ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನಜೀರ್ ಭುಟ್ಟೊ ಮೊಬೈಲ್ ವಶ

Last Updated 5 ಫೆಬ್ರುವರಿ 2011, 16:05 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಂಯುಕ್ತ ತನಿಖಾ ಏಜೆನ್ಸಿ (ಎಫ್‌ಐಎ) ಬೆನಜೀರ್ ಹತ್ಯೆಯಾದ ಸಮಯದಲ್ಲಿ ಬಳಸಿದ್ದ ಎರಡು ಬ್ಲಾಕ್ ಬೆರ್ರಿ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ವಶ ಪಡಿಸಿಕೊಂಡಿದೆ.

ಈ ಮೊಬೈಲ್ ಸೆಟ್‌ಗಳು ಬೆನಜೀರ್ ಅವರ ಕರಾಚಿಯಲ್ಲಿರುವ ಬಿಲ್ವಾಲ್ ಬಂಗ್ಲೆಯಲ್ಲಿ ಪತ್ತೆಯಾಗಿದ್ದು, ಈ ಬಂಗ್ಲೆಯ ನೌಕರರೊಬ್ಬರಿಂದ ಅದನ್ನು ಎಫ್‌ಐಎ ವಶಪಡಿಸಿಕೊಂಡಿದೆ.

ಆದರೆ, ಬೆನಜೀರ್ ಭುಟ್ಟೊ ಅವರ ಮನೆಯಲ್ಲೇ ಇದ್ದ ಈ ಮೊಬೈಲ್ ಸೆಟ್‌ಗಳನ್ನು ಪತ್ತೆ ಮಾಡಲು ಮೂರು ವರ್ಷಗಳ ಕಾಲ ಹಿಡಿಯಿತೆ? ಎಂಬ ಪ್ರಶ್ನೆಗೆ ಎಫ್‌ಐಎ ಅಥವಾ ಬಿಲ್ವಾಲ್ ಬಂಗ್ಲೆಯ ವಕ್ತಾರು ಯಾವುದೇ ಪತ್ರಿಕ್ರಿಯೆ ನೀಡಿಲ್ಲ. ಬೆನಜೀರ್ ಅವರನ್ನು  ಡಿಸೆಂಬರ್, 2007ರಲ್ಲಿ ಹತ್ಯೆ ಮಾಡಲಾಗಿತ್ತು.

ಹಾಗೆಯೇ ಬಿಲ್ವಾಲ್ ಬಂಗ್ಲೆಯಲ್ಲಿ ಪತ್ತೆಯಾದ ಈ ಮೊಬೈಲ್ ಸೆಟ್‌ಗಳನ್ನು ಬಂಗ್ಲೆಯ ನೌಕರರೇ ಖುದ್ದಾಗಿ ಎಫ್‌ಐಎಗೆ ನೀಡಿದ್ದಾರೆ ಎಂದು ಬಿಲ್ವಾಲ್ ಬಂಗ್ಲೆಯ ಮೂಲಗಳು ಹೇಳಿವೆ. ಆದರೆ ಈ ಸೆಟ್‌ಗಳನ್ನು ತನಿಖೆ ಆರಂಭಗೊಂಡಾಗಲೇ ಯಾಕೆ ಎಫ್‌ಐಎಗೆ ನೀಡಲಿಲ್ಲ ಎಂಬ ಪ್ರಶ್ನೆಗೆ ಬಿಲ್ವಾಲ್ ಬಂಗ್ಲೆಯ ಅಧಿಕಾರಿಗಳು ಪ್ರತಿಕ್ರಿಯಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT