ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರ: ಡಿ.ಸಿ. ಅಭಿಮತ

Last Updated 23 ಡಿಸೆಂಬರ್ 2013, 5:49 IST
ಅಕ್ಷರ ಗಾತ್ರ

ಕೋಲಾರ: ಸೈನಿಕರಿಗೆ ನೀಡಿರುವಂತೆ ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರ ನೀಡು­ವುದು ಅಗತ್ಯ ಎಂದು ಜಿಲ್ಲಾಧಿಕಾರಿ ಡಿ.ಕೆ.ರವಿ ಅಭಿಪ್ರಾಯಪಟ್ಟರು.

ನಗರ ಪೊಲೀಸ್ ಕವಾಯತು ಮೈದಾನ­ದಲ್ಲಿ ಭಾನುವಾರ ನಡೆದ ಜಿಲ್ಲಾ ಪೊಲೀಸ್ ಕ್ರೀಡಾಕೂಟ ಉದ್ಘಾ­ಟಿಸಿ ಮಾತನಾಡಿ, ಪೊಲೀಸರು ಈಗಲೂ ಬ್ರಿಟಿಷರ ಕಾಲದಲ್ಲಿ ನೀಡಲಾದ ಶಸ್ತ್ರಾಸ್ತ್ರ­ಗಳನ್ನೇ ಬಳಸುತ್ತಿದ್ದಾರೆ. ಆದರೆ ಸೈನಿಕರ ಕೈಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ­ಗಳಿವೆ. ಪ್ರಾಣದ ಹಂಗು ತೊರೆದು ಕಾನೂನು ಸುವಸ್ಯವಸ್ಥೆ ಕಾಪಾಡುವ ಪೊಲೀಸರಿಗೂ ಅಂಥ ಶಸ್ತ್ರಾಸ್ತ್ರ ನೀಡ­ಬೇಕು ಎಂದರು.

ಪೊಲೀಸರು ಕೆಲವು ಗಂಟೆಗಳ ಕಾಲ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿ­ದರೂ ಸಮಾಜದ ಶಾಂತಿಗೆ ಭಂಗ ಬರುತ್ತದೆ. ಕಾನೂನು ಉಲ್ಲಂಘನೆಯೂ ಮಿತಿ ಮೀರುತ್ತದೆ. ಹೀಗಾಗಿ ಪೊಲೀಸರ ಶ್ರಮ ಶ್ಲಾಘನೀಯ ಎಂದರು.

ನಾಗರಿಕ ಹಕ್ಕುಗಳ ಕುರಿತು ಜನರಲ್ಲಿ ಇರುವಷ್ಟು ಕಾಳಜಿ ನಾಗರಿಕ ಜವಾ­ಬ್ದಾರಿಗಳ ಕುರಿತು ಇಲ್ಲ. ಹೀಗಾಗಿಯೇ ನಗರದಲ್ಲಿ ಸಂಚಾರ ನಿಯಮಗಳನ್ನು ಜನ ಉಲ್ಲಂಘಿಸುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಂಥ ಸನ್ನಿವೇಶಗಳ ನಿಯಂತ್ರಣದ ಜವಾಬ್ದಾರಿ ಹೊತ್ತು ದಿನದ 24 ಗಂಟೆಯೂ ಕೆಲಸ ಮಾಡುವ ಪೊಲೀಸರಿಗೆ ಕ್ರೀಡಾ ಚಟುವಟಿಕೆಗಳು ಉಲ್ಲಾಸ ನೀಡುತ್ತವೆ. ಕ್ರೀಡಾ ಸ್ಪರ್ಧೆಗಳಲ್ಲಿ ಮಾತ್ರ ಆಸಕ್ತಿ ತೋರದೆ ಪೊಲೀಸರು ದಿನವೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸೆಪಟ್ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿ­ಷ್ಠಾಧಿಕಾರಿ ಐ.ಎಂ.ಜಮೀಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT