ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋವಿ ಕಾಲೋನಿಯೊಳಗೆ ಬೆಳಕಿಲ್ಲ!

Last Updated 8 ಫೆಬ್ರುವರಿ 2012, 8:15 IST
ಅಕ್ಷರ ಗಾತ್ರ

ಹಿರೀಸಾವೆ: ಮಟ್ಟನವಿಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜಪುರ ಬೋವಿ ಕಾಲೋನಿಯಲ್ಲಿ 30 ವರ್ಷಗಳಿಂದ 20 ಕುಟುಂಬಗಳು ವಾಸವಿದ್ದು, ಇದುವರೆಗೆ ಯಾವುದೇ ಮನೆಗೂ ವಿದ್ಯುತ್ ಸೇರಿದಂತೆ ಮೂಲ ಸೌಲಭ್ಯಗಳು ದೊರೆತಿಲ್ಲ.

 ಹಿರೀಸಾವೆಯಿಂದ 6 ಕಿ.ಮೀ. ದೂರದಲ್ಲಿರುವ ಈ ಗ್ರಾಮ, ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿ ಕೊಂಡಿದ್ದರೂ ಅಭಿವೃದ್ಧಿ ಎನ್ನುವುದು ಶೂನ್ಯ. ಎಲ್ಲರೂ ಕೂಲಿ ಕಾರ್ಮಿಕರು, ಬೋವಿ ಜನಾಂಗದವರಿಗೆ ಸರ್ಕಾರ ಒಂದೆ ಕೊಠಡಿ ಮನೆಗಳನ್ನು ನಿರ್ಮಿಸಿ ಕೊಟ್ಟಿದೆ. ಭಾಗ್ಯ ಜ್ಯೋತಿಯ ಸೌಲಭ್ಯ ಇದುವರೆಗೆ ತಲುಪಿಲ್ಲ. ಕುಡಿಯುವ ನೀರು 1.5 ಕಿ.ಮೀ. ದೂರದ ರಾಜಪುರದಿಂದ ಬರಬೇಕು. ಆದು ಮೂರು ದಿನಕ್ಕೊಮ್ಮೆ ಬರುತ್ತದೆ. ತಾಂತ್ರಿಕ ತೊಂದರೆಯಾದರೆ ಕಾಲೋನಿಯಲ್ಲಿರುವ ಕೈ ಪಂಪೆ ಗತಿ, ಕೊಳವೆ ಬಾವಿಯ ನೀರು ಸಹ ಕುಡಿಯಲು ಯೋಗ್ಯವಾಗಿಲ್ಲ.

 ಯಾವುದೇ ಮನೆಗೂ ಶೌಚಾಲಯ ವ್ಯವಸ್ಥೆ ಇಲ್ಲ. ರಾತ್ರಿ ಸಮಯದಲ್ಲಿ ಸ್ನಾನ ಮಾಡಬೇಕಿದೆ, ಕಾರಣ ಬಯಲು ಸಾನ್ನದ ಮನೆಗಳೇ ಗತಿ, ಮಹಿಳೆಯರ ಕಷ್ಟ ಕೇಳುವವರೇ ಇಲ್ಲ. ಮಕ್ಕಳು ಪಕ್ಕದ ರಾಜಪುರದ ಶಾಲೆಗೆ ಹೋಗಿ ಕಲಿಯುತ್ತಿರುವುದೇ ವಿಶೇಷ. ಅಂಗನವಾಡಿ ಕೇಂದ್ರ ಇಲ್ಲದ ಕಾರಣ ಮಕ್ಕಳು ಮನೆಯಲ್ಲಿ ಉಳಿಯುತ್ತಿವೆ.  

 ಗ್ರಾಮದ ಮಧ್ಯದಲ್ಲೆ ವಿದ್ಯುತ್ ಮಾರ್ಗ ಹಾದುಹೋಗಿದ್ದರೂ ಬೀದಿ ದೀಪ ಸಹ ಇಲ್ಲ. ಕತ್ತಲ್ಲೆಯಲ್ಲಿ ತಿರುಗಬೇಕಿದೆ. ಮನೆಗಳಿಗೆ ವಿದ್ಯುತ್ ಇಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ.

`ಚುನಾವಣಾ ಸಮಯದಲ್ಲಿ ಮತ ಕೇಳಲು ಬಂದವರು ಸೌಲಭ್ಯದ ಭರವಸೆ ನೀಡಿ ಹೋದವರು ಮುಂದಿನ ಚುನಾವಣೆವರೆಗೆ ಇತ್ತ ತಿರುಗಿ ನೋಡುವುದಿಲ್ಲ~ ಎನ್ನುತ್ತಾರೆ ಗ್ರಾಮಸ್ಥರು.

 ಜನ ಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಹಲವು ಬಾರಿ ಮೂಲ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರೂ ಏನೂ ಪ್ರಯೋಜನ ವಾಗದೆ ಕೆಲವರು ಬೆಂಗಳೂರು ಮತ್ತಿತರ ಕಡೆಗೆ ವಲಸೆ ಸಹ ಹೋಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT