದೇಶಗಳಲ್ಲೂ ಪ್ರಖ್ಯಾತಿ ಪಡೆದಿದ್ದಾರೆ.

ಧಾರವಾಡ ಜಿಲ್ಲೆಯ ತುಮ್ಮಿನಕಟ್ಟೆಯ ಸಂಸ್ಕೃತ ವಿದ್ವಾಂಸರ ಕುಟುಂಬದಲ್ಲಿ 1918ರಲ್ಲಿ ಜನಿಸಿದ ಕೆ.ಟಿ. ಪಾಂಡುರಂಗಿ, ತಂದೆ ತಮ್ಮಣ್ಣಾಚಾರ್ ಪಾಂಡುರಂಗಿ ಅವರಿಂದ ಮನೆಯಲ್ಲಿಯೇ ಕಾವ್ಯ, ನಾಟಕ ಮತ್ತು ವ್ಯಾಕರಣ ಕಲಿತವರು.

ಸಾಂಗ್ಲಿ ಮತ್ತು ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ `ನ್ಯಾಯ~ ಮತ್ತು `ವೇದಾಂತ~ವನ್ನು ಆಳವಾಗಿ ಅಧ್ಯಯನ ಮಾಡಿದ ನಂತರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಬಿ.ಎ. ಮತ್ತು ಎಂ.ಎ. ಪದವಿ ಪಡೆದರು. ಆನಂತರ ಬೆಂಗಳೂರು ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದಲ್ಲಿ ಶಿಕ್ಷಕರಾಗಿ, ಮುಖ್ಯಸ್ಥರಾಗಿ 35 ವರ್ಷಗಳ ಕಾಲ ದೀರ್ಘ ಸೇವೆ ಸಲ್ಲಿಸಿದ್ದಾರೆ.

ಅಪರೂಪದ ಸಂಸ್ಕೃತ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಅವುಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಪ್ರಾಚೀನ ಜ್ಞಾನಧಾರೆಯನ್ನು ಕಾಪಾಡಿದ್ದು, ವೇದಾಂತ ಮತ್ತು ಪೂರ್ವ ಮೀಮಾಂಸೆಯನ್ನು ಕನ್ನಡ ಮತ್ತು ಇಂಗ್ಲಿಷ್‌ಗೆ ಭಾಷಾಂತರಿಸಿ ಪಂಡಿತರು, ಪಾಮರರಿಗೆ ದೊರೆಯುವಂತೆ ಮಾಡಿದ್ದು ಅವರ ಹೆಗ್ಗಳಿಕೆ. ನಿವೃತ್ತಿಯ ನಂತರ ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ ಸುದೀರ್ಘವಾಗಿ ಸಲ್ಲಿಸಿದ ಸೇವೆಯೂ ಗಮನಾರ್ಹ.

ಪ್ರೊ. ಪಾಂಡುರಂಗಿ ಅವರ ಶಿಷ್ಯವೃಂದವನ್ನು ಅವಲೋಕಿಸಿದರೆ ಸಂಸ್ಕೃತ ಭಾಷೆಗೆ, ಭಾರತೀಯ ತತ್ವಜ್ಞಾನಕ್ಕೆ ಅವರು ನೀಡಿದ ಕೊಡುಗೆ ಗೋಚರವಾಗುತ್ತದೆ. ಪ್ರತಿ ಕಾಲೇಜಿನಲ್ಲಿ ಅವರ ಒಬ್ಬ ಶಿಷ್ಯರಾದರೂ ಸಂಸ್ಕೃತ ಮತ್ತು ಭಾರತೀಯ ತತ್ವಜ್ಞಾನ ಭೋದಿಸುತ್ತಿರುತ್ತಾರೆ.

ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ, ಅರಮನೆ ರಸ್ತೆ. ಸಂಜೆ: 5ರಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT