ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಭೂಕಂಪ:ಸಾವಿನ ಸಂಖ್ಯೆ 350 ಕ್ಕೆ ಏರಿಕೆ

Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ/ಐಎಎನ್‌­ಎಸ್‌): ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಮಂಗಳವಾರ ಸಂಭವಿಸಿದ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ ಬುಧ­ವಾರ 350ಕ್ಕೆ ಏರಿದೆ.

400 ಜನರು ಗಾಯ­ಗೊಂಡಿ­ದ್ದಾರೆ. ಅವಶೇಷ­ಗಳಡಿ ಬದು­ಕು­ಳಿದವರನ್ನು ಕಾಪಾಡಲು ಸೇನೆ ಮತ್ತು ರಕ್ಷಣಾ ಕಾರ್ಯಕರ್ತರು ಶ್ರಮಿಸು­ತ್ತಿದ್ದಾರೆ.

ಬಹುದೂರದವರೆಗೆ ಹರಡಿಕೊಂಡಿ­ರುವ ಮಣ್ಣಿನ ಅವಶೇಷಗಳಡಿ ಅನೇಕರು ಸಿಲುಕಿ­ಕೊಂಡಿರುವ ಸಾಧ್ಯತೆ ಇದೆ.

ರಸ್ತೆ ಸಮಸ್ಯೆಯಿಂದಾಗಿ ಬುಧವಾರ­ವಷ್ಟೇ ಹಾನಿಯ ಸ್ಥಳಗಳಿಗೆ ರಕ್ಷಣಾ ತಂಡ­ಗಳು ತಲುಪಿವೆ. ಪ್ರಾಥಮಿಕ ಅಂದಾ­ಜಿನ ಪ್ರಕಾರ, ಭೂಕಂಪ­ದಿಂದ ಮೂರು ಲಕ್ಷ ಜನರು ತೊಂದರೆಗೊಳ­ಗಾಗಿದ್ದಾರೆ.

ಭೂಕಂಪ ಸಂಭವಿಸಿದ ಆರೂ ಜಿಲ್ಲೆ­ಗಳಲ್ಲಿ ಬಲೂಚಿಸ್ತಾನದ ಮುಖ್ಯ­­ಮಂತ್ರಿ ಅಬ್ದುಲ್‌ ಮಲಿಕ್‌ ಬಲೋಚ್‌ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT