ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಕ್ಕಿಂತ ಆಹಾರ ಧಾನ್ಯ ಶ್ರೇಷ್ಠ

Last Updated 4 ಅಕ್ಟೋಬರ್ 2011, 7:30 IST
ಅಕ್ಷರ ಗಾತ್ರ

ಮುನವಳ್ಳಿ (ತಾ.ಸವದತ್ತಿ): `ಹಸಿರು ಬಂಗಾರ ಜೀವಂತ ಬಂಗಾರ, ನಾವು ಬದುಕಿ ಬಾಳಲು ಬಂಗಾರಕ್ಕಿಂತ ಹಸಿರು ಬಂಗಾರವಾದ ಆಹಾರ ಧಾನ್ಯ ಶ್ರೇಷ್ಠ~ ಎಂದು ಸಾಹಿತಿ ಡಾ. ವಿ.ಎಸ್. ಮಾಳಿ ಹೇಳಿದರು.
 ಅವರು ಮುನವಳ್ಳಿಯಲ್ಲಿ ನಾಡಹಬ್ಬ ಉತ್ಸವ ಸಮಿತಿಯಿಂದ ಆಚರಿಸುವ 11 ನೇ ವರ್ಷದ ಮಹೋತ್ಸವದ  ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

`ಇಂದಿನ ಆಡಂಬರದ ಜೀವನದಲ್ಲಿ ಜೋಳವನ್ನು ಬಂಗಾರವನ್ನಾಗಿ ಮಾಡುವ ಕಲೆ ಬೇಕಾಗಿಲ್ಲ, ಬಂಗಾರವನ್ನು ಜೋಳವನ್ನಾಗಿ ಮಾಡುವ ಕಲೆ ಬೇಕಾಗಿದೆ. ಹಳದಿ ಬಂಗಾರ ಸತ್ತ ಬಂಗಾರವಾದರೆ, ದಸರೆಯ ಹಬ್ಬದಲ್ಲಿ ಬನ್ನಿ ಮುಡಿಯುವಾಗ ನಾವು ನೀವು ಬಂಗಾರದಂತೆ ಇರೋಣ ಎಂದು ಹಸಿರು ಬಂಗಾರ ನೀಡುತ್ತೇವೆ~ ಎಂದರು.

ಉತ್ಸವವನ್ನು ಉದ್ಘಾಟಿಸಿದ ಉಪ್ಪಿನಬೆಟಗೇರಿಯ ಮೂರುಸಾವಿರಮಠದ ವಿರೂಪಾಕ್ಷ ಸ್ವಾಮೀಜಿ, ನಮ್ಮ ಪೂರ್ವಿಕರು, ಶರಣರು, ವಚನಕಾರರು, ಸಾಹಿತಿಗಳು ಕನ್ನಡ ಭಾಷೆಯ ಶ್ರೀಮಂತಿಕೆಯನ್ನುಭವ್ಯಗತಗೊಳಿಸಿದ್ದಾರೆ. ಅದನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ನಿಮ್ಮದಾಗಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಸೋಮಶೇಖರಮಠದ ಮುರುಘೇಂದ್ರ ಶ್ರೀಗಳು, ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿ ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೆ ವಿಶಿಷ್ಠ ಛಾಪು ಮೂಡಿಸಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಡಾ. ಚಂದ್ರಶೇಖರ ಕಂಬಾರ ಅವರನ್ನು ಅವಮಾನ ಮಾಡಿದ ಮರಾಠಿ ಭಾಷಿಕ ಸದಸ್ಯರ ವರ್ತನೆಯನ್ನು ಖಂಡಿಸಿದರು. 

 ಬಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಗೊಂಡ ಜಿ.ಪಂ. ಸದಸ್ಯ ರವೀಂದ್ರ ಯಲಿಗಾರ, ತಾ.ಪಂ. ಸದಸ್ಯರಾದ ಚಾಂದಬಿ ಬೋದ್ಲೆಖಾನ, ಸುಮಿತ್ರಾ ವಿರೂಪಯ್ಯನವರಮಠ, ಎ.ಪಿ.ಎಂ.ಸಿ. ನಿರ್ದೇಶಕ ನಿಂಗನಗೌಡ ಮಲಗೌಡ್ರ.

ದಿಲೀಪ ಜಂಬಗಿ ಹಾಗೂ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಬಿ. ನಾವಲಗಟ್ಟಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಮೊದಲು ತಾಯಿ ಭುವನೇಶ್ವರಿ ಭಾವಚಿತ್ರದ ಮರೆವಣಿಗೆಗೆ ಕನ್ನಡ ಬಾವುಟ ಹಾರಿಸುವುದರ ಮೂಲಕ ಜಿ.ಪಂ. ಸದಸ್ಯ ರವೀಂದ್ರ ಯಲಿಗಾರ ಚಾಲನೆ ನೀಡಿದರು. ಊರಿನ ಪ್ರಮುಖ ಬೀದಿಗಳಲ್ಲಿ ಜರುಗಿದ ಮೆರವಣಿಗೆಯಲ್ಲಿ ವಾದ್ಯ ವಂದದವರು ಹಾಗೂ ವಿವಿಧ ಶಾಲಾ ಮಕ್ಕಳು ರೂಪಕಗಳನ್ನು ಧರಿಸಿ ಗಮನ ಸೆಳೆದರು.

ಗ್ರಾ.ಪಂ. ಅಧ್ಯಕ್ಷೆ  ಸುಶೀಲಾ ಗೀದಿಗೌಡ್ರ. ಎಂ.ಆರ್. ಗೋಪಶೆಟ್ಟಿ. ಎಂ.ಕೆ.ದೇವಣಗಾಂವಿ. ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಸುರೇಶ ಜಾವೂರ, ಉತ್ಸವ ಸಮಿತಿಯ ಶ್ರೀಶೈಲ ಹಂಜಿ. ಕೇಶವ ಭಂಡಾರಿ. ಹ.ಬ. ಅಸೂಟಿ. ಚಂದ್ರಯ್ಯ ಸ್ವಾಮೀಜಿ, ಮಂಜುನಾಥ ಭಂಡಾರಿ. ಹನಸಿ. ಜಂಬ್ರಿ. ಬೆಳವಲಗಿಡದ ಹೂಲಿ. ಬಿ.ಎಚ್. ಖೊಂದುನಾಯ್ಕ, ಹೊಸಮನಿ ಇತರರಿದ್ದರು. ಶಿಕ್ಷಕ ಬಿ. ಬಿ. ಹುಲಿಗೊಪ್ಪ ಸ್ವಾಗತಿಸಿದರು. ಗಂಗಾಧರ ನಿರೂಪಿಸಿದರು. ವೀರಣ್ಣ ವಂದಿಸಿದರು.

ಗೊಂದಲೋತ್ಸವ ಇಂದು:  ನವರಾತ್ರಿ ಅಂಗವಾಗಿ ಇಲ್ಲಿಯ ಅಂಬಾಭವಾನಿ ದೇವಸ್ಥಾನದಲ್ಲಿ  ಇದೇ 4 ರಂದು ಬೆಳಿಗ್ಗೆ ಸುಮಂಗಲಿಯರಿಂದ ಶ್ರೀ ದೇವಿಗೆ ಕುಂಕುಮಾರ್ಚನೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಂತರ ರಾತ್ರಿ ಗೊಂದಲೋತ್ಸವ ಜರುಗಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಸೋಮಶೇಖರ ಯಲಿಗಾರ ತಿಳಿಸಿದ್ದಾರೆ.

ನಾಡಹಬ್ಬ ಇಂದಿನ ಕಾರ್ಯಕ್ರಮಗಳು: ನಾಡಹಬ್ಬ ಉತ್ಸವದ ಅಂಗವಾಗಿ ಇದೇ 4ರಂದು ಕನ್ನಡ ಸಾಹಿತ್ಯ ಪರಿಷತ್ ಸವದತ್ತಿ ಹಾಗೂ ನಾಡಹಬ್ಬ ಉತ್ಸವ ಸಮಿತಿ ಆಶ್ರಯದಲ್ಲಿ ಬೆಳಿಗ್ಗೆ 10 ಗಂಟೆಗ ಕವಿಗೋಷ್ಠಿ ನಡೆಯಲಿದೆ. ಹ.ಬ. ಅಸೂಟಿ ಉದ್ಘಾಟಿಸುವರು. ಎಸ್.ವಿ. ಚವಡಾಪೂರ ಅಧ್ಯಕ್ಷತೆ ವಹಿಸುವರು. ಬಿ.ವಿ. ನರಗುಂದ. ಬಸು ಬೇವಿನಗಿಡದ ಎಸ್.ಎಸ್. ನವಲಗುಂದ ಎಚ್. ಕೆ. ಗುರವ ಹಾಜರಿರುವರು.

ಸಂಜೆ 6ಗಂಟೆಗೆ  ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಮುರುಘೇಂದ್ರ ಸ್ವಾಮೀಜಿ  ಸಾನಿಧ್ಯ, ಉಮೇಶ ಬಾಳಿ ಅಧ್ಯಕ್ಷತೆ ವಹಿಸುವರು. ಪ್ರೊ. ಇಟಗಿ  ಈರಣ್ಣ  ಉಪನ್ಯಾಸ ನೀಡುವರು. ಪ್ರೊ. ಜಿ. ವಿ. ವಳಸಂಗ ಸೋಮು ಯಲಿಗಾರ. ವಿಜಯ ವನಕುದರಿ. ಅಂಬರೀಷ ಯಲಿಗಾರ. ಚಿದಂಬರ ಕುಲಕರ್ಣಿ ಶಿವು ಹಿರೇಮಠ. ದೀಪಕ ಇತರರು ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT