ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ

Last Updated 13 ಸೆಪ್ಟೆಂಬರ್ 2011, 6:50 IST
ಅಕ್ಷರ ಗಾತ್ರ

ನಾಗಮಂಗಲ:  ಬ್ರಹ್ಮಶ್ರೀ ನಾರಾಯಣ ಗುರುಗಳು ಮಹಾತ್ಮ ಗಾಂಧೀಜಿಯವರ ಒಡನಾಟದಲ್ಲಿ ಗುರುತಿಸಿಕೊಂಡು ದೇಶಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿ ಎಂದು ಈಡಿಗ ಸಮುದಾಯದ ಸದಸ್ಯೆ ಲಲಿತಾಲಕ್ಷ್ಮಣ್ ನುಡಿದರು.

   ಪಟ್ಟಣದ ಈಡಿಗ ಸಮುದಾಯದ ವತಿಯಿಂದ ತಾಲ್ಲೂಕಿನ ಮುದ್ದೇಗೌಡನ ಕೊಪ್ಪಲಿನ ಎಲ್ಲಮ್ಮ ದೇವಸ್ಥಾನದಲ್ಲಿ ಈಚೆಗೆ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 157 ನೇ ಜಯತ್ಯುಂತ್ಸವದಲ್ಲಿ ಅವರು ಮಾತನಾಡಿದರು. ಜಾತಿ, ಮತ ಭೇದವಿಲ್ಲದೇ ಎಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿದವರು, ಪರಿಸರ ರಕ್ಷಣೆ ಜಾಗೃತಿ ಮೂಡಿಸಿದವರು. ಮಾನವನಿಗೆ ಮರುಜನ್ಮವೆಂಬುದಿಲ್ಲ ಎಂದು ಸಾರಿದ ಧೀಮಂತ ವ್ಯಕ್ತಿ ಬ್ರಹ್ಮಶ್ರೀ ನಾರಾಯಣ ಗುರು ಎಂದರು.

ಕೇರಳದ ಮೂಲದವರಾದ ಇವರು ದೇಶದಾದ್ಯಂತ ಸಂಚರಿಸಿ ಮನುಕುಲದ ಏಳಿಗೆಗೆ ಸಲ್ಲಿಸಿದ ಸೇವೆ ಸ್ಮರಿಸಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಅಂಚೆ ಚೀಟಿ ಹಾಗು 5 ರೂ ನಾಣ್ಯದಲ್ಲಿ ಇವರ ಭಾವಚಿತ್ರವನ್ನು ಮುದ್ರಿಸುವ ಮೂಲಕ ಗೌರವ ತೋರಿದ್ದರು. ಶಿವಮೊಗ್ಗ, ಕಾರವಾರ, ಮಂಗಳೂರು ಉಡುಪಿಯಲ್ಲಿ ಇವರ ಜಯಂತಿಯನ್ನು ವಿಜೃಂಭ ಣೆಯಿಂದ ಆಚರಿಸಲಾಗುತ್ತದೆ. ಇದೇ ಮೊದಲು ತಾಲ್ಲೂಕಿನಲ್ಲಿ ಗುರುಗಳ ಜಯಂತಿಯನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ತಾ.ಪಂ ಸದಸ್ಯ ಎನ್.ಬಿ.ಕುಮಾರ್, ಪ.ಪಂ ಮಾಜಿ ಪ್ರಧಾನ ಚಂದ್ರು, ಮುಖಂಡರಾದ ರಮೇಶ್, ದಯಾ ನಂದ್, ಯಲ್ಲೇಗೌಡ, ಪಾಲಗ್ರಾರ ಮೂರ್ತಿ, ಈಡಿಗ ಸಮುದಾಯದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT