ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಎಫ್‌ಸಿಗೆ ಅಗ್ನಿಪರೀಕ್ಷೆ

ಐ-ಲೀಗ್‌ ಫುಟ್‌ಬಾಲ್‌: ಇಂದು ಮೋಹನ್‌ ಬಾಗನ್‌ ಜೊತೆ ಪೈಪೋಟಿ
Last Updated 21 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಐ-ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಆಡುತ್ತಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡಕ್ಕೆ ಅಗ್ನಿಪರೀಕ್ಷೆ ಎದುರಾಗಿದೆ.

ಸುನಿಲ್‌ ಚೆಟ್ರಿ ಅವರನ್ನೊಳಗೊಂಡ ಬೆಂಗಳೂರಿನ ತಂಡ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತ್ತದ ಮೋಹನ್‌ ಬಾಗನ್‌ ತಂಡದ ಸವಾಲನ್ನು ಎದುರಿಸಲಿದೆ. ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.

ಆ್ಯಶ್ಲೆ ವೆಸ್ಟ್‌ವುಡ್‌ ಅವರ ಮಾರ್ಗದರ್ಶನದಲ್ಲಿ ಪಳಗಿರುವ ಬೆಂಗಳೂರು ತಂಡದ ಆಟಗಾರರು ಪ್ರಬಲ ಬಾಗನ್‌ ಒಡ್ಡುವ ಸವಾಲನ್ನು ಮೆಟ್ಟಿನಿಲ್ಲುವರೇ ಎಂಬುದನ್ನು ನೋಡಬೇಕು. ಇಂದಿನ ಪಂದ್ಯಕ್ಕೆ ತಂಡ ರೂಪಿಸಿರುವ ಯೋಜನೆಗಳ ಬಗ್ಗೆ ಕೋಚ್‌ ವೆಸ್ಟ್‌ವುಡ್‌ ಶನಿವಾರ ಯಾವುದೇ ಗುಟ್ಟು ಬಿಟ್ಟುಕೊಡಲಿಲ್ಲ.

ಚೆಟ್ರಿ, ರಾಬಿನ್‌ ಸಿಂಗ್‌, ಜಾನ್‌ ಜಾನ್ಸನ್‌, ಜಾನಿ ಮೆನ್ಯೊಂಗರ್‌ ಮತ್ತು ಸೀನ್‌ ರೂನಿ ಅವರನ್ನು ಒಳಗೊಂಡಿರುವ  ತಂಡ ಶುಭಾರಂಭದ ನಿರೀಕ್ಷೆಯಲ್ಲಿದೆ. ಚೆಟ್ರಿ ಮತ್ತು ರೂನಿ ಮುನ್ನಡೆ ವಿಭಾಗದಲ್ಲಿ ಆಡಲಿದ್ದಾರೆ. ಮೆನ್ಯೊಂಗರ್ ಹಾಗೂ ಮಲೆಂಗಾಂಬ ಮೇಟಿ ಮಿಡ್‌ಫೀಲ್ಡರ್‌ನ ಜವಾಬ್ದಾರಿ ನಿರ್ವಹಿಸುವರು.

ಗಾಯದಿಂದ ಬಳಲುತ್ತಿರುವ ಸ್ಟಾರ್‌ ಸ್ಟ್ರೈಕರ್‌ ಒಡಾಫೆ ಒಕೊಲಿ ಈ ಪಂದ್ಯದಲ್ಲಿ ಕಣಕ್ಕಿಳಿಯದೇ ಇರುವುದು ಬಗಾನ್‌ ತಂಡಕ್ಕೆ ಅಲ್ಪ ಹಿನ್ನಡೆ ಉಂಟುಮಾಡಿದೆ. ಒಡಾಫೆ ಅನುಪಸ್ಥಿತಿಯಲ್ಲಿ ಸಿ.ಎಸ್. ಸಬೀತ್‌ ಪ್ರಧಾನ ಸ್ಟ್ರೈಕರ್‌ ಆಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಜಪಾನ್‌ನ ಕತ್ಸುಮಿ ಯುಸಾ ಮತ್ತು ಡೆನ್ಸನ್‌ ದೇವದಾಸ್‌ ಈ ತಂಡದ ಪ್ರಮುಖ ಆಟಗಾರರು.

ಸಲಗಾಂವ್ಕರ್‌ಗೆ ಜಯ
ಪಣಜಿ (ಪಿಟಿಐ):
ಸಲಗಾಂವ್ಕರ್‌ ತಂಡ 2013ರ ಋತುವಿನ ಐ-ಲೀಗ್‌ ಫುಟ್‌ಬಾಲ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಗೆಲುವು ಪಡೆಯಿತು.

ಇಲ್ಲಿನ ದುಲೆರ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸಲಗಾಂವ್ಕರ್‌ 1-0 ಗೋಲಿನಿಂದ ಹಾಲಿ ಚಾಂಪಿಯನ್‌ ಚರ್ಚಿಲ್‌ ಬ್ರದರ್ಸ್‌ ತಂಡವನ್ನು ಮಣಿಸಿತು. ಸ್ಕಾಟ್ಲೆಂಡ್‌ನ ಸ್ಟ್ರೈಕರ್‌ ಡೆರಿಲ್‌ ಡಫಿ ಪಂದ್ಯದ 42ನೇ ನಿಮಿಷದಲ್ಲಿ ಗೆಲುವಿನ ಗೋಲು ತಂದಿತ್ತರು.

ಡ್ರಾ ಪಂದ್ಯದಲ್ಲಿ ಮುಂಬೈ ಎಫ್‌ಸಿ (ಪುಣೆ ವರದಿ): ಶಿವಛತ್ರಪತಿ ಕ್ರೀಡಾ ಸಂಕೀರ್ಣದ ಅಂಗಳದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮುಂಬೈ ಎಫ್‌ಸಿ ತಂಡ ಸ್ಪೋರ್ಟಿಂಗ್‌ ಗೋವಾ ಜೊತೆ 1-1 ಗೋಲಿನ ಡ್ರಾ ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT