ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊದೆ ನಡುವೆ ಮರೆಯಾದ ಶೌಚಾಲಯ

Last Updated 16 ಅಕ್ಟೋಬರ್ 2012, 5:25 IST
ಅಕ್ಷರ ಗಾತ್ರ

ಲಿಂಗಸುಗೂರ(ಮುದಗಲ್ಲ): ತಾಲ್ಲೂಕಿನ ಮಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುದ್ದಿನ್ನಿ ಗ್ರಾಮದ ಕೆರೆಯ ಅನತಿ ದೂರದಲ್ಲಿ ತೆರೆದ ಮಹಿಳಾ ಶೌಚಾಲಯ ನಿರ್ಮಿಸಲಾಗಿದೆ. ಶೌಚಾಲವೇನೊ ಸುಸಜ್ಜಿತವಾಗಿದೆ.

ಆದರೆ ನಿರ್ಮಿಸಿದ ಶೌಚಾಲಯಕ್ಕೆ ದಾರಿಯಾವುದು ಎಂಬುದು ಮಹಿಳೆಯರಿಗೆ ದೋಚದೆ ಪುನಃ ರಸ್ತೆ, ತಿಪ್ಪೆಗುಂಡಿ, ಬಯಲನ್ನೆ ಶೌಚಾಲಯವನ್ನಾಗಿ ಬಳಕೆ ಮಾಡುವುದು ಅನಿವಾರ್ಯವಾಗಿದೆ ಎಂಬುದು ಗ್ರಾಮಸ್ಥರ ಆರೋಪ.

ಮಟ್ಟೂರು ಗ್ರಾಮ ಪಂಚಾಯಿತಿಯಲ್ಲಿ ಬುದ್ದಿನ್ನಿ ಗ್ರಾಮ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ. ಕೆಲ ವರ್ಷಗಳ ಹಿಂದೆ ಕಾಟಾಚಾರಕ್ಕೆಂದು ಮಹಿಳಾ ಶೌಚಾಲಯ ನಿರ್ಮಿಸಿ ಹಣ ಪಾವತಿಸಿಕೊಳ್ಳಲಾಗಿದೆ. ಆದರೆ, ಕಟ್ಟಿದ ಶೌಚಾಲಯ ಎಷ್ಟರ ಮಟ್ಟಿಗೆ ಬಳಕೆಯಾಗುತ್ತಿದೆ ಎಂಬುದರತ್ತ ಪ್ರತಿನಿಧಿಗಳು ಲಕ್ಷ್ಯ ವಹಿಸುತ್ತಿಲ್ಲ.

ಮುಳ್ಳುಕಂಟಿ, ಕಸ-ಹುಲ್ಲು ಬೆಳೆದು ಹುಳು-ಉಪ್ಪಡಿಗಳ ತಾಣವಾಗಿದ್ದರಿಂದ ಮಹಿಳೆಯರು ರಸ್ತೆ ಮತ್ತು ಬಯಲಿನಲ್ಲಿಯೆ ಬಹಿರ್ದೆಷೆಗೆ ತೆರಳುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT