ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರತ ನೃತ್ಯಂ

Last Updated 17 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಅರ್ಕಾ ಫೌಂಡೇಷನ್ ಶುಕ್ರವಾರ ಸುಪ್ರಸಿದ್ಧ ಭರತನಾಟ್ಯ ಕಲಾವಿದೆ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರಿಂದ `ಭರತ ನೃತ್ಯ~ ವೈಭವ ಏರ್ಪಡಿಸಿದೆ.

ಡಾ. ಪದ್ಮಾ ಸುಬ್ರಹ್ಮಣ್ಯಂ ಅಂತರ್‌ರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದೆ, ನೃತ್ಯ ಸಂಯೋಜಕಿ, ಸಂಶೋಧಕಿ. ನೃತ್ಯದಲ್ಲೇ ಪಿಎಚ್‌ಡಿಯನ್ನೂ ಮಾಡಿದ್ದಾರೆ. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ, ಕಾಳಿದಾಸ್ ಸಮ್ಮಾನ್, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಫೆಲೋಶಿಪ್ ಸೇರಿದಂತೆ ಹತ್ತು ಹಲವು ಸನ್ಮಾನಗಳಿಗೆ ಪಾತ್ರರಾಗಿದ್ದಾರೆ.

ಜಪಾನ್‌ನ ಪ್ರತಿಷ್ಠಿತ ಫುಕುವಾಕೊ `ಏಷ್ಯನ್ ಕಲ್ಚರಲ್ ಫ್ರೈಜ್~ ಪಡೆದ ಜಗತ್ತಿನ ಏಕೈಕ ಶಾಸ್ತ್ರೀಯ ನೃತ್ಯ ಕಲಾವಿದೆ. 90ರ ದಶಕದಲ್ಲಿ ಭಾರತೀಯ ನಾಟ್ಯ ಶಾಸ್ತ್ರದ ಕುರಿತು ದೂರದರ್ಶನದಲ್ಲಿ ಪ್ರಕಟವಾದ ಸಾಕ್ಷ್ಯಚಿತ್ರದಲ್ಲಿ ಅಭಿನಯಿಸಿದ್ದರು. ಪದ್ಮಾ ಅವರ ಸಾಧನೆ ಆಧರಿಸಿ ರಷ್ಯಾ `ಕ್ವೀನ್ ಆಫ್ ಡಾನ್ಸ್~ ಎಂಬ ಚಿತ್ರವನ್ನೂ ನಿರ್ಮಿಸಿತ್ತು.

ಭರತನಾಟ್ಯ ಪ್ರಕಾರದಲ್ಲಿ ದಂತಕತೆಯೇ ಆಗಿರುವ ಪದ್ಮಾ ಸುಬ್ರಹ್ಮಣ್ಯಂ ಬೆಂಗಳೂರಿನ ಕಲಾ ರಸಿಕರ ಮುಂದೆ ಈಗ ಕಾರ್ಯಕ್ರಮ ನೀಡಲಿದ್ದಾರೆ.

ಅರ್ಕಾ ಫೌಂಡೇಶನ್ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಸೌಲಭ್ಯ ವಂಚಿತ ಶಾಲೆಗಳನ್ನು ದತ್ತು ತೆಗೆದುಕೊಂಡು ಅವುಗಳಿಗೆ ಪುನಶ್ಚೇತನ ನೀಡುತ್ತದೆ. ಅನೇಕ ಶಾಲೆಗಳಲ್ಲಿ ಮಕ್ಕಳಿಗಾಗಿ ಉಚಿತ ಆರೋಗ್ಯ ಶಿಬಿರ ನಡೆಸಿದೆ.ಪರಿಸರ ಸಂರಕ್ಷಣೆ, ಆರೋಗ್ಯ, ಸ್ವಚ್ಛತೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುತ್ತಿದೆ. ಈ ನೃತ್ಯ ಕಾರ್ಯಕ್ರಮದಲ್ಲಿ ಸಂಗ್ರಹವಾಗುವ ಹಣವನ್ನು  ಸಮುದಾಯದ ಅಭಿವೃದ್ಧಿಗೆ ಬಳಸಲಾಗುತ್ತದೆ.

ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್. ಸಂಜೆ 6.30. ಮುಂಗಡ ಟಿಕೆಟ್ ಮತ್ತು ಮಾಹಿತಿಗೆ 98442 72010, 99014 11369. ಆನ್‌ಲೈನ್‌ನಲ್ಲಿ ಬುಕಿಂಗ್‌ಗಾಗಿ www.indianstage.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT