ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆಯ ಬಿಸಿ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ರಿಷಿಕಾ ಸಿಂಗ್ ಕೂಲಾಗಿಯೇ ಇದ್ದರು. ಬಷೀದ್ ನಿರ್ದೇಶನದ `ಯಾರಾದ್ರೆ ನನಗೇನು?~ ಚಿತ್ರದ ಮುಹೂರ್ತಕ್ಕೆ ತುಂಡುಡುಗೆ ತೊಟ್ಟು ಬಂದಿದ್ದ ಅವರ ಮುಖದಲ್ಲಿ ಹೂನಗೆ ಇತ್ತು.

ಮಂತ್ರೋಚ್ಚಾರಣೆ ನಡುವೆ ಕಂಠೀರವ ಸ್ಟುಡಿಯೋದಲ್ಲಿ ಸಿನಿಮಾದ ಮುಹೂರ್ತದ ಪೂಜೆ ನಡೆಯುತ್ತಿದ್ದರೆ, ಹೊರಗೆ ಜೋರು ಪ್ರತಿಭಟನೆಯ ಕೂಗು. ಮಹಿಳಾ ಸಂಘಟನೆಯೊಂದು ಚಿತ್ರದ ನಾಯಕಿ ರಿಷಿಕಾ ಸಿಂಗ್ ಸಿನಿಮಾಗಾಗಿ ನೀಡಿರುವ ಫೋಟೋಶೂಟ್ ಚಿತ್ರಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿತ್ತು. ಅವರಿಗೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲವಾದರೂ ಸಂಘಟನೆಯ ಕೂಗು ಇದ್ದಕ್ಕಿದ್ದಂತೆ ತಣ್ಣಗಾಯಿತು. ಆ ಬಗ್ಗೆ ಮಾತನಾಡಿದ ರಿಷಿಕಾ, `ಭಾವಚಿತ್ರದಲ್ಲಿ ಸ್ಕಿನ್ ಶೋ ಇದೆ ಎಂದು ಮಹಿಳಾ ಸಂಘಟನೆ ಹೇಳುತ್ತಿದೆ. ಆದರೆ ಎಲ್ಲಿದೆ ಸ್ಕಿನ್ ಶೋ~ ಎಂದು ಪ್ರಶ್ನಿಸಿದರು.

`ಮೇಕಪ್ ಮಾಡಿಕೊಂಡು ಡಾನ್ಸ್ ಮಾಡುವುದೇ ನಟನೆಯಲ್ಲ. ಇಂಥ ಹಾರ್ಡ್‌ವರ್ಕ್ ಅಗತ್ಯ ಇದೆ. ರಾಜಸ್ತಾನದ ಮರಳು ಗಾಡಿನಲ್ಲಿ, ಅದೂ ಉರಿಬಿಸಿಲಿನಲ್ಲಿ ಫೋಟೋಶೂಟ್ ಮಾಡಿದ್ದೇವೆ. ಎಷ್ಟು ಕಷ್ಟ ಇತ್ತು ಗೊತ್ತಾ?~ ಎಂದು ಉರಿದುಬಿದ್ದರು.

ಫೋಟೋ ಅಶ್ಲೀಲವಾಗಿರುವ ಬಗ್ಗೆ ಪ್ರಶ್ನಿಸಿದವರಿಗೆ `ನನ್ನ ಅಮ್ಮ ಒಪ್ಪಿದ ಮೇಲೆ ಯಾರ ಒಪ್ಪಿಗೆಯೂ ನನಗೆ ಬೇಕಾಗಿಲ್ಲ. ನನ್ನ ಕುಟುಂಬ ನನ್ನ ಬೆಂಬಲಕ್ಕೆ ಇರುವಾಗ ನಾನು ಯಾರಿಗೂ ಅಂಜಬೇಕಿಲ್ಲ~ ಎಂದು ಘೋಷಿಸಿ ತಣ್ಣಗೇ ಪ್ರಶ್ನೆಗಳನ್ನು ಎದುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT