ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರುವಾಯಿ ನಾರಾಯಣ ಶೆಟ್ಟಿಗೆ ಪ್ರಶಸ್ತಿ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಉಡುಪಿ: ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ 2011-12 ಮತ್ತು 2012-13ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಉಪ್ಪಿನಕುದ್ರು ವಾಮನ ಪೈ, ಹೊಳಬಸಯ್ಯ ಸಂಬಾಳದ ಸೇರಿದಂತೆ ಇಪ್ಪತ್ತು ಮಂದಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2011-12ನೇ ಸಾಲಿನ ಪ್ರಶಸ್ತಿ ವಿಜೇತರ ಹೆಸರು ಮತ್ತು ಕಲಾ ಪ್ರಕಾರ ಈ ಕೆಳಕಂಡಂತಿದೆ: ಕುಡಾಣ ಗೋಪಾಲಕೃಷ್ಣ ಭಟ್- ಯಕ್ಷಗಾನ, ಪೆರುವಾಯಿ ನಾರಾಯಣ ಶೆಟ್ಟಿ- ಯಕ್ಷಗಾನ, ಪೇತ್ರಿ ಮಾಧವ ನಾಯಕ್- ಯಕ್ಷಗಾನ, ಹಳ್ಳದಾಚೆ ವೆಂಕಟ್ರಮಣಯ್ಯ ಮೂಡಿಗೆರೆ- ಯಕ್ಷಗಾನ, ಬಸವಣ್ಣಯ್ಯ ಮಠಪತಿ- ಶ್ರೀಕೃಷ್ಣ ಪಾರಿಜಾತ, ಅಡಿವಯ್ಯ ಎಸ್.ಹಿರೇಮಠ- ದೊಡ್ಡಾಟ, ರಾಮಚಂದ್ರಪ್ಪ ಅರ್ಕಸಾಲಿ- ಮೂಡಲಪಾಯ, ಡಾ.ರಮಾನಂದ ಬನಾರಿ- ತಾಳ ಮದ್ದಲೆ, ದೇವಕಾನ ಕೃಷ್ಣಭಟ್- ಪ್ರಸಾದನ ಮತ್ತು ಉಪ್ಪಿನಕುದ್ರು ವಾಮನ ಪೈ- ಯಕ್ಷಗಾನ ಗೊಂಬೆಯಾಟ.

2012-13ನೇ ಸಾಲಿನ ಪ್ರಶಸ್ತಿ ವಿಜೇತರ ಹೆಸರು ಮತ್ತು ಕಲಾ ಪ್ರಕಾರ ಈ ಕೆಳಕಂಡಂತಿದೆ: ಇಡಗುಂಜಿ ಕೃಷ್ಣಯಾಜಿ- ಯಕ್ಷಗಾನ, ಕೆ.ಎಚ್. ದಾಸಪ್ಪ ರೈ- ಯಕ್ಷಗಾನ, ಪದ್ಯಾಣ ಶಂಕರನಾರಾಯಣ ಭಟ್- ಯಕ್ಷಗಾನ, ದಯಾನಂದ ನಾಗೂರು- ಯಕ್ಷಗಾನ, ಹೊಳಬಸಯ್ಯ ಸಂಬಾಳದ- ಶ್ರೀಕೃಷ್ಣ ಪಾರಿಜಾತ, ಈರಮಾಳಪ್ಪ ಮಧುಗಿರಿ- ಮೂಡಲಪಾಯ, ವಿರೂಪಾಕ್ಷಪ್ಪ ಅಂಗಡಿ- ಸಣ್ಣಾಟ, ಮೂಕಾಂಬಿಕ ವಾರಂಬಳ್ಳಿ- ಮಹಿಳಾ ಯಕ್ಷಗಾನ, ವಿಶ್ವನಾಥ ಶೇಟ್, ಹಾರ್ಸಿಕಟ್ಟಾ- ಪ್ರಸಾದನ, ಲಕ್ಷ್ಮಿಜನಾರ್ದನ ಯಕ್ಷಗಾನ ಕಲಾಮಂಡಳಿ, ಅಂಬಲಪಾಡಿ- ಸಂಘಟನೆ.

ಅಕಾಡೆಮಿಯ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ವಿಜೇತರ ಹೆಸರನ್ನು ಪ್ರಕಟಿಸಿದರು.

~ಸರ್ವ ಸದಸ್ಯರ ಸಭೆಯಲ್ಲಿ ವಿಜೇತರನ್ನು ಆಯ್ಕೆ ಮಾಡಲಾಯಿತು. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕವನ್ನು ಹೊಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ~ ಎಂದರು.

ಅಕಾಡೆಮಿಯ ಸದಸ್ಯರಾದ ಸರಪಾಡಿ ಅಶೋಕ್ ಶೆಟ್ಟಿ, ರಮೇಶ್ ಬೇಗಾರ್, ಭಾಸ್ಕರ್ ಬಾರ್ಯ, ಉಜಿರೆ ಅಶೋಕ್ ಭಟ್, ಗೌರಿ ಸಾಸ್ತಾನ, ದುಗ್ಗಪ್ಪ ಮಲ್ಪೆ, ಡಾ. ಶ್ರೀಶೈಲ ಹುದ್ದಾರ್, ಅಶೋಕ್ ಮೋದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT