ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳವಣಕಿ: ಮಳೆಗಾಗಿ ಕತ್ತೆ ಮದುವೆ

Last Updated 3 ಅಕ್ಟೋಬರ್ 2011, 6:45 IST
ಅಕ್ಷರ ಗಾತ್ರ

ಬೆಳವಣಕಿ (ರೋಣ): ಮುಂಗಾರು ಮತ್ತು ಹಿಂಗಾರು ಮಳೆಗಳು ಬಾರದ ಹಿನ್ನೆಲೆಯಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಮಳೆರಾಯನ ಆಗಮನಕ್ಕಾಗಿ ವಿವಿಧ ಧಾರ್ಮಿಕ ಚಟುವಟಿಕೆಗಳು ಗ್ರಾಮಸ್ಥರು ಹಮ್ಮಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. ಕತ್ತೆಗಳ ಮದುವೆಯನ್ನು ಜರುಗಿಸಿದರೆ ಮಳೆ ಸುರಿಯುತ್ತದೆ ಎನ್ನುವ ನಂಬಿಕೆ ಇಟ್ಟುಕೊಂಡು ಗ್ರಾಮಸ್ಥರು ಕೂಡಿಕೊಂಡು ಜೋಡಿ ಕತ್ತೆಗಳ ಮೆರವಣಿಗೆ ಕೈಗೊಂಡು ಧಾರ್ಮಿಕ ವಿಧಾನಗಳ ಪ್ರಕಾರ ಮದುವೆ ಶಾಸ್ತ್ರ ನಡೆಸಿದರು.

ವಿವಿಧ ವಾದ್ಯದೊಂದಿಗೆ ಅಲಂಕೃತ ಕತ್ತೆ ಜೋಡಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಮದುವೆ ಮಾಡಿದರು.
ಈ ಸಂದರ್ಭದಲ್ಲಿ ಮುತ್ತಪ್ಪ ಕುಸುಗಲ್ಲ, ಭೀಮಪ್ಪ ತಾಳಿ, ಗೋಪಾಲರಡ್ಡಿ ಅಳಗವಾಡಿ, ರಮೇಶ ಚಿಕ್ಕರಡ್ಡಿ, ಅಶೋಕ ಚರೇದ, ರಾಚಪ್ಪ ಹೊಂಬಳ, ಮುತ್ತಪ್ಪ ಸಿದ್ಧರಾಮಶಟ್ರು, ಶರಣಪ್ಪ ಹಾಲಬಾವಿ ಮುಂತಾದವರು ಭಾಗವಹಿಸಿದ್ದರು.

ಡಿ.ಇಡಿ ಉತ್ತಮ ಫಲಿತಾಂಶ
ಮುಂಡರಗಿ: ಇಲ್ಲಿಯ ಜಗದ್ಗುರು ಅನ್ನದಾನೀಶ್ವರ ಡಿಇಡಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ.ಕಾಲೇಜಿನ ವಿದ್ಯಾರ್ಥಿ ಶ್ರಿಕಾಂತ ಕಕ್ಕೂರ ಶೇ 92.88 ಅಂಕಗಳನ್ನು ಪಡೆದುಕೊಂಡು ಕಾಲೇಜಿಗೆ ಪ್ರಥಮ ಸ್ಥಾನದಲ್ಲಿದ್ದಾನೆ. ಮಂಜುನಾಥ ಕೊರವರ ಶೇ 90.47 ಅಂಕಗಳನ್ನು ಹಾಗೂ ಮಂಜುನಾಥ ಬಿದರಳ್ಳಿ ಶೇ 90.35ರಷ್ಟು ಅಂಕಗಳನ್ನು ಪಡೆದುಕೊಂಡು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT