ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸಳೆ ಸೊಪ್ಪಿನ ವಿಶೇಷ...

Last Updated 21 ಜನವರಿ 2011, 19:30 IST
ಅಕ್ಷರ ಗಾತ್ರ

ಬಸಳೆ ಸೊಪ್ಪಿನ ಬಾಂಡ್ಲೆ ರೊಟ್ಟಿ
ಬೇಕಾಗುವ ಪದಾರ್ಥಗಳು: 1 ಬಟ್ಟಲು ಅಕ್ಕಿ ಹಿಟ್ಟು, 1 ಬಟ್ಟಲು ಜೋಳದ ಹಿಟ್ಟು (ರಾಗಿ, ಗೋಧಿ ಹಿಟ್ಟನ್ನು ಬಳಸಬಹುದು) ಸಣ್ಣಗೆ ಹೆಚ್ಚಿದ ಬಸಳೆ ಒಂದೂವರೆ ಬಟ್ಟಲು, 1 ಈರುಳ್ಳಿ, ತೆಂಗಿನ ತುರಿ ಅರ್ಧ ಬಟ್ಟಲು 1 ಚಮಚ ಜೀರಿಗೆ, 1 ಹಸಿಮೆಣಸಿನಕಾಯಿ.

ಮಾಡುವ ವಿಧಾನ: ಹಸಿಮೆಣಸಿನಕಾಯಿ ಸಣ್ಣಗೆ ಹೆಚ್ಚಿಕೊಳ್ಳಿ. ಎಲ್ಲವನ್ನೂ ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಿ. ಬಾಂಡ್ಲೆಗೆ 1 ಚಮಚ ಎಣ್ಣೆ ಹಾಕಿ ತೆಳ್ಳಗೆ ತಟ್ಟಿ ಗರಿಗರಿಯಾಗಿ ಬೇಯಿಸಿ, ತುಪ್ಪ ಚಟ್ನಿಯೊಂದಿಗೆ ಸವಿಯಿರಿ.

ಬಸಳೆ ಸೊಪ್ಪಿನ ದೋಸೆ

ಬೇಕಾಗುವ ಪದಾರ್ಥಗಳು: 1 ಪಾವು ಅಕ್ಕಿ, ಒಂದೂವರೆ ಚಮಚ ಜೀರಿಗೆ, ಒಂದೂವರೆ ಚಮಚ ಕೊತ್ತಂಬರಿ ಬೀಜ (ದನಿಯಾ), ನೆಲ್ಲಿ ಗಾತ್ರದ ಹುಣಸೆಹಣ್ಣು, ಬೆಲ್ಲ, 5-6 ಬ್ಯಾಡಗಿ ಮೆಣಸಿನಕಾಯಿ, 1 ಹೋಳು ತೆಂಗಿನ ತುರಿ ಸ್ವಲ್ಪ ಇಂಗು ರುಚಿಗೆ ತಕ್ಕಷ್ಟು ಉಪ್ಪು, 2 ಹಿಡಿ ಬಸಳೆ.

ಮಾಡುವ ವಿಧಾನ: ಅಕ್ಕಿಯನ್ನು 7-8 ಗಂಟೆಗಳ ಕಾಲ ನೆನೆಸಿ, ಅದಕ್ಕೆ ಜೀರಿಗೆ, ದನಿಯಾ, ಹುಣಸೆಹಣ್ಣು, ಬೆಲ್ಲ, ಮೆಣಸಿನಕಾಯಿ, ತೆಂಗಿನ ತುರಿ, ಉಪ್ಪು, ಇಂಗು ಎಲ್ಲವನ್ನೂ ಹಾಕಿ ರುಬ್ಬಿಕೊಂಡು ಸಣ್ಣಗೆ ಹೆಚ್ಚಿದ ಬಸಳೆ ಅದಕ್ಕೆ ಸೇರಿಸಿ ದೋಸೆ ಹಿಟ್ಟಿನ ಹದ ಮಾಡಿ ತಕ್ಷಣವೇ ದೋಸೆ ಹೊಯ್ಯಿರಿ. ಸ್ವಲ್ಪ ಎಣ್ಣೆ ಹಾಕಿ ಗರಿಗರಿಯಾಗಿ ಬೇಯಿಸಿ.

ಬೆಣ್ಣೆ, ಉಪ್ಪಿನಕಾಯಿ ರಸ, ಚಟ್ನಿಪುಡಿಯೊಂದಿಗೆ ಸವಿಯಿರಿ, ಇದು ಆರಿದ್ದರೂ ಮೃದುವಾಗಿಯೇ ಇರುವುದರಿಂದ ಡಬ್ಬಿಗೆ ಹಾಕಿಕೊಂಡು ಹೋಗಲೂ ಚೆನ್ನಾಗಿರುತ್ತದೆ.

ಬಸಳೆ ಮೊಸರು ಬಜ್ಜಿ

ಬೇಕಾಗುವ ಪದಾರ್ಥಗಳು: ಒಂದು ಬಟ್ಟಲು ಮೊಸರು, 2 ಚಮಚ ಎಣ್ಣೆ 2 ಹಿಡಿ ಬಸಳೆ ಸೊಪ್ಪು, 1 ಈರುಳ್ಳಿ. ಅರ್ಧ ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, 1 ಬಾಳಕದ ಮೆಣಸಿನಕಾಯಿ.

ಮಾಡುವ ವಿಧಾನ: ಬಸಳೆ ಸೊಪ್ಪನ್ನು ಸಣ್ಣಗೆ ಹೆಚ್ಚಿ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ತಣ್ಣಗಾದ ನಂತರ ಅದನ್ನು ಮೊಸರಿಗೆ ಹಾಕಿ ಈರುಳ್ಳಿಯನ್ನೂ ಹೆಚ್ಚಿ ಹಾಕಿ. ಒಗ್ಗರಣೆಯಲ್ಲಿ ಸಾಸಿವೆ, ಜೀರಿಗೆ ಹಾಕಿ ಬಾಳಕದ ಮೆಣಸಿನ ಕಾಯಿಯನ್ನು ಕರಿದು ಪುಡಿ ಮಾಡಿ ಹಾಕಿ.

ಬಸಳೆ ಸೊಪ್ಪಿನ ಪರೋಟ

ಬೇಕಾಗುವ ಪದಾರ್ಥಗಳು: 2 ಬಟ್ಟಲು ಗೋಧಿ ಹಿಟ್ಟು, ಸಣ್ಣಗೆ ಹೆಚ್ಚಿದ ಬಸಳೆ ಒಂದೂವರೆ ಬಟ್ಟಲು, ಅರ್ಧ ಚಮಚ ಹಸಿರು ಮೆಣಸಿನ ಕಾಯಿ ಪೇಸ್ಟ್, ಅರ್ಧ ಚಮಚ ಓಮು.

ಮಾಡುವ ವಿಧಾನ: ಎಲ್ಲವನ್ನೂ ಹಾಕಿ ಚಪಾತಿ ಹಿಟ್ಟಿನ ಅದಕ್ಕೆ ಕಲಸಿಕೊಳ್ಳಿ. ದುಂಡಾಗಿ ಚಪಾತಿ ಒತ್ತಿಕೊಂಡು ಸ್ವಲ್ಪ ಎಣ್ಣೆ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿ ಬೆಣ್ಣೆ ಚಟ್ನಿಯೊಂದಿಗೆ ಸವಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT