ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನುಲಿ ಕಾರ್ಯಕ್ರಮ ಕೇಳುವಲ್ಲಿ ಸಮಸ್ಯೆ

Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಶಾಲೆಯಲ್ಲಿ ಬಾನುಲಿ ಕಾರ್ಯಕ್ರಮ ಕೇಳುವಾಗ ಪಕ್ಕದ ವರ್ಗ ಕೋಣೆಯ ಮಕ್ಕಳ ಗಲಾಟೆ, ವಿದ್ಯುತ್‌ನ ‘ಬರ್‌’ ಸಪ್ಪಳ, ಕಿಲಾಡಿ ಮಕ್ಕಳ ಕೈಚಳಕ...

ಮನೆಯಲ್ಲಿ, ‘ಈ ಕಾಲದಲ್ಲೂ ರೇಡಿ­ಯೊ ಕೇಳೋದಾ?’ ಎಂಬ ಉದ್ಗಾರ. ರೇಡಿಯೊ ಹಾಳಾಯ್ತು ರಿಪೇರಿ ಮಾಡಿ­ಸ್ಕೋಬನ್ನಿ ಎಂದರೆ, ‘ಜನ ನಗ್ತಾರೆ, ರಿಪೇರಿ ಮಾಡುವವರೇ ಇಲ್ಲ’ ಎಂಬ ಉತ್ತರ.  ಬೇರೆ ರೇಡಿಯೊನಾದ್ರೂ ತರ್ರಿ ಎಂದರೆ ‘ತಂದ ಸ್ವಲ್ಪೇ ದಿವಸಕ್ಕೆ ಹಾಳಾಯ್ತು ಅಂತೀಯಾ. ಕಂಪ್ಯೂಟರ್‌ ಕಾಲದಲ್ಲೂ ರೇಡಿಯೊನಾ?’ ಎಂದು ಕೇಳ್ತಾರೆ.

  ಇದು ನನ್ನ ಒಬ್ಬಳದೇ ಸಮಸ್ಯೆ ಅಲ್ಲ ಎಂದು ತಿಳಿದಿರುವೆ. ಅಂದಹಾಗೆ ಪ್ರಾಥಮಿಕ ಶಾಲಾ ಶಿಕ್ಷಕಿಯಾದ ನನಗೆ ರೇಡಿಯೊ ತಯಾರಿಕಾ ಕಂಪೆನಿಯ ವ್ಯಥೆ ಕುರಿತು ಚಿಂತೆ!

ರೇಡಿಯೊ, ಟೇಪ್‌ರೆಕಾರ್ಡರ್‌ ರಿಪೇರಿ ಮಾಡುವ ತರಬೇತಿಯನ್ನು ಪ್ರೌಢಶಾಲೆ– ಕಾಲೇಜು ಆಸಕ್ತ ವಿದ್ಯಾರ್ಥಿಗಳಿಗೆ, ಶಿಕ್ಷಕ ವೃಂದಕ್ಕೆ ನೀಡಿ­ದರೆ ರೇಡಿಯೊ, ಟೇಪ್‌ರೆಕಾರ್ಡರ್ ಕೇಳುಗರ ಮತ್ತು ಕೊಂಡುಕೊಳ್ಳುವವರ ಸಂಖ್ಯೆ ಹೆಚ್ಚಾಗಬಹುದು, ನಮ್ಮಂತಹ­ವರಿಗೆ ಉಪಯೋಗವೂ ಆಗಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT