ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್: ಹಲಸೂರು ಕ್ಲಬ್ ಶುಭಾರಂಭ

Last Updated 13 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಹಲಸೂರು   ಸ್ಪೋರ್ಟ್ಸ್ ಕ್ಲಬ್ ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ಆರಂಭವಾದ ರಾಜ್ಯ ಯೂತ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಶನಿವಾರದ ಪಂದ್ಯದಲ್ಲಿ 54-8 ಪಾಯಿಂಟ್‌ಗಳಿಂದ ಕೋಲಾರದ ವೈಎಫ್ ಕ್ಲಬ್ ಎದುರು ಗೆಲುವು ಸಾಧಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಲಸೂರು ತಂಡದ ಸಾರ್ಥಕ್ (13 ಅಂಕ) ಹಾಗೂ ಚಾಣುಕ್ಯ (12 ಅಂಕ) ಗಳಿಸಿದರು.

ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಪಿಪಿಸಿ ಕ್ಲಬ್ 37-31ರಲ್ಲಿ ಪಟ್ಟಾಭಿರಾಮ ನಗರ ಕ್ಲಬ್ ಮೇಲೂ, ಬಿ.ಸಿ. ಕ್ಲಬ್ 31-9ರಲ್ಲಿ ಕೋರಮಂಗಲ ಕ್ಲಬ್ ವಿರುದ್ಧವೂ, ವಿದ್ಯಾನಗರ ಕ್ರೀಡಾಶಾಲೆ 62-16ರಲ್ಲಿ ದೇವಾಂಗ ಸ್ಪೋರ್ಟ್ಸ್ ಕ್ಲಬ್ ಮೇಲೂ, ಬೆಂಗಳೂರು ಸ್ಪೋರ್ಟಿಂಗ್ 37-17ರಲ್ಲಿ ವೈಎಂಎಂಎ ಕ್ಲಬ್ ವಿರುದ್ಧವೂ, ಭಾರತ್ ಸ್ಪೋರ್ಟ್ಸ್ ಯುನೈಟೆಡ್ 36-10ರಲ್ಲಿ ವಿಮಾನಾಪುರ ಕ್ಲಬ್ ಮೇಲೂ ಗೆಲುವು ಪಡೆದರು.

ಬಾಲಕಿಯರ ವಿಭಾಗದಲ್ಲೂ ಪ್ರಾಬಲ್ಯ ಮೆರೆದ ಹಲಸೂರು ತಂಡ 35-4ರಲ್ಲಿ ಕೋರಮಂಗಲ ಕ್ಲಬ್ ತಂಡವನ್ನು ಮಣಿಸಿತು. ವಿಜಯಿ ತಂಡ ಮೊದಲಾರ್ಧದ ವೇಳೆಗೆ 13-2ರಲ್ಲಿ ಮುನ್ನಡೆಯಲ್ಲಿತ್ತು. ಈ ತಂಡದ ಮಾಯಾ 12 ಅಂಕಗಳನ್ನು ಕಲೆ ಹಾಕಿ ಗಮನಾರ್ಹ ಪ್ರದರ್ಶನ ತೋರಿದರು.

ಇದೇ ವಿಭಾಗದ ಇತರ ಪಂದ್ಯಗಳಲ್ಲಿ ವೈಎಂಎಂಎ ಕ್ಲಬ್ 28-18ರಲ್ಲಿ ಬೆಂಗಳೂರು ಸ್ಪೋರ್ಟಿಂಗ್ ಮೇಲೂ, ಅಪ್ಪಯ್ಯ ಕ್ಲಬ್ 26-14ರಲ್ಲಿ ಬಿ.ಸಿ. ಕ್ಲಬ್ ವಿರುದ್ಧವೂ, ವಿವೇಕ್ಸ್ ಸ್ಪೋರ್ಟ್ಸ್ ಕ್ಲಬ್ 26-13ರಲ್ಲಿ ಚಿತ್ರದುರ್ಗದ ದುರ್ಗನ್ಸ್ ಮೇಲೂ, ಧಾರವಾಡದ ರೋವರ್ಸ್‌ 11-8ರಲ್ಲಿ ಸಿಜೆಸಿ ವಿರುದ್ಧವೂ ಜಯ ಸಾಧಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT