ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರತನಾಟ್ಯ ರಂಗಪ್ರವೇಶ

Last Updated 8 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಗಗನ ಬದ್ರಿನಾಥ್ 
ಭಾನುವಾರ ಗಗನ ಬದ್ರಿನಾಥ್ ಅವರ ಭರತನಾಟ್ಯ ರಂಗಪ್ರವೇಶ, ಅತಿಥಿಗಳು: ಬನ್ನಂಜೆ ಗೋವಿಂದಾಚಾರ್ಯ, ವಿದ್ಯಾಭೂಷಣ, ಪ್ರೊ. ಎ. ಜನಾರ್ದನ.ವಿನೋದಿನಿ, ಎಸ್. ಬದ್ರಿನಾಥ್ ದಂಪತಿಯ ಪುತ್ರಿ ಗಗನ ಯುವ ಭರತನಾಟ್ಯ ಪ್ರತಿಭೆ.

ಭರತನಾಟ್ಯ ವಲಯದಲ್ಲಿ ‘ಕಿಟ್ಟು ಸರ್’ ಎಂದೇ ಹೆಸರಾಗಿರುವ ಪ್ರೊ. ಎಂ.ಆರ್. ಕೃಷ್ಣಮೂರ್ತಿ ಅವರ ಶಿಷ್ಯೆ. ಏಳರ ಎಳೆವೆಯಲ್ಲೇ ಭರತನಾಟ್ಯಕ್ಕೆ ಮನಸೋತು ಎಂಆರ್‌ಕೆ ಅವರ ಗುರುಕುಲ ಮಾದರಿಯ ‘ಕಲಾಕ್ಷಿತಿ’ಗೆ ಸೇರ್ಪಡೆಯಾಗಿ 12 ವರ್ಷದಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾರೆ.ಜೊತೆಗೆ ಸಂಗೀತವನ್ನೂ ಕಲಿಯುತ್ತಿದ್ದಾರೆ.
 

ನೃತ್ಯದಲ್ಲಿ ಜ್ಯೂನಿಯರ್ ಮತ್ತು ಸೀನಿಯರ್ ಗ್ರೇಡ್, ಸಂಗೀತದಲ್ಲಿ ಜ್ಯೂನಿಯರ್ ಪರೀಕ್ಷೆ ಉತ್ತೀರ್ಣರಾಗಿದ್ದು, ಹಲವು ನೃತ್ಯ ಉತ್ಸವಗಳಲ್ಲಿ ‘ಕಲಾಕ್ಷಿತಿ’ಯ ಹಲವು ನೃತ್ಯ ರೂಪಕಗಳಲ್ಲಿ ಭಾಗಿಯಾದ ಅನುಭವವೂ ಇದೆ. ರಾಮನವಮಿ, ದಸರಾ ಹಬ್ಬಗಳಲ್ಲೂ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.
 

ಪ್ರಸ್ತುತ ಆರ್‌ಎನ್‌ಎಸ್‌ಐಟಿ’ಯಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾರೆ.  ಸ್ಥಳ: ಜೆಎಸ್‌ಎಸ್ ಸಭಾಂಗಣ, 1ನೇ ಮುಖ್ಯ ರಸ್ತೆ, 8ನೇ ಬ್ಲಾಕ್, ಜಯನಗರ. ಸಂಜೆ 6.          

ಶ್ರುತಿ ಶ್ರೀನಿವಾಸನ್
ಆರಾಧನಾ ಸ್ಕೂಲ್ ಆಫ್ ಡಾನ್ಸ್: ಭಾನುವಾರ ಶ್ರುತಿ ಶ್ರೀನಿವಾಸನ್ ಭರತನಾಟ್ಯ ರಂಗಪ್ರವೇಶ,ಉಮಾ ಮತ್ತು ಶ್ರೀನಿವಾಸನ್ ದಂಪತಿಯ ಪುತ್ರಿ ಶ್ರುತಿ, ಭಗವಾನ್ ಮಹಾವೀರ್ ಜೈನ್ ಕಾಲೇಜಿನ ಅಂತಿಮ ವರ್ಷದ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿನಿ. 9 ವರ್ಷದವಳಿದ್ದಾಗಲೇ ಬಹರೈನ್‌ನಲ್ಲಿ ಭರತನಾಟ್ಯ ಅಭ್ಯಾಸ ಆರಂಭಿಸಿದರು.
 

ಆರಂಭದಲ್ಲಿ ವಿದುಷಿ ಲೇಖಾ ಶಶಿ ಮತ್ತು ವಿದ್ವಾನ್ ಶಿವಕುಮಾರ್ ಅವರ ಬಳಿ ನೃತ್ಯಾಭ್ಯಾಸ ಮಾಡಿ ಬಹರೈನ್‌ನ ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದರು. ಪಠ್ಯ ಚಟುವಟಿಕೆಗಳಲ್ಲೂ ಮುಂದಿರುವ ಶ್ರುತಿ ಬಹರೈನ್ ಇಂಡಿಯನ್ ಸ್ಕೂಲ್‌ನಲ್ಲಿ ಶೈಕ್ಷಣಿಕ ಸಾಧನೆಗಾಗಿ ಚಿನ್ನದ ಪದಕ ಪಡೆದಿದ್ದಾರೆ.
ಬೆಂಗಳೂರಿಗೆ ಮರಳಿದ ಮೇಲೆ ವಿದ್ವಾನ್ ನಾಗಭೂಷಣ ಅವರ ಬಳಿ ಭರತನಾಟ್ಯ ಅಭ್ಯಾಸ ಮುಂದುವರಿಸಿದ್ದು, ಕರ್ನಾಟಕ ಸಂಗೀತ ಮತ್ತು ಕೀ ಬೋರ್ಡ್ ವಾದನದಲ್ಲಿಯೂ ಪರಿಣತಿ ಸಾಧಿಸಿದ್ದಾರೆ.
 

ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 6.30.          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT