ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಪರಿಹಾರ ನೀಡುವಂತೆ ಒತ್ತಾಯಿಸಿ ಮನವಿ

Last Updated 23 ಸೆಪ್ಟೆಂಬರ್ 2013, 6:35 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದ ಗಣಿ:  ಲಿಂಗಸಗೂರು ತಾಲ್ಲೂಕಿನ ರೈತರು ಬೆಳೆದ ಸೂರ್ಯ­ಕಾಂತಿ, ಸಜ್ಜೆ, ಎಳ್ಳು ಸೇರಿದಂತೆ ಮುಂತಾದ ಬೆಳೆಗಳು ಅತಿವೃಷ್ಟಿಗೆ ತುತ್ತಾಗಿ ರೈತರು ನಷ್ಟ ಅನುಭವಿ­ಸುತ್ತಿದ್ದಾರೆ. ಕೂಡಲೇ ರೈತರಿಗೆ ಪರಿಹಾರ ನೀಡಬೇಕೆಂದು ಕರ್ನಾಟಕ ರೈತ ಸಂಘದ ಮುಖಂಡರು ಶನಿವಾರ ಹಟ್ಟಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್‌. ಎನ್‌. ನಾಗರಾಜು ಅವರನ್ನು ಒತ್ತಾಯಿಸಿ­ದರು.

ರಾಂಪೂರು ಏತನೀರಾವರಿ ಯೋಜನೆ ಕಾಮಗಾರಿಗಳು ಕಳಪೆಯಾಗಿ ಮಳೆಗೆ ಕೊಚ್ಚಿಹೋಗಿವೆ. ಸಂಬಂಧಿಸಿದ ಅಧಿಕಾರಿ­ಗಳ ವಿರುದ್ಧ ಕ್ರಮ ಜರುಗಿಸ­ಬೇಕು. ಇದರಿಂದಾಗಿ ಈ ಭಾಗದ ರೈತರ ನೀರಾವರಿ ಕನಸು ನುಚ್ಚು ನೂರಾಗಿದೆ.

ತಾಲ್ಲೂಕಿನಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯಿತಿ ಇಲಾಖೆ ವತಿಯಿಂದ ನಿರ್ಮಿಸಿದ ರಸ್ತೆಗಳು ಒಂದೇ ತಿಂಗಳಲ್ಲಿ ಕಿತ್ತು ಹೋಗಿವೆ.  ಕಳೆದ 3ರಿಂದ 5 ದಶಕಗಳಿಂದ ಸಾಗುವಳಿ ಮಾಡುತ್ತಿರುವ ಅತೀ ಸಣ್ಣ ರೈತರಿಗೆ ಪಟ್ಟಾ ನೀಡಬೇಕು. ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗ್ರ್ಯಾನೈಟ್ ಗಣಿಗಾರಿಕೆ ತಡೆಯಬೇಕು. 

ಯುಕೆಪಿ­ಯಲ್ಲಿ ರೈತರಿಂದ ಸ್ವಾಧೀನ ಪಡೆಸಿಕೊಂಡ  400 ಎಕರೆ ಭೂಮಿ ಪಾಳು ಬಿದ್ದಿದೆ. ಸಾಗುವಳಿಗೆ ಅನುಕೂಲ ಮಾಡಿ­ಕೊಡ­ಬೇಕು. ಉದ್ಯೋಗ ಖಾತರಿ ಯೋಜನೆ ಸರಿಯಾಗಿ ಅನುಷ್ಠಾನ­ಗೊಳದ ಕಾರಣ ಕೃಷಿ ಕೂಲಿಕಾರರು ಗುಳೆ ಹೋಗು­ತ್ತಿದ್ದಾರೆ. ಇದನ್ನು ತಡೆಯಲು ಕ್ರಮ ಜರುಗಿಸಬೇಕೆಂಬ ಹಲವು ಬೇಡಿಕೆ­ಗಳ ಮನವಿಯನ್ನು ಸಲ್ಲಿಸಲಾ­ಯಿತು.

ಸಂಘದ ಅಧ್ಯಕ್ಷ ಬಸವರಾಜ ನಗನೂರು, ಹನುಮಂತ ಗಲಗ, ಚಿನ್ನಪ್ಪ ಕೊಟ್ರಕಿ, ಗೂಳಪ್ಪ ಜಾವಗಲ್‌, ಸಿದ್ದರಾಮ ದೇವತಗಲ್‌, ಬಾಬು ಭೂಪೂರ, ಶಿವಪ್ಪ ಮ್ಯಾಗೇರಿ, ರೇವಣ ಸಿದ್ದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT