ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿದರಹಳ್ಳಿ: ಕಾಡಾನೆ ದಾಳಿಗೆ ಬೆಳೆ ನಾಶ

Last Updated 14 ಸೆಪ್ಟೆಂಬರ್ 2013, 8:42 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಬಿದರಹಳ್ಳಿ, ಕೆಂಜಿಗೆ, ಬಾನಹಳ್ಳಿ ಗ್ರಾಮಗಳಿಗೆ ಗುರುವಾರ ತಡ ರಾತ್ರಿ ದಾಳಿ ನಡೆಸಿ­ರುವ ಕಾಡಾನೆಗಳ ದಂಡು, ಗ್ರಾಮದ ಬತ್ತದ ಗದ್ದೆ ಮತ್ತು ಕಾಫಿ ತೋಟಗಳಲ್ಲಿ ಸಂಚರಿಸಿ ಅಪಾರ ನಷ್ಟ ಉಂಟು ಮಾಡಿವೆ.

ನಾಲ್ಕು ಆನೆಗಳಿರುವ ತಂಡ ಸಾರಗೋಡು ಮೀಸಲು ಅರಣ್ಯದಿಂದ ಗ್ರಾಮಕ್ಕೆ ಬಂದಿವೆ ಎಂದು ಶಂಕಿಸ­ಲಾಗಿದ್ದು, ಬಿದರಹಳ್ಳಿಯ ಬಿ.ಎಂ.­ರಮೇಶ್ ಎಂಬುವವರ ಬತ್ತದ ಗದ್ದೆಯ ಮೂಲಕ ಸಾಗಿ, ಗದ್ದೆಯ ಬಳಿಯಲ್ಲಿಯೇ ಇರುವ ಕೆರೆಗೆ ಇಳಿದು ವಿದ್ಯುತ್ ಮೋಟಾರು, ನೀರೆತ್ತುವ ಪೈಪು­ಗಳನ್ನು ಹಾನಿಗೊಳಿಸಿವೆ. ದಾಳಿಯ ವೇಳೆ ವಿದ್ಯುತ್ ತಡೆಯಿದ್ದಿ­ದ್ದ­ರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ಕೆರೆಯಿಂದ ಮೇಲೆದ್ದ ಆನೆಗಳು ಅಕ್ಕಪಕ್ಕದಲ್ಲಿರುವ ಬಿ.ಎಸ್.­ಜಯ­ರಾಮಗೌಡ, ಬಿ.ಎಂ.­ಚಂದ್ರೇಗೌಡ, ಎಚ್.ಕೆ.ಪ್ರಭಾಕರ, ಬಿ.ಎಸ್.­ನಾಗ­ರಾಜು­ಗೌಡ ಮುಂತಾದ­ವರ ಬತ್ತದ ಗದ್ದೆಗಳನ್ನು ತುಳಿದು ಹಾನಿಗೊಳಿಸಿದ್ದು, ಪಕ್ಕದಲ್ಲಿಯೇ ಇರುವ ಕಾಫಿ ತೋಟಗಳಲ್ಲಿ ಸಂಚರಿಸಿ ಕಾಫಿ ಗಿಡ­ಗಳನ್ನು ತುಳಿದು ಹಾನಿ­ಗೊಳಿಸಿವೆ. ಸುದ್ದಿ ತಿಳಿಯುತ್ತಿದ್ದಂತೆ ವಲಯ ಸಂರಕ್ಷಣಾಧಿ­ಕಾರಿ ಸುದ­ರ್ಶನ್ ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದರು.

ಸ್ಥಳದಲ್ಲಿದ್ದ ಗ್ರಾಮಸ್ಥರು, ಹಿರಿಯ ಅಧಿಕಾರಿ­ಗಳ ಸ್ಥಳಕ್ಕೆ ಭೇಟಿ ನೀಡ­ಬೇಕೆಂದು ಬಿಗಿ ಪಟ್ಟು ಹಿಡಿದಿದ್ದರಿಂದ, ಉಪ ಅರಣ್ಯ ಸಂರಕ್ಷಕ ರವಿರಾಜ್ ನಾರಾ­ಯಣ ಭೇಟಿ ನೀಡುವವರೆಗೂ ಗ್ರಾಮಸ್ಥರು ಸ್ಥಳದಲ್ಲಿಯೇ ಬೀಡು­ಬಿಟ್ಟಿದ್ದರು. ನಂತರ ಸ್ಥಳಕ್ಕೆ ಬಂದಿದ್ದ ಉಪ ಅರಣ್ಯ ಸಂರಕ್ಷಕ ರವಿರಾಜ್ ನಾರಾ­ಯಣ, ಹಾನಿಯಾಗಿರುವ ಬೆಳೆ­ಗಳಿಗೆ ಸೂಕ್ತ ಪರಿಹಾರ ಮತ್ತು ದಾಳಿ ನಡೆಸುತ್ತಿರುವ ಕಾಡಾನೆಗಳನ್ನು ಹಿಮ್ಮೆಟ್ಟಿ­ಸುವ ಕಾರ್ಯಚರಣೆ ನಡೆಸ­ಲಾ­ಗುವುದು ಎಂದು ಭರವಸೆ ನೀಡಿದರು.

ಸ್ಥಳದಲ್ಲಿ ಗ್ರಾಮಸ್ಥರಾದ ದಯಾಕರ್, ಲೋಹಿತ್, ರಮೇಶ್, ಜಯರಾಮಗೌಡ, ಚಂದ್ರೇಗೌಡ, ಬಿದರಹಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಪ್ರಭಾಕರ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT