ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಂಟ್ ಇಲ್ಲದ ದಿನ

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು ಏಷ್ಯಾದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ, ಆಧುನಿಕ ಸಂವೇದನೆ, ಕಾಸ್ಮೋಪಾಲಿಟನ್ ಸಂಸ್ಕೃತಿ ಮೈಗೂಡಿಸಿಕೊಂಡಿರುವ ನಗರ ಎಂಬ ಸಂಗತಿ ಹಳೆಯದು. ಪ್ಯಾರಿಸ್, ನ್ಯೂಯಾರ್ಕ್ ಸ್ಟ್ರೀಟ್‌ಗಳಲ್ಲಿ ಕಂಡುಬರುವ ಫ್ಯಾಷನ್ ಟ್ರೆಂಡ್ ತಿಂಗಳಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತದೆ. ಹೊಸ ಗ್ಯಾಜೆಟ್, ಆಟೊಮೊಬೈಲ್ ಉತ್ಪನ್ನಗಳನ್ನು ಜನ ಕ್ಯೂ ನಿಂತು ಖರೀದಿಸುತ್ತಾರೆ ಅನ್ನೋದು ಹಳೆಯದೇ.

ಆದರೆ, ಫ್ಯಾಷನ್ ಜತೆ ಅಲ್ಲಿ ನಡೆಯುವ ಪ್ರತಿಭಟನೆಗಳು, ಪ್ರದರ್ಶನಗಳು, ವಿಚಿತ್ರ ನಡವಳಿಕೆಗಳೂ ಈಗ ಈ ನಗರದಲ್ಲಿ ಕಾಣಲಾರಂಭಿಸಿದೆ. ನ್ಯೂಯಾರ್ಕ್‌ನಲ್ಲಿ ಸ್ಲಟ್‌ವಾಕ್ ನಡೆದ ಎರಡು ತಿಂಗಳ ನಂತರ ಬೆಂಗಳೂರಿನಲ್ಲೂ ಸ್ಲಟ್‌ವಾಕ್ ಮಾಡುವುದಾಗಿ ಸಂಘಟನೆಯೊಂದು ಘೋಷಿಸಿತ್ತು. ಗ್ರೀನ್‌ಪೀಸ್ ಸದಸ್ಯರು ತಮ್ಮ ಜಾಗತಿಕ ಸಹವರ್ತಿಗಳಂತೆ ವಿಚಿತ್ರ ಪ್ರತಿಭಟನೆಗಳನ್ನು ಆಗಾಗ ಹಮ್ಮಿಕೊಳ್ಳುತ್ತಾರೆ.
ಭಾನುವಾರ ನಗರದ ಮೆಟ್ರೊ ರೈಲಿನಲ್ಲಿ ದಿಢೀರ್ ಆಗಿ ಕಾಣಿಸಿಕೊಂಡ 15 ಜನ ಪ್ಯಾಂಟಿಲ್ಲದ ಯುವಕರ ತಂಡವೊಂದು ಹೊಸ ಟ್ರೆಂಡ್‌ಗೆ ಚಾಲನೆ ನೀಡಿದೆ.

ನ್ಯೂಯಾರ್ಕ್‌ನಲ್ಲಿ 12 ವರ್ಷಗಳ ಹಿಂದೆ ಆರಂಭವಾಗಿದ್ದ `ನೋ ಪ್ಯಾಂಟ್ಸ್ ಸಬ್‌ವೇ ರೈಡ್~ನ ಹೊಸ ಅವತರಣಿಕೆ ಇದು. ಬರೀ ಬೆಂಗಳೂರಲ್ಲೇ ಅಲ್ಲ, 27 ದೇಶಗಳ 59 ನಗರಗಳಲ್ಲಿ ಆ ದಿನ  `ನೋ ಪ್ಯಾಂಟ್ಸ್ ಸಬ್‌ವೇ ಡೇ~ ಆಚರಿಸಲಾಯಿತು.

ಆದರೆ, ಮಾಧ್ಯಮಗಳು ಸೇರಿದಂತೆ ಹಲವರು ಇದನ್ನು `ನೋ ಪ್ಯಾಂಟ್ಸ್ ಡೇ~ ಎಂದೇ ಅರ್ಥೈಸಿಕೊಂಡರು.  `ನೋ ಪ್ಯಾಂಟ್ಸ್ ಡೇ~ ಆಚರಿಸುವುದು ಮೇ ತಿಂಗಳಲ್ಲಿ. 1985ರ ಸುಮಾರಿಗೆ ಟೆಕ್ಸಾಸ್ ವಿವಿಯಲ್ಲಿ ಮೊದಲು ಇದನ್ನು ಆಚರಿಸಲಾಯಿತು. ಪ್ರವಾಸಕ್ಕೆ ಹೋಗುವಾಗ ಎಲ್ಲ ಮರೆತು ಬೀಡುಬಿಸಾಳಾಗಿ ಇರಬೇಕು ಎಂಬ ದೃಷ್ಟಿಯಿಂದ ಈ ಆಚರಣೆ ಆರಂಭಿಸಲಾಗಿತ್ತು.

`ನೋ ಪ್ಯಾಂಟ್ಸ್ ಸಬ್‌ವೇ ಡೇ~ ಆರಂಭವಾದುದ್ದು ನ್ಯೂಯಾರ್ಕ್‌ನಲ್ಲಿ. ಅಲ್ಲಿನ ಪುಂಡು ಹುಡುಗರ ತಂಡವೊಂದು ಸಬ್‌ವೇ ರೈಲಿನಲ್ಲಿ ಪ್ಯಾಂಟಿಲ್ಲದೇ ಕಾಣಿಸಿಕೊಂಡು ಪ್ರಯಾಣಿಕರನ್ನು ಕಕ್ಕಾಬಿಕ್ಕಿಯಾಗಿಸಿತ್ತು. ತಮಗೆ ಪರಸ್ಪರ ಪರಿಚಯವೇ ಇಲ್ಲ ಎಂಬಂತೆ ಈ ತಂಡದ ಸದಸ್ಯರು ನಟಿಸಿದ್ದರು. ನಂತರ ಪ್ರತಿ ವರ್ಷ ಜನವರಿಯ ಮೊದಲ ವಾರ ಜಗತ್ತಿನ ಹಲವು ನಗರಗಳಲ್ಲಿ ಈ ಆಚರಣೆ ಸಾಮಾನ್ಯವಾಯಿತು. ಈ ವರ್ಷ ಇದೇ ಮೊದಲ ಬಾರಿ ಬೆಂಗಳೂರಿನಲ್ಲಿ ಈ ವಿಚಿತ್ರ ಆಚರಣೆ ನಡೆದಿದೆ.

ಇಂತಹ ಆಚರಣೆಗೆ ಕೊಂಡಿಯಾಗಿದ್ದು ಎಂದಿನಂತೆ ಟ್ವಿಟರ್ ಮತ್ತು ಫೇಸ್‌ಬುಕ್. ಯುವತಿಯರು ಸೇರಿದಂತೆ ಈ ಆಚರಣೆಯಲ್ಲಿ ಭಾಗಿಯಾಗುವುದಾಗಿ ಫೇಸ್‌ಬುಕ್‌ನಲ್ಲಿ ಪ್ರಾಮಿಸ್ ಮಾಡಿದ್ದ 100ಕ್ಕೂ ಹೆಚ್ಚು ಜನ ಕೊನೆ ಗಳಿಗೆಯಲ್ಲಿ ಕೈಕೊಟ್ಟರಂತೆ. ಕಡೆಗೆ 15 ಜನ ಯುವಕರು ಭಾನುವಾರ ಮೆಟ್ರೊ ರೈಲಿನ ಮೂರು ಬೋಗಿಗಳಲ್ಲಿ ಬಾಕ್ಸರ್ ಚಡ್ಡಿಗಳಲ್ಲಿ ಕಾಣಿಸಿಕೊಂಡರು. ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಏರಿದ್ದ ಈ ಯುವಕರನ್ನು ಮೆಟ್ರೊ ಪ್ರಯಾಣಿಕರು ಅಷ್ಟೇನೂ ಕುತೂಹಲದಿಂದ ನಿರುಕಿಸಲಿಲ್ಲವಂತೆ.

ಸಂಖ್ಯೆಯ ದೃಷ್ಟಿಯಿಂದ `ನೋ ಪ್ಯಾಂಟ್ಸ್ ಸಬ್‌ವೇ ಡೇ~ ಬೆಂಗಳೂರಿನಲ್ಲಿ ಯಶಸ್ವಿಯಾಗದೇ ಇರಬಹುದು. ಆದರೆ, ಈ ನಗರ ಜಾಗತಿಕ ಸಂವೇದನೆಗಳನ್ನು, ಆಚರಣೆಗಳನ್ನು ಹೇಗೆ ತನ್ನದಾಗಿಸಿಕೊಳ್ಳುತ್ತದೆ ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT