ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಾಲನೆ

ಪಡುಬಿದ್ರಿ: ಯುಪಿಸಿಎಲ್‌ನಿಂದ 18 ಲಕ್ಷ ರೂಪಾಯಿ ಅನುದಾನ
Last Updated 13 ಡಿಸೆಂಬರ್ 2012, 9:44 IST
ಅಕ್ಷರ ಗಾತ್ರ

ಪಡುಬಿದ್ರಿ: ಸಾಮಾಜಿಕ ಅಭಿವೃದ್ಧಿ ಯೋಜನೆಯಡಿ ಯುಪಿಸಿಎಲ್ ಕಂಪೆನಿಯು ನೀಡಿದ 18 ಲಕ್ಷ ರೂ. ವೆಚ್ಚದ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ  ನವೀಕರಣ ಕಾಮಗಾರಿಗೆ ಬುಧವಾರ ಚಾಲನೆ ನೀಡಲಾಯಿತು.

ಯುಪಿಸಿಎಲ್ ಉಷ್ಣ ವಿದ್ಯುತ್ ಯೋಜನೆಯಿಂದ ಆಸುಪಾಸಿನ ಗ್ರಾಮಗಳ ಆರೋಗ್ಯ ಸಂಬಂಧಿ ವಿವಿಧ ಯೋಜನೆಗಳಿಗೆ  94 ಲಕ್ಷ ರೂ ರೂ. ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ 18 ಲಕ್ಷ ರೂ. ವೆಚ್ಚದ ಈ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ ಹಾಗೂ ಗ್ರಾ.ಪಂ. ಅಧ್ಯಕ್ಷೆ ವಿಜಯಲಕ್ಷ್ಮಿ ಆಚಾರ್ಯ ಗುದ್ದಲಿಪೂಜೆ ನೆರವೇರಿಸಿದರು.

ಆಸ್ಪತ್ರೆಯ ಶವಾಗಾರ ನವೀಕರಣ, ಶೌಚಾಲಯ ನಿರ್ಮಾಣ, ಕಿಟಕಿ ಬಾಗಿಲು ದುರಸ್ತಿ, ಪೇಂಟಿಂಗ್, ಮಾಡು ರಿಪೇರಿ, ಇಂಟರ್‌ಲಾಕ್, ಮೀಟಿಂಗ್ ಹಾಲ್ ನಿರ್ಮಾಣ,  ನಿರೀಕ್ಷಣಾ ಕೊಠಡಿ, ಹೊರ ರೋಗಿ ವೇಟಿಂಗ್ ರೂಂ ಇತ್ಯಾದಿ ಕಾಮಗಾರಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಪಡುಬಿದ್ರಿ ಆಸ್ಪತ್ರೆ ನವೀಕರಣಕ್ಕೆ ಇನ್ನೂ ಹೆಚ್ಚಿನ  ಅನುದಾನ  ನೀಡಲಾಗುವುದು ಎಂದು ಯುಪಿಸಿಎಲ್ ಮಾನವ ಸಂಪನ್ಮೂಲ ಡಿಜಿಎಂ ಕೆ. ನಾಗರಾಜ್ ಹೇಳಿದರು.

ಹಿರಿಯ ವ್ಯವಸ್ಥಾಪಕ ಸುದರ್ಶನ್ ಪ್ರಸಾದ್, ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ವರದಾಕ್ಷಿ ಸಾಲ್ಯನ್, ತೆಂಕ ಗ್ರಾ.ಪಂ. ಅಧ್ಯಕ್ಷೆ ಜಯಶ್ರಿ ಪೂಜಾರಿ, ಬಡಾ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್ ಕೋಟ್ಯಾನ್, ಪಡುಬಿದ್ರಿ ಗ್ರಾ.ಪಂ. ಮಾಜಿ ಅಧ್ಯಕ್ಷ ಮಿಥುನ್ ಆರ್.ಹೆಗ್ಡೆ, ಸದಸ್ಯರಾದ  ವಿಜಯ ಎಂ.ಅಮೀನ್, ಶ್ರಿನಿವಾಸ ಶರ್ಮ, ಶೋಭಾ, ಗುತ್ತಿಗೆದಾರ ದಿನೇಶ್ ಕಾಮತ್, ಉದಯಶಂಕರ್ ಕಾಮತ್, ವೈದ್ಯಾಧಿಕಾರಿ ಡಾ.ಬಿ.ಬಿ.ರಾವ್ ಇದ್ದರು.

`ಸ್ಥಳೀಯರಿಗೆ ಉದ್ಯೋಗ ನೀಡಿ'

ಪಡುಬಿದ್ರಿ: ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗ  ದೊರಕಿಸಿ ಕೊಡಬೇಕೆಂದು ತಾ.ಪಂ. ಸದಸ್ಯ ಭಾಸ್ಕರ್ ಪಡುಬಿದ್ರಿ ಆಗ್ರಹಿಸಿದರು.

ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುಪಿಸಿಎಲ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಯೋಜನೆಗಾಗಿ ಸ್ಥಳೀಯರು ಜಾಗ ನೀಡಿ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ ಸಂತ್ರಸ್ತರಿಗೆ ಆರಂಭದಲ್ಲಿ ಉದ್ಯೋಗ ನೀಡುವ ಭರವಸೆ ನೀಡಿದ್ದರೂ ಇದೀಗ ಕಂಪೆನಿ ಮೌನವಾಗಿದೆ. ಈ ತನಕ ಹೊರ ರಾಜ್ಯದ ಕಾರ್ಮಿಕರೇ ಅಧಿಕವಿದ್ದು, ಆಸುಪಾಸಿನ ಗ್ರಾಮಗಳ ವಿದ್ಯಾವಂತ ನಿರುದ್ಯೋಗಿಗಳಿಗೆ ಆಶ್ರಯದಾತರಾಗಬೇಕು ಎಂದು ಮನವಿ ಅರ್ಪಿಸಿದರು.

ಸರ್ಕಾರದ ಆದೇಶದಂತೆ ಸ್ಥಾವರದಲ್ಲಿ ಶೇ.80ರಷ್ಟು ಸ್ಥಳಿಯರನ್ನೇ ನಿಯೋಜಿಸುವ ಕಾರ್ಯ ಮುಂದುವರಿದಿದೆ. ಆಸುಪಾಸಿನ ಶಿಕ್ಷಣ ಸಂಸ್ಥೆ ಗಳಿಂದಲೇ ಅಭ್ಯರ್ಥಿಗಳನ್ನು  ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಯುಪಿಸಿಎಲ್ ಎಚ್‌ಆರ್ ಡಿಜಿಎಂ ಕೆ. ನಾಗರಾಜ್ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT