ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಕ್ ಸಿಬ್ಬಂದಿಯೊಂದಿಗೆ ಗ್ರಾಹಕರ ವಾಗ್ವಾದ

Last Updated 24 ಮೇ 2012, 8:40 IST
ಅಕ್ಷರ ಗಾತ್ರ

ಹೊನ್ನಾಳಿ:  ಪೆಟ್ರೋಲ್ ದರ ಹೆಚ್ಚಳ ಸುದ್ದಿ ಬುಧವಾರ ಖಾಸಗಿ ಟಿವಿ ಚಾನಲ್‌ಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ, ಗ್ರಾಹಕರು ಪೆಟ್ರೋಲ್‌ಪಡೆದುಕೊಳ್ಳಲು ಪಟ್ಟಣದ ವಿವಿಧ ಬಂಕ್‌ಗಳಿಗೆ ಮುಗಿಬಿದ್ದರು.  ಪಟ್ಟಣದ ವಡ್ಡಿನಕೇರಿ ಹಳ್ಳದ ಬಳಿ ಇರುವ `ಶಿವಶಾಂತ ಫಿಲ್ಲಿಂಗ್ ಸೆಂಟರ್~ನಲ್ಲಿ ಗ್ರಾಹಕರು ಸಿಬ್ಬಂದಿಯೊಂದಿಗೆ ತೀವ್ರ ವಾಗ್ವಾದ ನಡೆಸಿದರು.

ಆಯ್ದ ಗ್ರಾಹಕರಿಗೆ ಮಾತ್ರ ಹೆಚ್ಚು ಪೆಟ್ರೋಲ್ ನೀಡುವುದು ಮತ್ತು ವೇಗದ ಸೇವೆ ಒದಗಿಸದಿರುವುದರ ಹಿನ್ನೆಲೆಯಲ್ಲಿ ಗ್ರಾಹಕರು ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದರು.

`ಪೆಟ್ರೋಲ್ ಬೆಲೆಯಲ್ಲಿ ರೂ 7.50 ಹೆಚ್ಚಳವಾಗುತ್ತದೆ ಎಂಬ ಸುದ್ದಿ ಪ್ರಕಟಗೊಂಡ ಕೂಡಲೇ ಬಂಕ್ ಮಾಲೀಕರು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಬೆಳಗಾದರೆ ಹೆಚ್ಚಿನ ದರಕ್ಕೆ ಪೆಟ್ರೋಲ್ ಮಾರಾಟ ಮಾಡಬಹುದು ಎಂಬ ಲೆಕ್ಕಾಚಾರ ಬಂಕ್ ಮಾಲೀಕರದು. ಈ ಧೋರಣೆ ಸಲ್ಲದು. ಗ್ರಾಹಕರ ಹಿತ ಕಾಪಾಡಬೇಕಾದ ಗುರುತರ ಜವಾಬ್ದಾರಿ ಬಂಕ್ ಮಾಲೀಕರ ಮೇಲಿದೆ~

-ಎಚ್.ಬಿ. ವೀರೇಶ್‌ಕುಮಾರ್, ಹೊನ್ನಾಳಿ 

`ಪೆಟ್ರೋಲ್ ಬೆಲೆಯಲ್ಲಿ ಇಷ್ಟೊಂದು ಹೆಚ್ಚಳ ಹಿಂದೆಂದೂ ಆಗಿರಲಿಲ್ಲ. ದ್ವಿಚಕ್ರ ವಾಹನಗಳನ್ನು ಮನೆಯಲ್ಲಿ ನಿಲ್ಲಿಸಿ ಬೈಸಿಕಲ್ ತುಳಿಯುವುದೇ ಒಳ್ಳೆಯದು. ಅದ್ದರಿಂದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು~

- ಯು.ಬಿ. ಜಯಪ್ಪ, ಹೊನ್ನಾಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT