ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ವಿಶ್ವ ಸ್ನೂಕರ್

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಡಗಾವ್‌ಪಿಲ್ಸ್‌, ಲಾಟ್ವಿಯಾ (ಪಿಟಿಐ): ಬೆಂಗಳೂರಿನಲ್ಲಿ 2014ರ ಐಬಿಎಸ್‌ಎಫ್‌ ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. ಪುರುಷ, ಮಹಿಳಾ ಹಾಗೂ ಮಾಸ್ಟರ್ಸ್‌ ವಿಭಾಗದಲ್ಲಿ ಈ ಚಾಂಪಿಯನ್‌ಷಿಪ್‌ ಜರುಗಲಿದೆ.

ಅಂತರರಾಷ್ಟ್ರೀಯ ಬಿಲಿಯರ್ಡ್ಸ್ ಹಾಗೂ ಸ್ನೂಕರ್‌ ಫೆಡರೇಷನ್‌ನ (ಐಬಿಎಸ್‌ಎಫ್‌) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗುರುವಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 36 ಸದಸ್ಯ ರಾಷ್ಟ್ರಗಳು ಇದಕ್ಕೆ ಒಪ್ಪಿಗೆ ನೀಡಿವೆ. ಭಾರತದಲ್ಲಿ ಈಗಾಗಲೇ ಎರಡು ಬಾರಿ ಈ ಪ್ರತಿಷ್ಠಿತ ಚಾಂಪಿಯನ್‌ಷಿಪ್ ಆಯೋಜಿಸಲಾಗಿದೆ.

ಈ ಚಾಂಪಿಯನ್‌ಷಿಪ್‌ 2014ರ ನವೆಂಬರ್‌ನಲ್ಲಿ ನಡೆಯುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಡಿಸೆಂಬರ್‌ 14ರಂದು ನಡೆಯಲಿರುವ ಭಾರತ ಬಿಲಿಯರ್ಡ್ಸ್‌ ಹಾಗೂ ಸ್ನೂಕರ್‌ ಫೆಡರೇಷನ್‌ (ಬಿಎಸ್ಎಫ್‌ಐ) ಮಂಡಳಿ ಸಭೆಯಲ್ಲಿ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ.

ನಾಕ್‌ಔಟ್‌ ಹಂತಕ್ಕೆ ಎಂಟು ಮಂದಿ
ಭಾರತದ ಎಂಟು ಮಂದಿ ಸ್ಪರ್ಧಿಗಳು ಇಲ್ಲಿ ನಡೆಯುತ್ತಿರುವ ಐಬಿಎಸ್‌ಎಫ್‌ ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ನಾಕ್‌ಔಟ್‌ ಹಂತ ಪ್ರವೇಶಿಸಿದ್ದಾರೆ. ಮನನ್‌ ಚಂದ್ರ, ವಿದ್ಯಾ ಪಿಳ್ಳೈ, ಬ್ರಿಜೇಶ್‌ ದಾಮನಿ, ಶಹಬಾಜ್‌ ಅದಿಲ್ ಖಾನ್‌, ಅರಂತ್ಸಾ ಸಾಂಚಿಸ್‌, ವರ್ಷಾ ಸಂಜೀವ್‌, ಚಿತ್ರಾ ಮಗಿಮೈರಾಜ್‌ ಹಾಗೂ ನೀನಾ ಪ್ರವೀಣ್‌ ಮುಂದಿನ ಸುತ್ತಿನಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ.  ಶುಕ್ರವಾರ ಮುಂದಿನ ಹಂತದ ಪಂದ್ಯಗಳು ಶುರುವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT