ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಮೇಲೆ ವಿದೇಶಿಯರ `ಕಣ್ಣು'

Last Updated 13 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಧಾರವಾಡ: `ಧಾರವಾಡ ಓಪನ್' ಟೆನಿಸ್ ಟೂರ್ನಿಯ ಮೇಲೆ ಕಣ್ಣಿಟ್ಟಿರುವ ವಿದೇಶಿ ಆಟಗಾರರು, ಈ ಬಾರಿಯೂ ಪ್ರಶಸ್ತಿ ಎತ್ತಿಹಿಡಿಯುವ ಮೂಲಕ ಹ್ಯಾಟ್ರಿಕ್ ಸಾಧಿಸುವ ಯತ್ನದಲ್ಲಿದ್ದಾರೆ.ಇಲ್ಲಿನ ರಾಜಾಧ್ಯಕ್ಷ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ಟೆನಿಸ್ ಟೂರ್ನಿ ನಡೆಯುತ್ತಿರುವುದು ಮೂರನೇ ಬಾರಿ.

2003ರ ಅಕ್ಟೋಬರ್‌ನಲ್ಲಿ ಇದೇ ಅಂಕಣದಲ್ಲಿ ನಡೆದ ಎಟಿಪಿ ಚಾಲೆಂಜರ್‌ನಲ್ಲಿ ಥಾಯ್ಲೆಂಡ್‌ನ ಅಗ್ರ ಶ್ರೇಯಾಂಕದ ಆಟಗಾರ ಡೇನ್ ಉದೊಮ್‌ಚೊಕ್ ಸಿಂಗಲ್ಸ್ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ 25,000 ಡಾಲರ್ ಮೊತ್ತದ ಪ್ರಶಸ್ತಿ ಜೇಬಿಗಿಳಿಸಿದ್ದರು. ಆದರೆ 2006ರ ಏಪ್ರಿಲ್‌ನಲ್ಲಿ ನಡೆದ ಎಟಿಪಿ ಟೂರ್ನಿಯ ಮೊದಲ ಸುತ್ತಿನಲ್ಲೇ ಉದೊಮ್‌ಚೊಕ್ ಪರಾಭವಗೊಂಡಿದ್ದರು. ಆ ವರ್ಷ ಸರ್ಬಿಯಾದ ಆಟಗಾರ ವಿಕ್ಟರ್ ಟ್ರೊಕ್ಸಿ ಪ್ರಶಸ್ತಿ ಎತ್ತಿಹಿಡಿದಿದ್ದರು.

ಈ ಬಾರಿಯ ಐಟಿಎಫ್ ಟೂರ್ನಿಯಲ್ಲಿ ಒಟ್ಟು 8 ವಿದೇಶಿ ಆಟಗಾರರು ಪಾಲ್ಗೊಂಡಿದ್ದಾರೆ. ಹಾಲೆಂಡ್, ಅಮೆರಿಕಾ ಹಾಗೂ ರಷ್ಯಾದಿಂದ ತಲಾ ಇಬ್ಬರು ಆಟಗಾರರು ಹಾಗೂ ರಷ್ಯಾದಿಂದ ಒಬ್ಬ ಆಟಗಾರ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT