ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟಿಪಿಎಸ್: ಮುಂದುವರಿದ ಪ್ರತಿಭಟನೆ

Last Updated 4 ಜೂನ್ 2013, 5:12 IST
ಅಕ್ಷರ ಗಾತ್ರ

ಬಳ್ಳಾರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಕುಡುತಿನಿಯಲ್ಲಿ ಲಿರುವ ಬಳ್ಳಾರಿ ವಿದ್ಯುತ್ ಶಾಖೋ ತ್ಪನ್ನ ಕೇಂದ್ರ  (ಬಿಟಿಪಿಎಸ್) ದ ಎದುರು ಗುತ್ತಿಗೆ ಕಾರ್ಮಿಕರ ಸಂಘದ ನೇತೃತ್ವ ದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಇತ್ತೀಚೆಗಷ್ಟೇ ಕಾರಣವಿಲ್ಲದೆ ಕೆಲವು ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿರುವುದನ್ನು ವಿರೋಧಿಸಿ ಈ ಪ್ರತಿಭಟನೆ ನಡೆಸಲಾಗಿದ್ದು, ಮಂಗಳ ವಾರವೂ ಪ್ರತಿಭಟನೆ ಮುಂದುವರಿ ಯಲಿದೆ.

ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ ಬುಧವಾರ ಈ ಕುರಿತು ಪ್ರತಿಭಟನೆ ನಡೆಸಿದರೂ ಈವರೆಗೆ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಕಾರ್ಮಿಕ ಸಂಘಟನೆಯನ್ನೇ ಪಡೆಯವ ಹುನ್ನಾರವನ್ನು ಕೆಪಿಸಿಎಲ್‌ನ ಅಧಿಕಾರಿ ಗಳು ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ನ್ಯಾಯ ಯುತ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸುತ್ತಿ, ಕಾರ್ಮಿಕ ಸಂಘ ದೊಂದಿಗೆ ಆಡಳಿತ ಮಂಡಳಿಯ ಅಧಿಕಾರಿಗಳು ಚರ್ಚೆಗೆ ಅವಕಾಶ ನೀಡದೆ, ಕಾರ್ಮಿಕ ಮುಖಂಡರ ವಿರುದ್ಧ ಅನಗತ್ಯ ಆರೋಪ ಹೊರಿಸು ತ್ತಿದ್ದಾರೆ ಕಳೆದ ಆರು ವರ್ಷಗಳಿಂದ ಕನಿಷ್ಠ ಸೌಲಭ್ಯ ಒದಗಿಸದೆ ಕಾರ್ಮಿ ಕರನ್ನು ಶೋಷಣೆಗೆ ಒಳಪಡಿಸ ಲಾಗುತ್ತಿದೆ ಎಂದು ದೂರಿದರು.

ಗುತ್ತಿಗೆ ಕಾರ್ಮಿಕರ ವೇತನ ಹೆಚ್ಚಿಸಬೇಕು, ಪ್ರತಿ ತಿಂಗಳು ದಿನಾಂಕ 10ರೊಳಗೆ ವೇತನ ನೀಡಬೇಕು, ಗುತ್ತಿಗೆ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಅಡಿನೆರವು ನೀಡಬೇಕು. ಕೇಂದ್ರದಲ್ಲಿ ಸುರಕ್ಷಿತ ಕ್ರಮ ಜಾರಿಗೊಳಿಸಬೇಕು, ಗುತ್ತಿಗೆ ಕಾರ್ಮಿಕರಿಗೂ ಎಲ್ಲ ಸೌಲಭ್ಯ ಒದಗಸಬೇಕು, ಕಾರ್ಮಿಕರಿಗೆ ಸಾರಿಗೆ ಸೌಲಭ್ಯ ನೀಡಬೇಕು, ಭದ್ರತಾ ನಿಯಮ ಪಾಲಿಸಬೇಕು, ಮಹಿಳಾ ಕಾರ್ಮಿಕರಿಗೆ ವಾರದ ರಜೆ ನೀಡಬೇಕು ಎಂದು ಕೋರಲಾಯಿತು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ನಾಗೇಶ, ಗೌರವಾಧ್ಯಕ್ಷ ಜೆ.ಸತ್ಯಬಾಬು, ಕಾರ್ಮಿಕರಾದ ಹನುಮೇಶ, ತಿಪ್ಪೇಸ್ವಾಮಿ, ಕುಮಾರ್, ಗೋವಿಂದ, ಅರುಣ್, ನಿತ್ಯಾನಂದ, ಬಸವರಾಜ್, ಸಂತೋಷ, ಪ್ರಕಾಶ, ರುದ್ರಮ್ಮ, ಗಾದಿಲಿಂಗಮ್ಮ  ಸೇರಿದಂತೆ 400ಕ್ಕೂ ಅಧಿಕ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT