ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾತ್ಮಾಪುರ: ನೀರಿಗಾಗಿ ಹಾಹಾಕಾರ

ಚಿಟಗುಪ್ಪಾ ಪುರಸಭೆ ನಿರ್ಲಕ್ಷ್ಯ
Last Updated 6 ಆಗಸ್ಟ್ 2013, 8:22 IST
ಅಕ್ಷರ ಗಾತ್ರ

ಚಿಟಗುಪ್ಪಾ: ತೆರೆದ ಬಾವಿಗೆ ಅಳವಡಿಸಲಾದ ವಿದ್ಯುತ್ ಪಂಪ್‌ಸೆಟ್ ಕೆಟ್ಟಿದೆ ಎಂಬ ಕಾರಣದಿಂದ ಪಟ್ಟಣ ಪುರಸಭೆಯ ವಾರ್ಡ್ ಸಂಖ್ಯೆ 23ರಲ್ಲಿ ಬರುವ ಫಾತ್ಮಾಪುರ ಜನ ಕುಡಿಯುವ ನೀರಿಗಾಗಿ ಮೂರು ವಾರದಿಂದ ಎಲ್ಲೆಂದರಲ್ಲಿ ಸುತ್ತಾಡಿ ಕೊಡಗಳಲ್ಲಿ ನೀರು ತುಂಬಿಕೊಂಡು ಬರುತ್ತಿರುವ ದೃಶ್ಯ ಕಂಡುಬರುತ್ತಿದೆ.

ಫಾತ್ಮಾಪುರದಲ್ಲಿ ಇರುವ ಒಂದು ತೆರೆದ ಬಾವಿಗೆ ಪುರಸಭೆಯಿಂದ ಪಂಪ್‌ಸೆಟ್ ಅಳವಡಿಸಿ ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಮೂರು ವಾರದ ಹಿಂದೆ ಕೆಟ್ಟಿದ್ದ ಮೋಟಾರ್ ಪುರಸಭೆ ಸಿಬ್ಬಂದಿ ಇದುವರೆಗೂ ದುರಸ್ತಿ ಕಾರ್ಯ ಕೈಗೊಳ್ಳದಿರುವುದಕ್ಕೆ ನಾಗರಿಕರು ಹನಿ ನೀರಿಗೆ ಪರದಾಡಬೇಕಾದ ಪರಿಸ್ಥಿತಿ ಉದ್ಭವಿಸಿದೆ ಎಂದು ಜಗನ್ನಾಥ ನರನಾಳೆ, ಅಂಬಣ್ಣ ಪವಾರ್, ವಿಕ್ರಮ ಜಮಾದಾರ, ನರಸಪ್ಪ ಮಡೆಪ್ಪ ಮತ್ತಿತರರು ತಿಳಿಸುತ್ತಾರೆ.

ಇಲ್ಲಿನ ಅಕ್ಕಪಕ್ಕದ ತೋಟಗಳಿಂದ ನೀರು ತರುತ್ತಿದ್ದು, 15 ವರ್ಷಗಳ ಹಿಂದೆ ಪುರಸಭೆಯಿಂದ ಕೊರೆಯಲಾಗಿದ್ದ ಕೊಳವೆ ಬಾವಿಯಲ್ಲಿ ನೀರು ಇಲ್ಲ ಎಂಬ ಕಾರಣದಿಂದ ಮೊಟಾರ್ ಅಳವಡಿಸಿರಲಿಲ್ಲ ಸದ್ಯ ಹಾಳು ಬಿದ್ದ ಕೊಳವೆ ಬಾವಿಯ ಪೈಪ್‌ನಲ್ಲಿ ನೀರು ಉಕ್ಕುತ್ತಿದೆ.

ಎಲ್ಲರೂ ಕೊಡಗಳಿಂದ ಪೈಪ್‌ನಲ್ಲಿ ಬರುವ ಹನಿ ಹನಿ ನೀರು ಹಿಡಿದುಕುಡಿಯುತ್ತಿದ್ದಾರೆ, ಹೊಸ ಮೊಟಾರ್ ಅಳವಡಿಸುವಂತೆ ಪುರಸಭೆ ಮುಖ್ಯಾಧಿಕಾರಿ ಅವರಿಗೆ ಹಲವು ಬಾರಿ ಕೇಳಿಕೊಂಡರೂ ಪ್ರಯೋಜನ ಆಗುತ್ತಿಲ್ಲ.

ಆಡಳಿತಾಧಿಕಾರಿಯ ಅಧಿಕಾರ ಇರುವುದರಿಂದ ಫಾತ್ಮಾಪುರ ಬಗ್ಗೆ ಪುರಸಭೆ ನಿರ್ಲಕ್ಷ್ಯ ವಹಿಸುತ್ತಿದೆ ಕೇಳುವವರು ಯಾರು ಇಲ್ಲದಂತಾಗಿದೆ ಎಂದು ಪುರಸಭೆ ಸದಸ್ಯೆ ಗೌರಮ್ಮ ಮಡೆಪ್ಪ ಅವರ ವಿವರ.

ಕೆಟ್ಟಿರುವ ಪಂಪ್‌ಸೆಟ್ ಬಾವಿಯ ಒಳಗಡೆ ಬಿದ್ದಿದ್ದು, ತಕ್ಷಣ ಪರ್ಯಾಯ ವ್ಯವಸ್ಥೆ ಕೈಗೊಂಡು ನೀರು ಪೂರೈಸಲಾಗುತ್ತದೆ ಎಂದು ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT