ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಥಮಿಕ ಹಂತದಿಂದ ಕ್ರೀಡೆಯನ್ನು ಪ್ರೋತ್ಸಾಹಿಸಿ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದೇವನಹಳ್ಳಿ:`ಮಕ್ಕಳ ಇಚ್ಛೆಪಡುವ ಕ್ರೀಡೆಗಳನ್ನು ಪ್ರಾಥಮಿಕ ಹಂತದಿಂದಲೇ ಪ್ರೋತ್ಸಾಹ ನೀಡಿದರೆ ಆ ಮಕ್ಕಳು ಉನ್ನತ ಮಟ್ಟಕ್ಕೆ ಬೆಳೆಯಬಲ್ಲರು~ ಎಂದು ವೇಣುಗೋಪಾಲ ಸ್ವಾಮಿ ಒಳಾಂಗಣ ಕ್ರೆಡಾಂಗಣ ಸಂಘ ಮಾಜಿ ಅಧ್ಯಕ್ಷ ಎಸ್.ಗೋಪಾಲ್ ತಿಳಿಸಿದರು.

ಪಟ್ಟಣದ ವೇಣುಗೋಪಾಲ ಸ್ವಾಮಿ ಒಳಾಂಗಣ ಕ್ರೆಡಾಂಗಣದಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ದೇವನಹಳ್ಳಿ ಒಳಾಂಗಣ ಕ್ರೆಡಾ ಸಂಘ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಯೋನೆಕ್ಸ್ ಸನ್‌ರೈಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ 2011ರ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಕುಟುಂಬವೊಂದು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ. ಕುಟುಂಬದ ಎಲ್ಲ ಸದಸ್ಯರ ಆರೋಗ್ಯ ಮಟ್ಟದಲ್ಲಿ ಸುಧಾರಣೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆವಹಿಸಿ ಮಾತನಾಡಿದ ಒಳಾಂಗಣ ಕ್ರೆಡಾ ಸಂಘ ಅಧ್ಯಕ್ಷ ಡಾ. ಸಿ.ಮುನಿವೆಂಕಟಪ್ಪ, `ಮಕ್ಕಳು ಇಷ್ಟಪಡುವ ಕ್ರೆಡೆಗಳಿಗೆ ಹೆಚ್ಚು ಒತ್ತು ನೀಡುವುದು ಸೂಕ್ತ . ಇತರೆ ಕ್ರೆಡೆಗಳ ಬಗ್ಗೆ ಒತ್ತಡ ತರುವುದು ಸರಿಯಲ್ಲ. ಆಟೋಟಗಳ ಅಗತ್ಯಕ್ಕೆ ಅನುಗುಣವಾಗಿ ಉತ್ತಮ ದೇಶಿಯ ಷೌಷ್ಠಿಕಾಂಶಯುಕ್ತ ಆಹಾರ ನೀಡಬೇಕು.

ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಕ್ರೆಡೆಗಳು ಹೆಚ್ಚು ಬೆಳವಣಿಗೆ ಆಗುತ್ತಿದ್ದರೂ ದೇಶೀಯ ಕ್ರೆಡೆಗಳಿಗೆ ಹೆಚ್ಚು ಪ್ರೊತ್ಸಾಹ ನೀಡಬೇಕಾಗಿದೆ. ಒಳಾಂಗಣ ಕ್ರೆಡಾ ಸಂಘ ಸ್ಥಾಪಿತವಾಗಿ ಹತ್ತು ವರ್ಷ ಕಳೆದ ಸನಿನೆನಪಿಗಾಗಿ 10ವರ್ಷದ ವಯೋಮಾನದ ವಿದ್ಯಾರ್ಥಿ/ನಿಯರಿಗೆ ರಾಜ್ಯಮಟ್ಟದ ಸ್ಪರ್ಧೆ ನಡೆಸಲಾಗುತ್ತಿದೆ. ಗ್ರಾಮೀಣ ಪ್ರತಿಭೆಗಳು ಒಳಾಂಗಣ ಕ್ರೆಡಾಂಗಣದಲ್ಲಿ ತರಬೇತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಎ.ಆರ್.ಟಿ.ಓ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಗೌರವ ಅಧ್ಯಕ್ಷ ಪಟೇಲ್ ದೊಡ್ಡವೆಂಕಟಪ್ಪ, ಕಾರ್ಯದರ್ಶಿ ವಿ.ಮಂಜುನಾಥ್, ಖಜಾಂಚಿ ಬಿ.ವಿ,ಲಕ್ಷ್ಮಿನಾರಾಯಣ್, ಸಹಕಾರ್ಯದರ್ಶಿ ಎನ್.ಪಿ.ರವಿಕುಮಾರ್, ಸಂಘಟನಾ ಕಾರ್ಯದರ್ಶಿ ಡಿ.ಎಂ.ವೇಣುಗೋಪಾಲ್, ಮುಖ್ಯ ತೀರ್ಪುಗಾರ ಆರ್.ಸುರೇಶ್‌ಕುಮಾರ್ ಹಾಗೂ ಕೆ.ಪಿ.ರಾಜಣ್ಣ ಇದ್ದರು, ದೈಹಿಕ ಶಿಕ್ಷಕ ಬಿ.ಪುಟ್ಟಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT