ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಸರಿಯಾಗಿ ಸಿದ್ಧತೆ ನಡೆಸಿಲ್ಲ

Last Updated 14 ಫೆಬ್ರುವರಿ 2011, 18:20 IST
ಅಕ್ಷರ ಗಾತ್ರ

ಕರಾಚಿ (ಪಿಟಿಐ): ವಿಶ್ವಕಪ್ ಟೂರ್ನಿಗೆ ಸರಿಯಾದ ರೀತಿಯಲ್ಲಿ ಸಿದ್ಧತೆ ನಡೆಸದ ತಂಡ ಪಾಕಿಸ್ತಾನ. ಆದರೆ ಸಂಘಟಿತ ಹೋರಾಟ ನೀಡಿದರೆ ಈ ತಂಡಕ್ಕೆ ಟ್ರೋಫಿ ಗೆಲ್ಲಬಹುದು ಎಂಬ ಅಭಿ ಪ್ರಾಯವನ್ನು ಮಾಜಿ ಆಟಗಾರ ಇಮ್ರಾನ್ ಖಾನ್ ವ್ಯಕ್ತಪಡಿಸಿದ್ದಾರೆ.

‘ಪ್ರಸಕ್ತ ಪಾಕ್ ತಂಡ ಅತ್ಯಂತ ಕೆಟ್ಟ ರೀತಿಯ ಸಿದ್ಧತೆಯೊಂದಿಗೆ ವಿಶ್ವಕಪ್ ನಲ್ಲಿ ಪಾಲ್ಗೊಳ್ಳುತ್ತಿದೆ. ಆದರೂ ಈ ತಂಡದ ಮೇಲೆ ವಿಶ್ವಾಸ ಇಡಬ ಹುದು. ಪ್ರಮುಖ ಆಟಗಾರರು ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡರೆ ಮತ್ತು ಟೂರ್ನಿಯುದ್ದಕ್ಕೂ ಸಂಘಟಿತ ಹೋರಾಟ ನೀಡಿದರೆ ಏನು ಬೇಕಾದರೂ ಸಂಭವಿಸಬಹುದು’ ಎಂದು 1992 ರಲ್ಲಿ ಪಾಕ್ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಹೇಳಿದರು.

‘ಅಗ್ರ ಕ್ರಮಾಂಕದಲ್ಲಿ ಸ್ಪೆಶಲಿಸ್ಟ್ ಬ್ಯಾಟ್ಸ್‌ಮನ್‌ಗಳನ್ನು ಆಡಿಸಬೇಕು ಎಂಬುದು ನಾನು ತಂಡಕ್ಕೆ ನೀಡುವ ಸಲಹೆ’ ಎಂದರು. ಬ್ಯಾಟಿಂಗ್‌ನ ಜವಾಬ್ದಾರಿ ಅನುಭವಿ ಆಟಗಾರರಾದ ಯೂನಿಸ್ ಖಾನ್ ಮತ್ತು ಮಿಸ್ಬಾ ಉಲ್ ಹಕ್ ಅವರ ಮೇಲೆ ಇದೆ ಎಂಬುದು ಅವರ ಹೇಳಿಕೆ.

‘ಯೂನಿಸ್ ಮತ್ತು ಮಿಸ್ಬಾ ಪ್ರತಿ ಪಂದ್ಯದಲ್ಲೂ ಪ್ರಮುಖ ಪಾತ್ರ ವಹಿಸುವರು. ಇವರಿಬ್ಬರಿಗೆ ಸಂಬಂಧಿಸಿದಂತೆ ತಂಡದ ಆಡಳಿತ ಒಂದು ಸ್ಪಷ್ಟ ಯೋಜನೆ ರೂಪಿಸಿಕೊಳ್ಳಬೇಕು. ಆರಂಭದಲ್ಲೇ ವಿಕೆಟ್‌ಗಳು ಬಿದ್ದರೆ ಬಳಿಕ ಕ್ರೀಸ್‌ಗಿಳಿಯುವ ಬ್ಯಾಟ್ಸ್‌ಮನ್ ಗಳಿಗೆ ಒತ್ತಡ ನಿಭಾಯಿಸುವುದು ಅಷ್ಟು ಸುಲಭವಲ್ಲ’ ಎಂದು ಇಮ್ರಾನ್ ಅಭಿಪ್ರಾಯಪಟ್ಟರು.

ನಾಯಕ ಶಾಹಿದ್ ಅಫ್ರಿದಿ ಅವರಿಗೆ ‘ಬ್ಯಾಟಿಂಗ್ ಆಲ್‌ರೌಂಡರ್’ ಎಂಬ ಹಣೆಪಟ್ಟಿ ನೀಡಿರುವುದು ಸರಿಯಲ್ಲ  ಎಂಬುದು ಇಮ್ರಾನ್ ಹೇಳಿಕೆ. ‘ನಾನು ಅವರನ್ನು ಬ್ಯಾಟಿಂಗ್ ಆಲ್‌ರೌಂಡರ್ ಎಂದು ಪರಿಗಣಿಸುವುದಿಲ್ಲ. ನಾಯಕತ್ವದ ಗುಣ ಅವರಲ್ಲಿದೆ. ಅವರ ಬ್ಯಾಟಿಂಗ್ ತಂಡಕ್ಕೆ ಒಂದು ರೀತಿಯಲ್ಲಿ ಬೋನಸ್ ಇದ್ದಂತೆ. ತಂಡವು ಅಫ್ರಿದಿಯ ಬ್ಯಾಟಿಂಗ್‌ಅನ್ನು ಅವಲಂಬಿಸಬಾರದು. ಅವರ ನಾಯಕತ್ವ, ಬೌಲಿಂಗ್ ಮತ್ತು ಫೀಲ್ಡಿಂಗ್‌ನ್ನು ಮಾತ್ರ ಪರಿಗಣಿಸಬೇಕು’ ಎಂದರು.

‘ಒಬ್ಬ ಶ್ರೇಷ್ಠ ಬ್ಯಾಟ್ಸ್‌ಮನ್‌ನಲ್ಲಿರಬೇಕಾದ ಎಲ್ಲ ಗುಣಗಳೂ ಅವರಲ್ಲಿದೆ. ಆದರೆ ಅದನ್ನು ಕಾರ್ಯರೂಪಕ್ಕೆ ಇಳಿಸುವಲ್ಲಿ ಎಡವುತ್ತಿದ್ದಾರೆ. ಅದೊಂದು ವೀಕ್‌ನೆಸ್’ ಎಂದು ಇಮ್ರಾನ್ ತಿಳಿಸಿದರು.

ತಮ್ಮಲ್ಲಿರುವ ಪ್ರತಿಭೆಗೆ ತಕ್ಕ ನ್ಯಾಯ ಒದಗಿಸದೇ ಇರುವ ಕೆಲವು ಆಟಗಾರರು ತಂಡದ ್ಲಲಿದ್ದಾರೆ ಎಂದು ಇಮ್ರಾನ್ ನುಡಿದರು. ‘ಉಮರ್ ಅಕ್ಮಲ್, ಕಮ್ರಾನ್ ಅಕ್ಮಲ್, ಅಫ್ರಿದಿ ಮತ್ತು ಅಬ್ದುಲ್ ರಜಾಕ್ ಅವರ ಬ್ಯಾಟಿಂಗ್ ಚೆನ್ನಾ ಗಿದೆ. ಆದರೆ ಇವರಿಗೆ ಉತ್ತಮ ಇನಿಂಗ್ಸ್ ಕಟ್ಟಲು ಸಾಧ್ಯವಾಗುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT