ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪ್ರಾಚೀನ ಕಾಲದಲ್ಲಿ ಸಾಹಿತ್ಯ, ಇತಿಹಾಸ ಒಂದೇ'

Last Updated 4 ಏಪ್ರಿಲ್ 2013, 7:19 IST
ಅಕ್ಷರ ಗಾತ್ರ

ಸಿದ್ದಾಪುರ: `ಪ್ರಾಚೀನ ಕಾಲದಲ್ಲಿ ಸಾಹಿತ್ಯ ಮತ್ತುಇತಿಹಾಸ ಬೇರೆ ಬೇರೆ ಆಗಿರಲಿಲ್ಲ. ಐರೋಪ್ಯ ರಾಷ್ಟ್ರಗಳಲ್ಲಿ ಇತಿಹಾಸ ಮತ್ತು ಸಾಹಿತ್ಯವನ್ನು ಬೇರೆ ಮಾಡುವ ವಿಚಾರ ಆರಂಭವಾಯಿತು' ಎಂದು ಹಿರಿಯ ಇತಿಹಾಸ ವಿದ್ವಾಂಸ ಡಾ.ಎ.ಕೆ.ಶಾಸ್ತ್ರಿ ಅಭಿಪ್ರಾಯಪಟ್ಟರು.

ಭುವನಗಿರಿಯ ಭುವನೇಶ್ವರಿ ದೇವಾಲಯದ ಆಡಳಿತ ಮಂಡಳಿ ಮತ್ತು ಕಸಾಪ ತಾಲ್ಲೂಕು ಘಟಕದ ಆಶ್ರಯದಲ್ಲಿ ತಾಲ್ಲೂಕಿನ ಭುವನಗಿರಿಯಲ್ಲಿ ಶನಿವಾರ ಏರ್ಪಡಿಸಿದ್ದ `ಶತಮಾನದ ಗತಿಬಿಂಬಗಳು'(ಅತ್ತಿಮುರುಡು ವಿಶ್ವೇಶ್ವರ ಅವರ ಸಂಶೋಧನಾ ಬರಹಗಳ ಸಂಗ್ರಹ, ಪ್ರಕಾಶಕರು-ಬೆಂಗಳೂರಿನ ಅಕ್ಷಯ ಪ್ರಕಾಶನ)ಕೃತಿಯ ಲೋಕಾರ್ಪಣೆಯ ಸಮಾರಂಭದಲ್ಲಿ ಅವರು ಮಾತನಾಡಿದರು.

`ಜನರಲ್ಲಿ ಒಳ್ಳೆಯ ಅಭಿರುಚಿ ಬೆಳೆಸುವಲ್ಲಿ ನಾವು ಸೋತಿದ್ದೇವೆ. ಗ್ರಂಥ ರಚನೆ ಮಾಡಿದಾಗ ಅದನ್ನು ಆಸಕ್ತರು ಓದದಿದ್ದರೆ ಗ್ರಂಥಕರ್ತನ ಶ್ರಮ ವ್ಯರ್ಥವಾಗುತ್ತದೆ. ಗ್ರಂಥಗಳಿಗೆ ಓದುಗರಿಂದ ಸ್ಪಂದನ ಬಾರದಿದ್ದರೆ ಲೇಖಕನಿಗೆ ನೋವುಂಟಾಗುತ್ತದೆ'  ಎಂದರು.

ಭುವನಗಿರಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎಸ್.ಹೆಗಡೆ ಸಾತನಕೇರಿ ಕಾರ್ಯಕ್ರಮ ಉದ್ಘಾಟಿಸಿದರು. ಕೃತಿಕಾರ ಅತ್ತಿಮುರುಡು ವಿಶ್ವೇಶ್ವರ ಹೆಗಡೆ, ಲೇಖಕ ಕಾಶ್ಯಪ ಪರ್ಣಕುಟಿ ಉಪಸ್ಥಿತರಿದ್ದರು.

ಪ್ರಾಧ್ಯಾಪಕ ಲಕ್ಷ್ಮೀಶ ಹೆಗಡೆ ಸೋಂದಾ ಕೃತಿ ಪರಿಚಯ ಮಾಡಿದರು.ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಅಧ್ಯಕ್ಷತೆ ವಹಿಸಿದ್ದರು.ಶೇಷಗಿರಿ ಭಟ್ಟ ಗುಂಜಗೋಡು ಸ್ವಾಗತಿಸಿದರು. ಗಣಪತಿ ಹೆಗಡೆ ಗುಂಜಗೋಡು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT