ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ವಿಲೀನಕ್ಕೆ ಕೆಜೆಪಿ ಸಿದ್ಧತೆ

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಮೋದಿ ವಿದ್ಯಮಾನದ ನಂತರ, ಬಿಜೆಪಿಯಲ್ಲಿ ವಿಲೀನ­ಗೊಳ್ಳಲು ಕರ್ನಾಟಕ ಜನತಾ ಪಕ್ಷ  ಮಾನಸಿಕ­ವಾಗಿ ಸಿದ್ಧ­ವಾಗಿದೆ. ಈ ವಿಷಯ­­ವನ್ನು ಗುರು­ವಾರ ಬೆಳಿಗ್ಗೆ ಇಲ್ಲಿನ ಮಲ್ಲೇಶ್ವರದ ಕೆನರಾ ಯೂನಿ­ಯನ್‌ನಲ್ಲಿ ನಡೆಯುವ ಪಕ್ಷದ ಕಾರ್ಯ­ಕಾರಿಣಿ­ಯಲ್ಲಿ ಮುಖಂಡ­­ರಿಗೆ ತಿಳಿಸಲು ನಿರ್ಧರಿಸ­ಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಕ್ಷದ ಪ್ರಮುಖರ ಸಭೆ (ಕೋರ್‌ ಕಮಿಟಿ) ಬುಧವಾರ ಸಂಜೆ ನಡೆಯ­ಲಿದೆ. ಬಿಜೆಪಿಯಲ್ಲಿ ಕೆಜೆಪಿ ವಿಲೀನ  ಸೇರಿದಂತೆ ಮುಂಬರುವ ಲೋಕ­ಸಭಾ ಚುನಾವಣೆ ಕುರಿತು ಈ ಸಭೆ­ಯಲ್ಲಿ ಚರ್ಚಿಸುವ ಸಾಧ್ಯತೆ ಇದೆ.

ಸಂಜೆ 4.30ಕ್ಕೆ ಡಾಲರ್‌ರ್ಸ್ ಕಾಲೋನಿ­­ಯಲ್ಲಿರುವ ಯಡಿ­ಯೂರಪ್ಪ ಅವರ ನಿವಾಸದಲ್ಲಿ ನಡೆಯುವ ಸಭೆಯಲ್ಲಿ ಶೋಭಾ ಕರಂದ್ಲಾಜೆ, ವಿ.ಧನಂಜಯ­ಕುಮಾರ್‌, ಎಂ.ಡಿ.­ಲಕ್ಷ್ಮೀ­ನಾರಾ­ಯಣ ಮತ್ತಿತರರು  ಭಾಗವಹಿಸ­ಲಿದ್ದಾರೆಎಂದು ಪಕ್ಷದ ಮೂಲಗಳು ತಿಳಿಸಿವೆ.

ನರೇಂದ್ರ ಮೋದಿ ಅವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯೆಂದು ಘೋಷಣೆ ಮಾಡಿದ ನಂತರ ಅದನ್ನು ಯಡಿಯೂರಪ್ಪ ಸ್ವಾಗತ ಮಾಡಿದ್ದರು. ಇದಕ್ಕೆ ಪೂರಕ­ವಾಗಿ ಆ ಪಕ್ಷದ ಮುಖಂಡ ಧನಂಜಯ­ಕುಮಾರ್‌ ಅವರು ಮೋದಿ ಅವರಿಗೆ ಪತ್ರ ಬರೆದು, ಹಿಂದೆ ಆಗಿರುವ ಎಲ್ಲ ಕಹಿ ಘಟನೆಗಳನ್ನು ಮರೆತು ಒಟ್ಟಿಗೆ ಹೋಗುವ ಅಗತ್ಯ ಇದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT