ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಪರವಾನಗಿ: ಆರ್‌ಬಿಐ ಸ್ಪಷ್ಟನೆ

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಎಲ್ಲ ಅರ್ಹ ಅರ್ಜಿದಾರರಿಗೆ ಹೊಸ ಬ್ಯಾಂಕ್ ಸ್ಥಾಪನೆಗೆ ಪರವಾನಗಿ ನೀಡಲು ಸಾಧ್ಯವಿಲ್ಲ. ಕೇವಲ ಆಯ್ದ ಸಂಸ್ಥೆಗಳಿಗೆ ಮಾತ್ರ ಪರವಾನಗಿ ನೀಡಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಗರಿಷ್ಠ ಗುಣಮಟ್ಟದ ಅರ್ಜಿಗಳನ್ನು ಮಾತ್ರ `ಆರ್‌ಬಿಐ' ಪರಿಶೀಲಿಸಲಿದ್ದು, ಅತ್ಯಂತ ಎಚ್ಚರಿಕೆಯಿಂದ ಆಯ್ಕೆ ಮಾಡಲಿದೆ. ಪರವಾನಗಿ ನೀಡುವ ಒಟ್ಟು ಬ್ಯಾಂಕುಗಳ ಸಂಖ್ಯೆ ಮತ್ತು ಪರವಾನಗಿ ನೀಡುವ ದಿನವನ್ನು ಮುಂಚಿತವಾಗಿ ಪ್ರಕಟಿಸಲು ಸಾಧ್ಯವಿಲ್ಲ ಎಂದೂ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ಬ್ಯಾಂಕ್ ಸ್ಥಾಪನೆಗೆ ಸಂಬಂಧಿಸಿದಂತೆ `ಆರ್‌ಬಿಐ' ಫೆಬ್ರುವರಿ 22ರಂದು ಅಂತಿಮ ಮಾರ್ಗಸೂಚಿ ಪ್ರಕಟಿಸಿತ್ತು. ಮಾರ್ಗಸೂಚಿಗೆ ಸಂಬಂಧಿಸಿದಂತೆ ಅರ್ಜಿದಾರರು ಸಲ್ಲಿಸಿದ್ದ ಆಕ್ಷೇಪಕ್ಕೆ ಸೋಮವಾರ ಸ್ಪಷ್ಟನೆ ನೀಡಿದೆ. ಒಟ್ಟು 39 ಸಂಸ್ಥೆಗಳು ಸಲ್ಲಿಸಿದ್ದ 443 ದೂರುಗಳನ್ನು ಆರ್‌ಬಿಐ ಇತ್ಯರ್ಥಪಡಿಸಿದೆ.

ಜುಲೈ 1ರ ಒಳಗಾಗಿ ಬ್ಯಾಂಕ್ ಪರವಾನಗಿ ಕೋರಿ ಸಂಸ್ಥೆಗಳು ಅರ್ಜಿ ಸಲ್ಲಿಸಬೇಕು. ಸಂಸ್ಥೆಗಳು  ಶೇ 51ರಷ್ಟು ಸಾರ್ವಜನಿಕ ಭಾಗಿತ್ವ ಹೊಂದಿರಬೇಕು. ತಾತ್ವಿಕ ಪರವಾನಗಿ ಲಭಿಸಿದ 18 ತಿಂಗಳ ಒಳಗಾಗಿ ಬ್ಯಾಂಕ್ ಶಾಖೆಗಳನ್ನು ತರೆಯಬೇಕು.  ತಾತ್ವಿಕ ಪರವಾನಗಿ ಅವಧಿ 12ರಿಂದ 18 ತಿಂಗಳು ಎಂದೂ `ಆರ್‌ಬಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT