ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ನ್ಲ್ಲಲೀಗ ಬೋಲ್ಡ್‌ನೆಸ್ ಜಿಜ್ಞಾಸೆ

Last Updated 23 ಮೇ 2012, 19:30 IST
ಅಕ್ಷರ ಗಾತ್ರ

ಬೋಲ್ಡ್‌ನೆಸ್ ಅನ್ನುವುದು ಸಂಕೀರ್ಣ ವಿಷಯ. ಬಟ್ಟೆ ಬಿಚ್ಚುವುದು, ಮೈತೋರುವುದಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಬೋಲ್ಡ್‌ನೆಸ್ ಅನ್ನುವುದು ಅಭಿವ್ಯಕ್ತಿಗೆ, ಅದನ್ನು ಹಿಡಿದಿಡುವವರ ಸಾಮರ್ಥ್ಯಕ್ಕೆ ಸಂಬಂಧಿಸಿದ ವಿಷಯ... ಹೀಗೆಲ್ಲ ತತ್ವಜ್ಞಾನ ಹೇಳುತ್ತಿರುವವರು ನಂದನಾ ಸೆನ್; ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಆಮರ್ತ್ಯ ಸೆನ್ ಮಗಳು.

ಮೈಮಾಟದ ಪ್ರದರ್ಶನದಲ್ಲಿ ಯಾವತ್ತೂ ಹಿಂದೆ ಬೀಳದ ನಂದನಾ `ರಂಗ್ ರಸಿಯಾ~ ಚಿತ್ರದಲ್ಲಿ ಕೆಲವು ಪ್ರೀತಿ-ಪ್ರಣಯದ ದೃಶ್ಯಗಳಲ್ಲಿ ನಟಿಸಿದ್ದಾರೆ.

“ಬಾಲಿವುಡ್‌ನಲ್ಲಿ `ಲವ್ ಮೇಕಿಂಗ್~ ದೃಶ್ಯ, ಮಿಲನ ಮುಂತಾದವುಗಳನ್ನು ಕಲಾತ್ಮಕವಾಗಿ ತೋರುವ ಅಗತ್ಯವಿದೆ. ಕೆಲವೊಮ್ಮೆ ತುಂಡು ಬಟ್ಟೆಗಳನ್ನುಟ್ಟ ಅಸಹ್ಯದ ದೃಶ್ಯಗಳನ್ನೂ ಕುಟುಂಬದ ಮನೆಮಕ್ಕಳೆಲ್ಲ ಸೇರಿ ನೋಡುತ್ತಾರೆ. ಆದರೆ ಅದೇ ಪ್ರಣಯದ ದೃಶ್ಯ ಬಂದ ತಕ್ಷಣ ಮಡಿವಂತಿಕೆ ಎದ್ದು ಕಾಣತೊಡಗುತ್ತದೆ. ಈ ಇಬ್ಬದಿಯ ನೀತಿಯೇ ಬೋಲ್ಡ್‌ನೆಸ್ ಅನ್ನೂ ವಿವಿಧ ರೀತಿಯಲ್ಲಿ ಅರ್ಥೈಸುವಂತಾಗಿದೆ. ಶೃಂಗಾರ ದೃಶ್ಯಗಳಲ್ಲಿ ನಟಿಸುವುದು ಸುಲಭವಲ್ಲವೇ ಅಲ್ಲ. ಪರದೆಯ ಮೇಲೆ ನೋಡುವಾಗ ಸುಲಭವಾಗಿ ಅಲ್ಲಗಳೆಯಬಹುದು. ಆದರೆ ಅದು ಏಕಾಂತದ ಶೃಂಗಾರವಲ್ಲ... ನೀವು ನೂರಾರು ಜನರ ನಡುವೆ ಶೃಂಗಾರದ ಭಾವಾಭಿವ್ಯಕ್ತಿಯನ್ನು ಆಂಗಿಕ ಅಭಿನಯದೊಂದಿಗೆ ನಟಿಸಬೇಕು... ಇದು ಸವಾಲಿನ ಕೆಲಸ” ಎನ್ನುತ್ತಾರೆ ನಂದನಾ.
ರಂಗ್ ರಸಿಯಾ ಚಿತ್ರದ ಇಂಥ ದೃಶ್ಯಗಳಲ್ಲಿ ನಟಿಸುವ ಮುನ್ನ ಅವರು ಕುಟುಂಬದ ಎಲ್ಲ ಸದಸ್ಯರೊಂದಿಗೂ ಚರ್ಚಿಸಿಯೇ ಈ ತೀರ್ಮಾನ ಕೈಗೊಂಡರಂತೆ.

`ಕಲಾತ್ಮಕವಾಗಿ ಆ ಇಡೀ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ನನ್ನ ಸೌಂದರ್ಯವನ್ನು, ಪ್ರೀತಿ ತುಂಬಿದ ಹೃದಯ ತೋರಿಸಿದಂತೆಯೇ ತೋರಿಸಲಾಗಿದೆ. ಸೌಂದರ್ಯ ಹಾಗೂ ಪ್ರಣಯವನ್ನು ವ್ಯಕ್ತಿ ಮತ್ತು ಪ್ರೀತಿಯಂತೆ ಚಿತ್ರಿಸಿದರೆ ಅದಕ್ಕೆ ಕಲಾತ್ಮಕ ಸ್ಪರ್ಶ ಸಿಗುತ್ತದೆ. ಇಲ್ಲದಿದ್ದರೆ ಕೇವಲ ಮೈಮಾಟ ಪ್ರದರ್ಶನ ಇಲ್ಲವೇ ಸೌಂದರ್ಯದ ಸರಕು ನಾವಾಗುತ್ತೇವೆ. ಈ ಆತಂಕ ನನ್ನನ್ನು ಕಾಡುತ್ತದೆ. ನಾನು ಸರಕು ಆಗಲಾರೆ~ ಎಂಬುದು ನಂದನಾ ನುಡಿಮುತ್ತು.

`ತುಂಡು ಬಟ್ಟೆಗಳನ್ನು ತೊಟ್ಟು ನರ್ತಿಸಿದರೆ ಅದು ಅಸಹ್ಯವೇನೂ ಅಲ್ಲ. ಆದರೆ ಸೀರೆಯನ್ನೇ ಸುತ್ತಿಕೊಂಡಿದ್ದರೂ ಅದು ಕೆಲವು ಮಡಿವಂತರ ಹುಬ್ಬೇರಿಸುವಂತೆ ಮಾಡಿದೆಯಲ್ಲವೇ? ಈ ಸಾಂಸ್ಕೃತಿಕ ಭೇದವೇ ಅರ್ಥವಾಗುವುದಿಲ್ಲ~ ಎಂದೂ ಹೇಳಿದ್ದಾರೆ.

ರವಿಕೆ ಇಲ್ಲದೆ ಸೀರೆಯುಟ್ಟ ನಂದನಾಳ ಚಿತ್ರಗಳು `ರಂಗ್ ರಸಿಯಾ~ ಚಿತ್ರದ ಪ್ರಮುಖ ಆಕರ್ಷಣೆಯಾಗಿವೆ. ಚಿತ್ರ ಸಿದ್ಧವಾಗಿ ಮೂರು ವರ್ಷಗಳೇ ಕಳೆದರೂ ಬಿಡುಗಡೆಯ ಭಾಗ್ಯ ಸಿಕ್ಕಿರಲಿಲ್ಲ. ಕಲಾವಿದ ರವಿವರ್ಮನ ಜೀವನ ಆಧಾರಿತ ಚಿತ್ರ ಇದು ಎಂಬುದೇ ಚರ್ಚೆಗೆ ಗ್ರಾಸವಾಗಿತ್ತು. ಈ ವರ್ಷ  ಎಲ್ಲ ಚಿತ್ರೋತ್ಸವಗಳಲ್ಲಿಯೂ ಈ ಚಿತ್ರ ಪ್ರದರ್ಶನ ಕಂಡಿದೆ. ಇನ್ನೇನು ವರ್ಷಾಂತ್ಯದಲ್ಲಿ ದೇಶದ ಎಲ್ಲ ಚಿತ್ರಮಂದಿರಗಳಲ್ಲಿಯೂ ತೆರೆಕಾಣಲಿದೆ ಎಂಬ ನಿರೀಕ್ಷೆ ನಂದನಾ ಅವರದ್ದು.

`ಬಿಕಿನಿಯಲ್ಲಿ ಕಾಣಿಸಿಕೊಳ್ಳುವಷ್ಟು ಬೋಲ್ಡ್ ನಾನಲ್ಲ~ ಎಂದು ಸೋನಾಕ್ಷಿ ಹೇಳಿ ಇನ್ನೂ ಕೆಲವೇ ದಿನಗಳಾಗಿವೆ. ಈಗ ನಂದನಾ ಆಡಿರುವ ಮಾತುಗಳು ಅದಕ್ಕೆ ತದ್ವಿರುದ್ಧವಾಗಿವೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT