ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ಮತ್ತೆ ಆರಂಭಿಸಿ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಟಿಂಬರ್ ಯಾರ್ಡ್ ಲೇಔಟಿನಿಂದ ಬೆಳಿಗ್ಗೆ 8.25ಕ್ಕೆ ರೂಟ್ ನಂ. 58 ಮೆಜೆಸ್ಟಿಕ್‌ಗೆ ಹೊರಡುತ್ತಿತ್ತು. ನಂತರ ಬಸ್ಸಿನ ಸಮಯವನ್ನು 8.15ಕ್ಕೆ ಬದಲಿಸಲಾಯಿತು. ಆದರೆ ಈಗ ಒಂದು ತಿಂಗಳಿಂದ ಈ ಬಸ್ಸು ಬೆಳಗಿನ ಹೊತ್ತು ಬರುತ್ತಿಲ್ಲ. ಇದರಿಂದ ಶಾಲಾ ಕಾಲೇಜು ಮಕ್ಕಳಿಗೆ, ಕಚೇರಿಗಳಿಗೆ ಹೋಗುವವರಿಗೆ ತುಂಬಾ ತೊಂದರೆಯಾಗಿದೆ.
 
ಈ ಬಸ್ಸನ್ನು ಪುನಃ ಬೆಳಿಗ್ಗೆ ಸಮಯ 8.15 ಅಥವಾ 8.25ಕ್ಕೆ ಪ್ರಾರಂಭಿಸಿದರೆ ಅನೇಕ ಪ್ರಯಾಣಿಕರಿಗೆ ಅನುಕೂಲ. ಅಂಥವರ ಸುಗುಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿ ಬಿಎಂಟಿಸಿ ಮೇಲಾಧಿಕಾರಿಗಳಲ್ಲಿ  ವಿನಂತಿ.
-ಜಯರಾಮರಾವ್

ಭಿತ್ತಿಪತ್ರ ಹಾವಳಿಗೆ ಕೊನೆಯೇ ಇಲ್ಲವೇ?
ಸಿನಿಮಾ ಭಿತ್ತಿಪತ್ರಗಳೂ ಸೇರಿದಂತೆ ಅನೇಕ ರೀತಿಯ ಭಿತ್ತಿಪತ್ರಗಳು ನಗರದ ಮುಖ್ಯ ರಸ್ತೆಗಳ ಖಾಸಗಿ ಗೋಡೆಗಳು, ಸರ್ಕಾರಿ ಇಲಾಖೆಯ ಗೋಡೆಗಳು, ಮೇಲ್ಸೇತುವೆಗಳ ಕಂಬಗಳು, ಸುರಂಗಮಾರ್ಗದ ಎರಡೂ ಕಡೆಯ ಗೋಡೆಗಳ ಮೇಲೆ ಭಿತ್ತಿಪತ್ರಗಳು ರಾರಾಜಿಸುತ್ತಿವೆ.

  ಭಿತ್ತಿಪತ್ರ ಹಾಕುವವರು ಮತ್ತು ಹಾಕಿರುವವರು ಯಾರು ಎನ್ನುವ ವಿವರ ಆ ಭಿತ್ತಿಪತ್ರಗಳಲ್ಲಿಯೇ ಇರುತ್ತದೆ. ಇಂತಹವರ ಮೇಲೆ ಅಧಿಕಾರಿಗಳು ಮೊಕದ್ದಮೆ ಹೂಡಿ ಕ್ರಮ ಜರುಗಿಸಬೇಕು. ನಿಜಕ್ಕೂ ಬಿ.ಬಿ.ಎಂ.ಪಿ. ದಂಡ ವಿಧಿಸಿ ಕಠಿಣ ಕ್ರಮ ಕೈಗೊಳ್ಳುತ್ತಿದ್ದರೆ ಇಂಥ ತಪ್ಪುಗಳು ಪದೇ ಪದೇ ಆಗುವುದಿಲ್ಲ.  ಬಿ.ಬಿ.ಎಂ.ಪಿ. ಆಯುಕ್ತರು ಕೂಡಲೇ ಗಮನಹರಿಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT