ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿ ಆಕಸ್ಮಿಕ: 3 ಎಕರೆ ಕಬ್ಬು ಭಸ್ಮ

Last Updated 3 ಫೆಬ್ರುವರಿ 2011, 16:45 IST
ಅಕ್ಷರ ಗಾತ್ರ


ಹಸ್ತಿನಾಪುರ (ಕಡೂರು): ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿ ಹಸ್ತಿನಾಪುರ ಗ್ರಾಮದ ರೈತ ರಾಮನಾಯ್ಕ ಮತ್ತು ದೇಶ್ಯ ನಾಯ್ಕ ಎಂಬುವವರಿಗೆ ಸೇರಿದ 5 ಎಕರೆಯಲ್ಲಿ ಬೆಳೆದಿದ್ದ ಕಬ್ಬಿನ ಗದ್ದೆಗೆ      ಗುರುವಾರ ಬೆಳಿಗ್ಗೆ ಬೆಂಕಿ ತಗುಲಿ 3 ಲಕ್ಷ ಮೌಲ್ಯದ ಕಬ್ಬು ಪೂರ್ಣ ಭಸ್ಮವಾಗಿದೆ.

ಗ್ರಾಮದಿಂದ ಒಂದು ಕಿ.ಮೀ. ದೂರದ ಗದ್ದೆಗೆ ರಾಮ ನಾಯ್ಕ ಬೆಳಿಗ್ಗೆ ಹೋದಾಗ ಸಮೃದ್ಧವಾಗಿ ಬೆಳೆದಿದ್ದ ಕಬ್ಬು ಹೊತ್ತಿಕೊಂಡು ಉರಿಯುತ್ತಿದ್ದುದನ್ನು ಕಂಡು ಬೊಬ್ಬಿಟ್ಟರು. ಸಮೀಪದ ಗದ್ದೆಗಳಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ರೈತರು, ಕೂಲಿಕಾರರು ಧಾವಿಸಿ ಬಂದು ಬೆಂಕಿ ಆರಿಸಲು ಯತ್ನಿಸಿದರು. ಹೊತ್ತಿ ಉರಿಯುತ್ತಿದ್ದ ಕಬ್ಬಿಗೆ ಕೈಗೆ ಸಿಕ್ಕಿದ ಕೋಲುಗಳಿಂದ ಬಡಿದು ಬೆಂಕಿ ನಂದಿಸಲು ಯತ್ನಿಸಿ ವಿಫಲರಾದರು. ಬೆಂಕಿ ನಂದಿಸುವ ಯತ್ನದಲ್ಲಿ ಕೆಲವರಿಗೆ ಸಣ್ಣ ಗಾಯಗಳಾಗಿದ್ದು ಸಖರಾಯಪಟ್ಟಣ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT