ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಬ್ಬೆ ಬಕ

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಗೋಳೋ ಎಂದು ಅಳುತ್ತಿರುವಂತೆ ಬೊಬ್ಬೆ ಹಾಕುತ್ತಾ ಗುಂಪಾಗಿ ಆಕಾಶದಲ್ಲಿ ಹಾರುವ ಈ ಪಕ್ಷಿಗಳ ಹೆಸರು ಬೊಬ್ಬೆ ಬಕ. ಹೀಗೆ ವಿಶಿಷ್ಟ ಶಬ್ದ ಹೊರಡಿಸುವುದರಿಂದ ಅವುಗಳಿಗೆ  ಬೊಬ್ಬೆ ಹಾಕುವ ಬಕಗಳು ಎಂದು ಹೆಸರು.

ಅಮೆರಿಕದ ಟೆಕ್ಸಾಸ್‌ನ ತೀರ ಪ್ರದೇಶದಲ್ಲಿ ಚಳಿಗಾಲದಲ್ಲಿ ವಾಸಿಸುವ ಬೊಬ್ಬೆ ಬಕ ವಸಂತ ಮಾಸದಲ್ಲಿ ಕೆನಡಾಗೆ ತೆರಳುತ್ತದೆ. ಬೇಸಿಗೆಯಲ್ಲಿ ಮತ್ತೆ ಟೆಕ್ಸಾಸ್‌ನ ತಂಪಾದ ಪ್ರದೇಶಗಳಲ್ಲಿ ಕಾಣಸಿಗುತ್ತದೆ. ಅಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಶರತ್ಕಾಲದ ಆರಂಭದಲ್ಲಿ ಟೆಕ್ಸಾಸ್‌ನ ದಕ್ಷಿಣ ಭಾಗಕ್ಕೆ ಹೋಗಿ ಪುನಃ ಟೆಕ್ಸಾಸ್‌ಗೆ ಹಿಂತಿರುಗುತ್ತದೆ.

ಅದು ಬೃಹತ್ ಗಾತ್ರದ ಜಲಪಕ್ಷಿ. ಉತ್ತರ ಅಮೆರಿಕದ ಅತ್ಯಂತ ಉದ್ದವಾದ ಪಕ್ಷಿ ಎಂಬ ಹೆಗ್ಗಳಿಕೆ ಪಡೆದಿದೆ. ಕಪ್ಪೆ, ಮೀನು, ಹಾವು, ಕೀಟಗಳು ಮತ್ತು ಕೆಲವು ಸಸ್ಯಗಳನ್ನು ತಿನ್ನುವ ಅವುಗಳ ಕಾಲುಗಳು ಒಂದು ಮೀಟರ್‌ಗಿಂತ ಉದ್ದ ಇರುತ್ತವೆ. ಅದರಿಂದ ಅವು ನೀರಿನ ಕೆಸರನ್ನು ಸುಲಭವಾಗಿ ದಾಟುತ್ತವೆ.

ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ವಲಸೆ ಹೋಗುವ ಅವುಗಳ ಹವ್ಯಾಸಕ್ಕೆ ನಗರಗಳು ಬೆಳೆಯುತ್ತಿದ್ದಂತೆ ಅವಕಾಶ ಇಲ್ಲದಂತಾಯಿತು. ಹಾಗೆಯೇ ಮೊಟ್ಟೆ ಸಂಗ್ರಹಕಾರರಿಂದಲೂ ಅವುಗಳ ಸಂತತಿ ಬೆಳೆಯದಾಯಿತು.

ಈ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ ನಂತರ ಅವುಗಳನ್ನು ರಕ್ಷಿಸುವ ಕೆಲಸಕ್ಕೆ ಸರ್ಕಾರ ಮುಂದಾಯಿತು. ಇದೀಗ ಉಳಿದಿರುವ ಬೆರಳೆಣಿಕೆಯ ಬೊಬ್ಬೆ ಬಕಗಳನ್ನು ರಕ್ಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT