ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಜ ವಿತರಣಾ ಕೇಂದ್ರಕ್ಕೆ ರೈತರಿಂದ ಬೀಗ

Last Updated 2 ಅಕ್ಟೋಬರ್ 2012, 5:00 IST
ಅಕ್ಷರ ಗಾತ್ರ

ನರಗುಂದ: ಕೃಷಿ ಇಲಾಖೆಯು ಕಡಲೆ ಬೀಜವನ್ನು ಕೇವಲ ನೆಪ ಮಾತ್ರಕ್ಕೆ ಸಬ್ಸಿಡಿ  ಎಂದು ಹೇಳಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದೆ ಎಂದು ಆಕ್ರೋಶಗೊಂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಕಾರ್ಯಕರ್ತರು ಬೀಜ ವಿತರಣಾ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಸಾಬಳೆ ಮಾತನಾಡಿ, `ಈಗಷ್ಟೇ ಹಿಂಗಾರು  ಮಳೆ ಸುರಿದಿದೆ. ಕಡಲೆ ಬೀಜ ಬಿತ್ತುವಲ್ಲಿ ರೈತರು ಮುಂದಾಗುತ್ತಿದ್ದಾರೆ. ಆದರೆ ಮಾರು ಕಟ್ಟೆಯಲ್ಲಿ ಒಂದು ಕ್ವಿಂಟಲ್  ಕಡಲೆ  ಬೀಜಕ್ಕೆ 4500-5000 ರೂಪಾಯಿ ಗಳಿದ್ದರೆ  ಕೃಷಿ ಇಲಾಖೆ ಸಬ್ಸಿಡಿ ದರ ವನ್ನೇ ಆರು ಸಾವಿರ ರೂಪಾಯಿಗಳನ್ನು ತೆಗೆದು ಕೊಳ್ಳುತ್ತಿದೆ. ಇದರಿಂದ ರೈತರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ  ವ್ಯಕ್ತಪಡಿಸಿದರು.

ಆದ್ದರಿಂದ ಕೂಡಲೇ ಕೃಷಿ ಇಲಾಖೆ  ಇದರ ಬಗ್ಗೆ ಪುನರ್ ಪರಿಶೀಲಿಸಿ  ಕಡಲೆ ಬೀಜಗಳನ್ನು ಕಡಿಮೆ ದರದಲ್ಲಿ ವಿತರಿಸ ಬೇಕು.  ಇಲ್ಲವಾದರೆ  ಮತ್ತೆ ಪ್ರತಿಭಟನೆ  ಕೈಗೊಳ್ಳುವುದಾಗಿ ಎಚ್ಚರಿಸಿದರು. ಕೆಲವಡೆ ಸರ್ಕಾರ ಜೋಳದ ಬೀಜಗಳನ್ನು ಉಚಿತವಾಗಿ ವಿತರಿಸುತ್ತಿದೆ. ಆ ನೀತಿಯನ್ನು  ಇಲ್ಲಿ ಜಾರಿಗೊಳಿಸಬೇಕು ಎಂದು  ಹೇಳಿದರು.

ಈ ಸಂದರ್ಭದಲ್ಲಿ ಹನಮಪ್ಪ ನಾಯ್ಕರ, ಆಂಜನೇಯ ಬಾರಕೇರ, ದುಂಡಪ್ಪ ಭೂಸಗೊನ್ನದವರ, ಪಾಂಡಪ್ಪ ಜೋಗಿ, ಎಸ್.ಬಿ. ಜೋಗಣ್ಣವರ, ಬಾಬಣ್ಣ ಕಲಾಲ, ಈರಪ್ಪ ಉಪ್ಪಿನ, ಬಿ.ಪಿ.ಶಿರಕೋಳ ಮಠ, ಆರ್.ಬಿ.ಬೂದಿಹಾಳ    ವೈ. ಆರ್.ತಳವಾರ, ವಿಠ್ಠಪ್ಪ ಗುಲಗಂಜಿ, ವೆಂಕರೆಡ್ಡಿ ಹೆಬ್ಬಾಳ ಮೊದಲಾದವರು  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT