ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ ಹಂಚಿಕೆ ಈ ರೀತಿ

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಪ್ರೀತಿ ಎಂದರೆ ಕೇವಲ `ಮಾತಲ್ಲ~; `ಜವಾಬ್ದಾರಿ~. ಪ್ರೀತಿ ಎಂದರೆ `ನಂಬಿಕೆ~, ಪ್ರೀತಿ ಎಂದರೆ ... ಇತ್ಯಾದಿ ಇತ್ಯಾದಿ! ವ್ಯಾಲೆಂಟೈನ್ಸ್ ಡೇ ಮುಗಿಯಿತು. ಇನ್ನೂ ಯಾಕೆ ಪ್ರೀತಿ ಪ್ರೇಮ ಎಂದು ಹೇಳುತ್ತಿದ್ದಾರೆ ಎಂದು ಆಶ್ಚರ್ಯವಾಗುತ್ತಿದೆಯಾ? 

ಇಂದು ಕಂಪ್ಯೂಟರ್‌ನಲ್ಲಿ ಕುಳಿತು ಯಾರೋ ಗುರುತು ಪರಿಚಯವಿಲ್ಲದವರಿಗೆ ರಿಕ್ವೆಸ್ಟ್ ಕಳುಹಿಸುತ್ತೇವೆ. ಗಂಟೆಗಟ್ಟಲೆ ಅವರೊಂದಿಗೆ ಹರಟೆ ಹೊಡೆಯುತ್ತೇವೆ. ಆದರೆ ನಮ್ಮ ಮನೆಯಲ್ಲಿರುವವರೊಂದಿಗೆ ಮಾತನಾಡಲೂ ಸಮಯವಿಲ್ಲ ಎಂದು ಹಿಂದೆ ಮುಂದೆ ನೋಡುತ್ತೇವೆ.

ಪ್ರೀತಿ ಎಂದರೆ ಕೇವಲ ಪಡೆಯುವುದು ಮಾತ್ರವಲ್ಲ; ಅದನ್ನು ಇನ್ನೊಬ್ಬರಿಗೆ ಹಂಚುವುದರ ಮೂಲಕ ನಾವು ಬದುಕಿನಲ್ಲಿ ಖುಷಿಯಾಗಿರಲು ಸಾಧ್ಯ. ಬದುಕಿನ ಸ್ವಾರಸ್ಯವನ್ನು ಒಂದು ಕಪ್ ಕಾಫಿಯೊಂದಿಗೆ ಹೋಲಿಕೆ ಮಾಡಿ, ಎಲ್ಲ ಹಿತಮಿತವಿದ್ದರೆ ಬದುಕಿನ ಪ್ರತಿ ಕ್ಷಣವೂ ಸವಿಯಾಗುವುದು ಎಂದು ಆ ದಿನದ ವಿಷಯ `ಕೀ ರಿಲೆಷನ್‌ಶಿಪ್~ ಬಗ್ಗೆ ಸಿಹಿಸಿಹಿಯಾಗಿ ಉಲಿದರು ಕವಿತಾ.

ಕವಿತಾ ವೇದಿಕೆ ಮೇಲೆ ನಿಂತು ಮಾತಾಡುತ್ತಿರುವಾಗ ಅವರ ಮುಖ ಆತ್ಮವಿಶ್ವಾಸದಿಂದ ತುಳುಕುತ್ತಿತ್ತು. ಆ ಪುಟ್ಟ ಕೋಣೆಯಲ್ಲಿ ನಗುವಿನ ಅಲೆ, ಮಾತಿನ ಮೋಡಿ, ಅಲ್ಲಿರುವವರ ಕಣ್ಣುಗಳಲ್ಲಿರುವ ಭರವಸೆಯ ಮಿಂಚು. ಏನೋ ಸಾಧಿಸಬೇಕು ಎಂಬ ಛಲ.

ಇಷ್ಟೊಂದು ಪೀಠಿಕೆ ಹಾಕುತ್ತಿರುವುದು ಜಿಸಿಎಫ್ (ಗೇಮ್ ಚೇಂಜ್ ಫೋರಂ) ಬಗ್ಗೆ. ಇಯಾನ್ ಫರಿಯಾ ಇದರ ಸಂಸ್ಥಾಪಕರು. ಇದನ್ನು ಆರಂಭ ಮಾಡುವಾಗ ಎಷ್ಟು ಜನ ಬರುತ್ತಾರೆ, ಬಿಡುತ್ತಾರೆ ಎಂಬುದರ ಬಗ್ಗೆ ನಾನು ಯೋಚನೆ ಮಾಡಿಲ್ಲ. ಆದರೆ ಇದರಿಂದ ಅವರಿಗೆ ನಿಜವಾಗಲೂ ಸಹಾಯವಾಗುತ್ತೆ ಎಂಬ ನಂಬಿಕೆ ನನ್ನಲ್ಲಿತ್ತು. ಆ ನಂಬಿಕೆ ನಿಜವಾಗಿದೆ. ಇಂದು ಇಲ್ಲಿ ಎಲ್ಲ ವರ್ಗದ ಜನ ಬರುತ್ತಾರೆ. ಅವರ ಮುಖದಲ್ಲಿ ನಗು, ಆತ್ಮವಿಶ್ವಾಸ ನೋಡಿದಾಗ ನನಗೆ ಹೆಮ್ಮೆ ಜೊತೆಗೆ ಸಾರ್ಥಕ ಭಾವನೆ ಮೂಡುತ್ತದೆ ಎಂದು ಖುಷಿಯಿಂದ ಹೇಳಿದರು.

ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರುತ್ತೆ. ಅದನ್ನು ಇಲ್ಲಿ ಗುರುತಿಸುತ್ತೇವೆ. ಅವರ ಮಾತಿಗೆ ಕಿವಿಯಾಗುತ್ತೇವೆ. ಅವರ ನೋವು, ನಲಿವನ್ನು ಇಲ್ಲಿ ಹಂಚಿಕೊಳ್ಳುತ್ತಾರೆ ಎಂದು ಇಯಾನ್ ಫರಿಯಾ ಹೇಳುತ್ತಾರೆ.

ಪ್ರೀತಿಯನ್ನು ವ್ಯಾಖ್ಯಾನಿಸುವುದು ಸುಲಭದ ಮಾತಲ್ಲ. ಅಪ್ಪ-ಮಗ, ಅಣ್ಣ-ತಂಗಿ, ಅಕ್ಕ-ತಮ್ಮ, ಗೆಳೆಯಗೆಳತಿಯರ ನಡುವಿನ ಸ್ನೇಹದಲ್ಲಿಯೂ ಪ್ರೀತಿಯ ಕಂಪಿದೆ, ಇಂಪಿದೆ. ಆದರೆ ಈ ಆಧುನಿಕ ಯುಗದಲ್ಲಿ ಅದೆಲ್ಲವೂ ಗೌಣವಾಗಿ ಪ್ರೀತಿ ಎಂದರೆ ಹುಡುಗ-ಹುಡುಗಿಯರ ನಡುವಿನ ಹುಚ್ಚು ಮನಸ್ಸಿನ ವರ್ತನೆಗಳು ಎಂಬಂತಾಗಿದೆ. ಇಲ್ಲಿ ತಾಯಿ ತನ್ನ ಮಗನನ್ನು ಉಳಿದ ಸದಸ್ಯರಿಗೆ ಪರಿಚಯಿಸುವ ರೀತಿ, ತನ್ನ ವಿದ್ಯಾರ್ಥಿನಿಯನ್ನು ಪ್ರೀತಿಯಿಂದ ಆಲಂಗಿಸಿ ಸವಿ ಮುತ್ತು ನೀಡಿದ ಟೀಚರ್ ಇವರೆಲ್ಲರ ಬಾಂಧವ್ಯ ನೋಡಿದಾಗ ಕಣ್ಣಂಚು ಒದ್ದೆಯಾಗುತ್ತದೆ.

ಸಕಾರಾತ್ಮಕ ಭಾವನೆಗಳನ್ನು ತುಂಬುವುದರ ಜೊತೆಗೆ ಬದುಕನ್ನು ಹೇಗೆ ಖುಷಿಯಿಂದ ಸಾಗಿಸಬಹುದು ಎಂಬುದರ ಬಗ್ಗೆ ಇಲ್ಲಿ ಬಂದು ನೋಡಿದರೆ ಅರಿವಾಗುವುದು. ಪ್ರತಿವಾರ ಈ ಕಾರ್ಯಕ್ರಮ ಸಂಜೆ 6.30ರಿಂದ 8.30ರ ತನಕ ಒಂದೊಂದು ದಿನ ಒಂದೊಂದು ಕಡೆ ನಡೆಯುತ್ತದೆ. ವೈದ್ಯರು, ಎಂಜಿನಿಯರ್‌ಗಳು, ಶಿಕ್ಷಕರು, ವಿದ್ಯಾರ್ಥಿಗಳಿಂದ ಹಿಡಿದು ಎಲ್ಲರೂ ಇಲ್ಲಿ ಭಾಗಿಯಾಗಿದ್ದಾರೆ.

ಹಾಗಾದರೆ ಇನ್ನೇಕೆ ತಡ? ನೀವು ಇದರ ಲಾಭ ಪಡೆದುಕೊಳ್ಳಬಹುದು. ಸ್ವಲ್ಪ ಸಮಯವನ್ನು ನಿಮ್ಮ ನಗುವಿಗಾಗಿ, ನಿಮ್ಮ ಬದುಕಿಗಾಗಿ ವಿನಿಯೋಗಿಸಿಕೊಳ್ಳಲು ಇಲ್ಲಿ ಒಂದಾಗಿ. ಮಾಹಿತಿಗೆ: 41507000, 9880630024.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT