ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ್ಲಿನ್ ಒಲಿಂಪಿಕ್ಸ್ (1936)

Last Updated 21 ಜುಲೈ 2012, 19:30 IST
ಅಕ್ಷರ ಗಾತ್ರ

ಸರ್ವಾಧಿಕಾರಿ ಹಿಟ್ಲರ್‌ನ ಆಶ್ರಯದಲ್ಲಿ ಈ ಒಲಿಂಪಿಕ್ಸ್ ಕೂಟ ನಡೆಯಿತು. `ಈ ಒಲಿಂಪಿಕ್ಸ್‌ನಲ್ಲಿ ಕಪ್ಪುವರ್ಣೀಯರು ಮತ್ತು ಯಹೂದಿಗಳಿಗೆ ಪಾಲ್ಗೊಳ್ಳಲು ಅವಕಾಶವಿಲ್ಲ~ ಎಂದು ಹಿಟ್ಲರ್ ಹೇಳಿದ್ದ. ಆದರೆ ಒಲಿಂಪಿಕ್ ಸಮಿತಿಯು ಕೂಟವನ್ನೇ ರದ್ದುಗೊಳಿಸುವ ಎಚ್ಚರಿಕೆ ನೀಡಿದ ಕಾರಣ ಹಿಟ್ಲರ್ ಸುಮ್ಮನಾಗಿದ್ದ.

ಅಮೆರಿಕದ ಕಪ್ಪು ವರ್ಣೀಯ ಅಥ್ಲೀಟ್ ಜೆಸ್ಸಿ ಓವನ್ಸ್ ನಾಲ್ಕು ಚಿನ್ನ ಗೆಲ್ಲುವ ಮೂಲಕ ಬರ್ಲಿನ್‌ನಲ್ಲಿ `ಹೀರೊ~ ಆಗಿ ಮೆರೆದರು. ಈ ಕೂಟದ ಸ್ಪರ್ಧೆಗಳನ್ನು ಟಿವಿಯಲ್ಲಿ ನೇರಪ್ರಸಾರ ಮಾಡಲಾಗಿತ್ತು.
 
ಅದೇ ರೀತಿ ಒಲಿಂಪಿಕ್ `ಜ್ಯೋತಿಯ ರಿಲೇ~ ಕೂಡಾ ಮೊದಲ ಬಾರಿಗೆ ನಡೆಯಿತು. ಆತಿಥೇಯ ಜರ್ಮನಿ 33 ಚಿನ್ನಗಳೊಂದಿಗೆ ಪದಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. 49 ರಾಷ್ಟ್ರಗಳ 3963 ಅಥ್ಲೀಟ್‌ಗಳು ಕೂಟದಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT