ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮುಖರಿಂದ ನಾಮಪತ್ರ ಸಲ್ಲಿಕೆ

Last Updated 18 ಏಪ್ರಿಲ್ 2013, 12:54 IST
ಅಕ್ಷರ ಗಾತ್ರ

ಬೆಳಗಾವಿ: ಈಗಾಗಲೇ ನಾಮಪತ್ರವನ್ನು ಸಲ್ಲಿಸಿರುವ ಹಲವು ಪಕ್ಷಗಳ ಮುಖಂಡರು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾಗಿದ್ದ ಬುಧವಾರದಂದು ಮುಂಜಾಗ್ರತೆಗಾಗಿ ಪುನಃ ಬಿ ಫಾರ್ಮ್‌ನೊಂದಿಗೆ ನಾಮಪತ್ರವನ್ನು ಸಲ್ಲಿಸಿದರು.

ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಶಾಸಕ ಫಿರೋಜ್ ಸೇಠ್, ಬಿ.ಎಸ್.ಆರ್. ಕಾಂಗ್ರೆಸ್‌ನಿಂದ ಮಾಜಿ ಶಾಸಕ ರಮೇಶ ಕುಡಚಿ, ಬಿಜೆಪಿಯಿಂದ ಕಿರಣ ಜಾಧವ, ಲೋಕಸತ್ತ ಪಕ್ಷದಿಂದ ನಾಗೇಶ ವಿಲಾಸ ಸಾಖರೆ ನಾಮಪತ್ರ ಸಲ್ಲಿಸಿದರು.

ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಾಸಕ ಅಭಯಕುಮಾರ ಭರಮಗೌಡಾ ಪಾಟೀಲ, ಕಾಂಗ್ರೆಸ್‌ನಿಂದ ಅನಿಲ್ ಮೋಹನರಾವ ಪೋತದಾರ, ಎಂಇಎಸ್ ಬೆಂಬಲಿತ ಪಕ್ಷೇತರರಾಗಿ ಸಂಭಾಜಿ ಲಕ್ಷ್ಮಣ ಪಾಟೀಲ ನಾಮಪತ್ರ ಸಲ್ಲಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಲಕ್ಷ್ಮಿ ಹೆಬ್ಬಾಳಕರ, ಪಕ್ಷೇತರರಾಗಿ ಆನಂದಸ್ವಾಮಿ ಗಡ್ಡದೇವರಮಠ, ಮಾಜಿ ಶಾಸಕ ಮನೋಹರ ಕಿಣೇಕರ ನಾಮಪತ್ರ ಸಲ್ಲಿಸಿದರು.

ತಾವು ಸಲ್ಲಿಸಿದ ನಾಮಪತ್ರ ತಿರಸ್ಕೃತಗೊಂಡರೆ, ಪರ್ಯಾಯವಾಗಿ ನಿಲ್ಲಿಸಲು ಅನುಕೂಲ ಆಗುವಂತೆ ಪಕ್ಷದ ಅಭ್ಯರ್ಥಿಗಳು ತಮ್ಮ ಪತ್ನಿ, ಪುತ್ರ, ಸಹೋದರರಿಂದಲೂ ನಾಮಪತ್ರ ಸಲ್ಲಿಸಿರುವುದು ಕಂಡು ಬಂತು.

ಚಿಕ್ಕೋಡಿ 11 ನಾಮಪತ್ರ ಸಲ್ಲಿಕೆ
ಚಿಕ್ಕೋಡಿ: ಮೇ 5 ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಬಯಸಿ ಬುಧವಾರ ಚಿಕ್ಕೋಡಿ- ಸದಲಗಾ ಮತಕ್ಷೇತ್ರದಿಂದ 11 ಅಭ್ಯರ್ಥಿಗಳು ಒಟ್ಟು 12 ನಾಮಪತ್ರಗಳನ್ನು ಹಾಗೂ ನಿಪ್ಪಾಣಿ ಕ್ಷೇತ್ರದಿಂದ 12 ಅಭ್ಯರ್ಥಿಗಳು 14 ನಾಮಪತ್ರಗಳನ್ನು ಸಲ್ಲಿಸಿದರು.

ಚಿಕ್ಕೋಡಿ-ಸದಲಗಾ:  ಪ್ರಕಾಶ ಬಾಬಣ್ಣ ಹುಕ್ಕೇರಿ (ಕಾಂಗ್ರೆಸ್), ರಾಮಗೌಡ ಈರಗೌಡ ಪಾಟೀಲ (ಕೆಜೆಪಿ), ಕಲಗೌಡ ಬಾಬು ಕಳಸಪ್ಪಗೋಳ (ಪಕ್ಷೇತರ), ಭೀಮಪ್ಪ ಬಸಪ್ಪ ನೇರ್ಲಿ (ಪಕ್ಷೇತರ), ಮೋಹನ ಗುರಪ್ಪ ಮೋಟನ್ನವರ (ಪಕ್ಷೇತರ), ಬಾಹುಬಲಿ ಶಾಮಗೌಡ ಪಾಟೀಲ (ಪಕ್ಷೇತರ), ಸಿದ್ದಪ್ಪ ಶಂಕರ ಇಟ್ನಾಳ (ಬಿಎಸ್‌ಆರ್ ಕಾಂಗ್ರೆಸ್), ಸ್ವಾಭಿಮಾನಿ ಶೇತ್ಕರಿ ಸಂಘಟನೆ ಬೆಂಬಲಿತ ರಾಜು ಸಂಭಾ ಕಮತೆ (ಪಕ್ಷೇತರ) ಅಣ್ಣಪ್ಪ ಮಾರುತಿ ಮಗದುಮ್ಮ (ಜೆಡಿಎಸ್), ಅಪ್ಪಾಸಾಹೇಬ ಶ್ರೀಪತಿ ಕುರಣೆ (ಲೋಕಜನ ಶಕ್ತಿ ಪಾರ್ಟಿ), ಭೀಮಗೌಡ ಶಂಕರ ಖೋತ (ಜೆಡಿಯು).

ನಿಪ್ಪಾಣಿ 12 ನಾಮಪತ್ರ
ನಿಪ್ಪಾಣಿ: ಸುಂದರ ಬಾಬಾಸಾಬ ಪಾಟೀಲ ( ಬಿಎಸ್‌ಆರ್ ಕಾಂಗ್ರೆಸ್), ಚಂದ್ರಕಾಂತ ಬಶೆಟ್ಟಿ ಕುರಬೆಟ್ಟಿ (ಪಕ್ಷೇತರ), ಅಣ್ಣಾಸಾಹೇಬ ಶಂಕರ ಜೊಲ್ಲೆ (ಬಿಜೆಪಿ), ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ (ಬಿಜೆಪಿ), ಬಾಬಾಸಾಹೇಬ ಬಾಳಗೌಡ ದೇಸಾಯಿ (ಪಕ್ಷೇತರ), ರಾಮಚಂದ್ರ ಅಪ್ಪಣ್ಣ ಪೂಜಾರಿ (ಸ್ವತಂತ್ರ), ಕಾಂತಿಲಾಲ ಮಗನಲಾಲ್ ರಾಥೋಡ (ಪಕ್ಷೇತರ), ಸಹೀದ್ ಜಾಕೀರಹುಸೇನ್ ಖಾದರಿ (ಪಕ್ಷೇತರ), ವಿನಾಯಕ ಸದಾಶಿವ ಕುಲಕರ್ಣಿ (ಪಕ್ಷೇತರ), ಜಯವಂತ ಪರಶುರಾಮ ಮಿರಜಕರ (ಪಕ್ಷೇತರ), ಜಿತೇಂದ್ರ ಸುಭಾಷ ನೇರ್ಲೆ (ಪಕ್ಷೇತರ), ಭರತೇಶ ಬಾಳಾಸಾಬ ಕುಪ್ಪಾನಟ್ಟಿ (ಪಕ್ಷೇತರ).

ಖಾನಾಪುರ: 17 ನಾಮಪತ್ರ
ಖಾನಾಪುರ: 2008ರ ಚುನಾವಣೆಯಲ್ಲಿ 23 ಅಭ್ಯರ್ಥಿಗಳು ಸ್ಪರ್ಧಿಸುವ ಮೂಲಕ ಸುದ್ದಿಯಲ್ಲಿದ್ದ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಇದೇ ಮೇ 5ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಒಟ್ಟು 17 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ ವಿವಿಧ ಪಕ್ಷಗಳೂ ಸೇರಿದಂತೆ 10 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಆಯ್ಕೆ ಬಯಸಿ ಒಟ್ಟು 17 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದಂತಾಗಿದೆ.

ಕಾಂಗ್ರೆಸ್‌ನಿಂದ ರಫೀಕ್ ಖಾನಾಪುರಿ, ಬಿಜೆಪಿಯಿಂದ ಶಾಸಕ ಪ್ರಹ್ಲಾದ ರೇಮಾಣಿ ಹಾಗೂ ಎನ್‌ಸಿಪಿಯಿಂದ ಅಲಿಂಅಖ್ತರ್ ನಾಯ್ಕ, ಜೆಡಿಎಸ್‌ನಿಂದ ನಾಸೀರ್ ಬಾಗವಾನ, ಜೆಡಿಯುನಿಂದ ರಾಜು ಖಾತೇದಾರ, ಬಿಎಸ್ಸಾರ್ ಕಾಂಗ್ರೆಸ್ ಪಕ್ಷದಿಂದ ನಾಗರಾಜ ಶೀಲವಂತ, ಕೆಜೆಪಿಯಿಂದ ಬಾಬುರಾವ್ ದೇಸಾಯಿ ನಾಮಪತ್ರ ಸಲ್ಲಿಸಿದರು.

ಇವರಲ್ಲದೆ ಯಶವಂತ ನಿಪ್ಪಾಣಿಕರ, ಸೋಮನಿಂಗ ಧಬಾಲೆ, ಅಂಥೋನ್ ಮೆಂಡೆನ್ಸಾ, ವಿಠ್ಠಲ ಹಲಗೇಕರ, ಸುರೇಶ ದೇಸಾಯಿ, ಅರವಿಂದ ಪಾಟೀಲ, ನಾಗಪ್ಪ ಪಾಟೀಲ, ನಾರಾಯಣ ಮಯೇಕರ, ಅಂಜಲಿ ನಿಂಬಾಳ್ಕರ, ರಾಜಗೋಪಾಲ ಪಾಟೀಲ ಅವರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇವರಲ್ಲಿ ಒಬ್ಬರು ಎಂಇಎಸ್ ಬೆಂಬಲಿತ ಅಭ್ಯರ್ಥಿಯಾದರೆ, ಮತ್ತೊಬ್ಬರು ಕಾಂಗ್ರೆಸ್ ಬಂಡಾಯ, ಮೂವರು ಎಂಇಎಸ್ ಬಂಡಾಯ ಅಭ್ಯರ್ಥಿಗಳಿದ್ದಾರೆ.

ಕಿತ್ತೂರು: 11ನಾಮಪತ್ರ
ಚನ್ನಮ್ಮನ ಕಿತ್ತೂರು: ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ಕಿತ್ತೂರು ವಿಧಾನಸಭೆ ಕ್ಷೇತ್ರಕ್ಕೆ 11 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಜೆಡಿಎಸ್ ಅಭ್ಯರ್ಥಿಯಾಗಿ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಮತ್ತು ಕೆಜೆಪಿಯಿಂದ ಸಂಗೊಳ್ಳಿ ಜಿ.ಪಂ. ಸದಸ್ಯ ಬಿ.ಸಿ. ಪಾಟೀಲ ಅವರು ಚುನಾವಣಾಧಿಕಾರಿ ಎ.ಬಿ. ಪರಡ್ಡಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಸೋಮವಾರ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ. ಬಿ. ಇನಾಮದಾರ ಮತ್ತು ಬಿಜೆಪಿ ಅಭ್ಯರ್ಥಿ ಸುರೇಶ ಮಾರಿಹಾಳ ಅವರ ಪರವಾಗಿ ಮತ್ತೊಂದು ನಾಮಪತ್ರ ಸಲ್ಲಿಸಲಾಯಿತು.

ಉಳಿದಂತೆ ಯಮನಪ್ಪ ತಳವಾರ (ಹಾಲಗಿಮರಡಿ ಗ್ರಾಮ)-ಬಿಎಸ್‌ಪಿ ಕಾಂಗ್ರೆಸ್ , ಕಸ್ತೂರಿ ಬಸನಾಯ್ಕ ಬಾವಿ (ಹಣ್ಣಿಕೇರಿ)- ಪಕ್ಷೇತರ, ಅಶೋಕ ಕಂಬಿ (ಗದ್ದಿಕರವಿನಕೊಪ್ಪ)- ಬಿಎಸ್‌ಆರ್ ಕಾಂಗ್ರೆಸ್, ಬಸವರಾಜ ರುದ್ರಪ್ಪ ಮೊಕಾಶಿ (ನಾವಲಗಟ್ಟಿ)- ಸರ್ವೋದಯ ಪಕ್ಷ, ಮಹೇಶ ನಿಂಗಪ್ಪ ಹುದಲಿ (ಪಟ್ಟಿಹಾಳ ಕೆ.ಎಸ್)- ಪಕ್ಷೇತರ , ಶೇಖರ ಕಾಲಗೇರಿ (ತುಮ್ಮರಗುದ್ದಿ)- ಪಕ್ಷೇತರ . ಚಂದ್ರಶೇಖರ ಬಡಿಗೇರ (ಹಿರೇನಂದಿಹಳ್ಳಿ)- ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಪೂಜಾರಿ ನಾಮಪತ್ರ ಸಲ್ಲಿಕೆ
ಗೋಕಾಕ: ಗೋಕಾಕ ವಿಧಾನಸಭಾ ಮತಕ್ಷೇತ್ರದಿಂದ ಜೆಡಿಎಸ್ ಉಮೇದುವಾರರಾಗಿ ಅಶೋಕ ನಿಂಗಯ್ಯ ಪೂಜಾರಿ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮೊದಲು ಅವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣವೃತ್ತದಿಂದ ಸಹಸ್ರಾರು ಬೆಂಬಲಿಗರೊಂದಿಗೆ ಬಸವೇಶ್ವರ ವೃತ್ತ ಮಾರ್ಗವಾಗಿ ಬೃಹತ್ ಮೆರವಣಿಗೆ ಮೂಲಕ ಮಿನಿ ವಿಧಾನಸೌಧದತ್ತ ಹೆಜ್ಜೆ ಹಾಕಿದರು.

ಮೆರವಣಿಗೆಯಲ್ಲಿ ಎಲ್.ಬಿ.ಹುಳ್ಳೇರ, ಶಾಮಾನಂದ ಪೂಜೇರಿ ಪಾಲ್ಗೊಂಡಿದ್ದರು.

ಯಮಕನಮರಡಿ: 10 ನಾಮಪತ್ರ
ಹುಕ್ಕೇರಿ: ತಾಲ್ಲೂಕಿನ ಯಮಕನಮರಡಿ (ಎಸ್‌ಟಿ) ಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆ ಬಯಸಿ ಬುಧವಾರ  ಕೆಜೆಪಿಯಿಂದ ಯಲಗೊಂಡ ಶಿವನಾಯ್ಕ ನಾಯಕ, ಜೆಡಿಯು ಪಕ್ಷದಿಂದ ಸಣರಾಮ ಸಿದ್ದಪ್ಪ ನಾಯಕ, ಬಿಜೆಪಿಯಿಂದ ಶಿವಾನಂದ ಮಸಗುಪ್ಪಿ, ಪರಶುರಾಮ ನಾಯಕ, ಲಗಮಣ್ಣ ಲೆಂಕನ್ನವರ, ಮಾರುತಿ ಅಷ್ಟಗಿ, ಬಸವರಾಜ ಹುಂದರಿ, ಪಕ್ಷೇತರರಾಗಿ ಬಸವರಾಜ ಪೂಜೇರಿ, ರಜನೀಶ ಆಚಾರ್ಯ, ಬಸವರಾಜ ಸಾಯನ್ನವರ  ನಾಮಪತ್ರ ಸಲ್ಲಿಸಿದ್ದಾರೆಂದು ಚುನಾವಣಾಧಿಕಾರಿ ಶಶಿಧರ ಬಗಲಿ ತಿಳಿಸಿದ್ದಾರೆ.  ಕೆ.ಕೆ.ಚವ್ಹಾಣ ಉಪಸ್ಥಿತರಿದ್ದರು.

ರಾಮದುರ್ಗ: 6 ನಾಮಪತ್ರ
ರಾಮದುರ್ಗ: ರಾಮದುರ್ಗ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು 6 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ರಮೇಶ ಹಳ್ಳಿ ಮೆರವಣಿಗೆಯಲ್ಲಿ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಸಿದರು. ಮಲ್ಲೇಶಿ ಶಿವಲಿಂಗಪ್ಪ ಯಾದವಾಡ (ಬಿಜೆಪಿ), ಶಾಸನಗೌಡ ಸಿದ್ದನಗೌಡ ಪಾಟೀಲ (ಜೆಡಿಎಸ್), ಭರತ್ ಪರಗೌಡ ಪಾಟೀಲ (ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ), ವಿನಯ ದತ್ತಾತ್ರೇಯ ಜೋಶಿ ಮತ್ತು ಸುರೇಖಾ ಭೀರಪ್ಪ ಮಿಡಕನಟ್ಟಿ (ಇಬ್ಬರೂ ಪಕ್ಷೇತರರು) ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT