ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕ್ಕಟ್ಟು ಶಮನವಾಗಲಿ

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಇರಾನ್ ಕೈಗೊಂಡಿರುವ ಪರಮಾಣು ಶಕ್ತಿ ಕಾರ‌್ಯಕ್ರಮಕ್ಕೆ ವಿಶ್ವದ ಪ್ರಬಲ ರಾಷ್ಟ್ರಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಐರೋಪ್ಯ ಒಕ್ಕೂಟವು ವ್ಯಾಪಾರ ವಹಿವಾಟಿನ ಮೇಲೆ ನಿಷೇಧ ಹೇರುವ ಆರ್ಥಿಕ ದಿಗ್ಬಂಧನ ಕ್ರಮಕ್ಕೆ ಮುಂದಾಗಿದೆ.

ಇದಕ್ಕೆ ಪ್ರತಿಯಾಗಿ ಇರಾನ್ ಒಕ್ಕೂಟದ ಆರು ದೇಶಗಳಿಗೆ ತೈಲ ರಫ್ತು ನಿಷೇಧಿಸುವ ಪ್ರತಿಕ್ರಮ ಪ್ರಕಟಿಸಿದೆ. ಕ್ಯಾನ್ಸರ್ ಚಿಕಿತ್ಸೆಯ ಔಷಧ ತಯಾರಿಕೆಗೆ ಪರಮಾಣು ಸಂಶೋಧನೆಯ ಕಾರ್ಯಕ್ರಮ ಹಾಕಿಕೊಂಡಿರುವುದಾಗಿ ಇರಾನ್ ಹೇಳುತ್ತಿರುವುದನ್ನು ಅಮೆರಿಕ ಸೇರಿದಂತೆ ಪರಮಾಣು ಶಕ್ತ ರಾಷ್ಟ್ರಗಳು ಒಪ್ಪಿಕೊಂಡಿಲ್ಲ.

ಆದರೆ, ಚೀನ ಈ ಸಂಶೋಧನೆಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದೆ. ರಷ್ಯವು ಇರಾನ್ ಕಾರ್ಯಕ್ರಮದ ವಿರುದ್ಧ ಅಭಿಪ್ರಾಯ ತಾಳಿಲ್ಲ. ಬದಲಾಗಿ ತಾಳ್ಮೆ ವಹಿಸುವಂತೆ ಈ ಕುರಿತಾಗಿ ಉದ್ವಿಗ್ನತೆಯಿಂದ ವರ್ತಿಸುತ್ತಿರುವ ದೇಶಗಳಿಗೆ ಕರೆ ನೀಡಿದೆ.

ಪರಮಾಣು ಶಕ್ತಿ ಆಧರಿಸಿದ ಸಂಶೋಧನೆ ಶಾಂತಿಯುತ ಉದ್ದೇಶಕ್ಕೆ ಎಂದೇ ಅದನ್ನು ಆರಂಭಿಸಿದ ದೇಶಗಳು ಹೇಳುತ್ತಿದ್ದರೂ ಅದು ಅವುಗಳ ಮಿಲಿಟರಿ ಶಕ್ತಿವರ್ಧನೆಗೆ ಬಳಕೆಯಾಗುತ್ತಿರುವುದನ್ನು ತಡೆಯಲು ಸಾಧ್ಯವಾಗಿಲ್ಲ.

ಅಭಿವೃದ್ಧಿಶೀಲ ದೇಶಗಳ ಮೇಲೆ ಕೂಡ ಆರ್ಥಿಕ ದಿಗ್ಬಂಧನದ ಕ್ರಮಗಳು ಇಂಥ ಸಂಶೋಧನೆಗಳನ್ನು ತಪ್ಪಿಸಲು ಸಾಧ್ಯವಾಗಿಲ್ಲ. ತೈಲ ಸಮೃದ್ಧಿ ಇರುವ ಇರಾನ್‌ಅನ್ನು ಇಂಥ ಕ್ರಮಗಳಿಂದ ಮಣಿಸಲು ಸಾಧ್ಯವಿಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ.
 
ತಾನು ಅಭಿವೃದ್ಧಿ ಪಡಿಸುತ್ತಿರುವ ಪರಮಾಣು ಸಂಶೋಧನಾ ಘಟಕಗಳಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯ (ಇಂಟರ್‌ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ- ಐಎಇಎ) ನಿಯಮಗಳಿಗೆ ಒಳಪಡುವುದಕ್ಕೆ ಸಂಬಂಧಿಸಿ ಮಾತುಕತೆಗೆ ಸಿದ್ಧ ಎಂದು ಇರಾನ್ ನೀಡಿರುವ ಆಹ್ವಾನವನ್ನು ಆಧರಿಸಿಯೇ ಈ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ.

ಪರಮಾಣು ಶಕ್ತಿಯ ಸ್ಥಾವರಗಳ ಕಾರ‌್ಯನಿರ್ವಹಣೆಗೆ ಸಂಬಂಧಿಸಿ ಸುರಕ್ಷತಾ ಕ್ರಮಗಳ ಪಾಲನೆ ಮತ್ತು ಪರಮಾಣು ಶಕ್ತಿಯ ಬಳಕೆ ಕುರಿತಾಗಿ ಅತ್ಯಂತ ಜವಾಬ್ದಾರಿಯ ವರ್ತನೆಯನ್ನು ದೃಢಪಡಿಸಿಕೊಳ್ಳುವುದೇ ಈಗಿನ ತುರ್ತು ಅವಶ್ಯಕತೆ.
 

ರಾಜಕೀಯ ಆಡಳಿತದಲ್ಲಿ ಧಾರ್ಮಿಕ ಮೂಲಭೂತವಾದ ಮೇಲುಗೈ ಪಡೆಯುವ ಸಂದರ್ಭಗಳಲ್ಲಿ ಮನುಕುಲದ ಉಳಿವಿಗೇ ಅಪಾಯ ತರುವಂಥ ಅವಿವೇಕ ನಡೆಯುವ ಸಂಭಾವ್ಯತೆಯನ್ನು ಅಮೆರಿಕ ನೇತೃತ್ವದ ಪರಮಾಣು ಶಕ್ತ ರಾಷ್ಟ್ರಗಳು ಶಂಕಿಸುತ್ತಿವೆ.
 
ಆದ್ದರಿಂದಲೇ ಪರಮಾಣು ಶಕ್ತಿ ಸಂಶೋಧನೆ ಈ ಐಎಇಎ ಕಣ್ಗಾವಲಿನಲ್ಲಿ ನಡೆಯಬೇಕು ಎಂಬ ಕಟ್ಟುಪಾಡು. ಪರಮಾಣು ಶಕ್ತಿಗೆ ಸಂಬಂಧಿಸಿದ ಸಂಶೋಧನೆ ರಹಸ್ಯವಾದರೆ ಆ ಬಗ್ಗೆ ಸಂಶಯಗಳಿಗೆ ಎಡೆಯಾಗುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಶ್ವಸಂಸ್ಥೆಯ ಮುಂದಾಳತ್ವದಲ್ಲಿ ಈ ಸಮಸ್ಯೆಯನ್ನು ಸಂಧಾನ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳುವ ವಿವೇಕವನ್ನು ಬಲಿಷ್ಠ ರಾಷ್ಟ್ರಗಳು ಪ್ರದರ್ಶಿಸಬೇಕಿದೆ.

ಇರಾನ್‌ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರುವ ಮತ್ತು ಅದರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಭಾರತ, ಈ ಸಂದರ್ಭದಲ್ಲಿ, ದೇಶದ ಇಂಧನ ಬಳಕೆದಾರರು ತೈಲ ಬೆಲೆ ಏರಿಕೆಯ ಸಂಕಷ್ಟಕ್ಕೆ ಗುರಿಯಾಗದಂತೆ ನೋಡಿಕೊಳ್ಳುವ ಎಚ್ಚರ ವಹಿಸಬೇಕಿದೆ. ತಾನು ಕೈಗೊಂಡ ಪರಮಾಣು ಶಕ್ತಿ ಕಾರ್ಯಕ್ರಮವನ್ನು ಭಾರತ ಬೆಂಬಲಿಸಿತ್ತೆಂಬು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT