ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ನೀಗಲು ಗಿಡ ಬೆಳೆಸಿ

Last Updated 16 ಜನವರಿ 2012, 5:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಮಳೆ ಇಲ್ಲದೆ ಬರಗಾಲ ಪರಿಸ್ಥಿತಿ ಉಂಟಾಗಿ ರೈತರು ವಲಸೆ ಹೋಗುತ್ತಿದ್ದಾರೆ. ಕುಡಿಯುವ ನೀರಿಗೂ ಕಷ್ಟಪಡುತ್ತಿದ್ದೇವೆ. ಇದನ್ನೆಲ್ಲ ತಪ್ಪಿಸಲು ಗಿಡಗಳನ್ನು ನೆಟ್ಟು, ಬೆಳೆಸಬೇಕು ಜೊತೆಗೆ ಅರಣ್ಯವನ್ನು ಸಂರಕ್ಷಣೆ ಮಾಡಬೇಕು~ ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಸಲಹೆ ನೀಡಿದರು.

ಮೆಹರ್ ಪಬ್ಲಿಕೇಶನ್ ನಗರದಲ್ಲಿ ಭಾನುವಾರ ಏರ್ಪಡಿಸಿದ, ನಿವೃತ್ತ ಪ್ರಧಾನ ಹಿರಿಯ ಅರಣ್ಯಾಧಿಕಾರಿ ಎಂ.ಎಚ್. ಶೇಖ್ ರಚಿಸಿದ `ಪರಿಸರದ ಪರಿಮಳ~ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

`ನಾವು ಬಿಡುವ ಅಂಗಾಲಾಮ್ಲ ವನ್ನು ಹೀರಿಕೊಂಡು ಆಕ್ಸಿಜನ್ ಬಿಡುವ ಗಿಡಮರಗಳು ಮಾನವ ಕುಲದ ಪ್ರೇಮಿಗಳು~ ಎಂದು ಅವರು ಹೇಳಿದರು.

`ಪರಿಸರ ನಾಶ ಆಗುತ್ತಿರುವ ಈ ದಿನಗಳಲ್ಲಿ ಅರಣ್ಯ ಸಂರಕ್ಷಿಸುವ ಕುರಿತು ಕವಿತೆಗಳನ್ನು ಶೇಖ್ ಬರೆದು, ಸಂಕಲನ ಪ್ರಕಟಿಸಿದ್ದಾರೆ. ಇದು ಶ್ಲಾಘನೀಯ~ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

`ಅಧಿಕಾರಿಗಳು ಅರಣ್ಯ ಕುರಿತು ಅಂಕಿ-ಸಂಖ್ಯೆಗಳನ್ನು ಕೊಡುತ್ತಾರೆ. ಆದರೆ ವಾಸ್ತವ ಅಂಶ ಬೇರೆ ಇರುತ್ತದೆ. ಇದಕ್ಕೆ ವಿಪರ್ಯಾಸವಾಗಿ ಸಾಲುಮರದ ತಿಮ್ಮಕ್ಕ ಸಾವಿರಾರು ಗಿಡಗಳನ್ನು ನೆಟ್ಟು, ಬೆಳೆಸಿದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ತಿಮ್ಮಕ್ಕಳನ್ನು ದೆಹಲಿಗೆ ಆಹ್ವಾನಿಸಿ ಸನ್ಮಾನಿಸಿದರು. ಆಗ ತಮ್ಮೂರಿಗೆ ಆಸ್ಪತ್ರೆ ಬೇಕೆಂದು ತಿಮ್ಮಕ್ಕ ಕೋರಿದ್ದರು. ಆದರೆ ಇದುವರೆಗೆ ಬೇಡಿಕೆ ಈಡೇರಿಲ್ಲ. ನಾವೆಲ್ಲ ಮಾತಿನ ಭಟ್ಟರೇ ಹೊರತು, ಕೃತಿ ಶೂರರಲ್ಲ~ ಎಂದು ಅವರು ಬೇಸರ ವ್ಯಕ್ತ ಪಡಿಸಿದರು.

`ನಾವೆಲ್ಲ ಪ್ರಕೃತಿಪ್ರಿಯರಾಗಬೇಕು ಜೊತೆಗೆ ಪ್ರತಿಯೊಬ್ಬರೂ ಗಿಡ ನೆಡ ಬೇಕು. ವನಮಹೋತ್ಸವವನ್ನು ಕಾಟಾ ಚಾರಕ್ಕೆ ಆಚರಿಸಬಾರದು. ಯೋಜನೆ ಗಳನ್ನು ರೂಪಿಸುವಲ್ಲಿ ನಿಸ್ಸೀಮರಾದ ನಾವು ಜಾರಿಗೆ ತರುವುದಿಲ್ಲ. ಎಂದು ಅವರು ಬೇಸರ ವ್ಯಕ್ತಪಡಿಸಿದರು.

`ಮುಸ್ಲಿಮರು ಈ ದೇಶದವರೇ. ಅವರನ್ನು ಸೋದರರಂತೆ ಕಾಣಬೇಕು~ ಎಂದು ಅವರು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕುಲ ಸಚಿವ ಸುಭಾಷ ಮಳಖೇಡ ಹಾಜರಿದ್ದರು. ವಿ.ವಿ. ಕುಲಪತಿ ಡಾ.ಜೆ.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. 

ಪ್ರಸನ್ನ ಭೋಜಶೆಟ್ಟರ ಪ್ರಾರ್ಥಿಸಿ ದರು. ಅಜೀಂ ಶೇಖ್ ಕುರಾನ್ ಪಠಿಸಿದರು. ಶಿವಕುಮಾರ ಭೋಜ ಶೆಟ್ಟರ ಸ್ವಾಗತಿಸಿದರು.

ಪತ್ರಕರ್ತ ಮನೋಜ ಪಾಟೀಲ ಕೃತಿಕಾರರನ್ನು ಪರಿಚಯಿಸಿದರು. ಪತ್ರಕರ್ತ ಅಜಿತ್ ಘೋರ್ಪಡೆ ಕಾರ್ಯಕ್ರಮ ನಿರೂಪಿಸಿದರು. ಆರ್.ವೈ.ಮಿರಜಕರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT