ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಲೇ ಬಾಣಸಿಗ!

ಪಿಕ್ಚರ್ ಪ್ಯಾಲೆಸ್
Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮಕ್ಕಳಿಗೂ ಅಡುಗೆಮನೆಗೂ ಸಂಬಂಧವೇನೋ ಇರುತ್ತದೆ. ತಮ್ಮ ಜಿಹ್ವಾಚಾಪಲ್ಯ ತಣಿಸಿಕೊಳ್ಳಲು `ಅದು ಮಾಡಮ್ಮಾ... ಇದು ಮಾಡಮ್ಮಾ' ಎಂದು ಅಂಗಲಾಚುವುದು ಮಕ್ಕಳ ಸಹಜ ಸ್ವಭಾವ. ಆದರೆ ಅದೇ ಮಕ್ಕಳು ಖುದ್ದು ಅಡುಗೆ ಮಾಡಲು ನಿಂತರೆ? ಪುಟಾಣಿಗಳು ಆಟಿಕೆಗಳನ್ನು ಉಪಯೋಗಿಸಿ ಅಡುಗೆ ಆಟವಾಡುವುದು ಇದ್ದೇಇದೆ. ಅದನ್ನು ನಿಜವಾದ ಆಟವಾಗಿಸಿದ್ದು `ಬೆಂಗಳೂರು ನೈಟ್ಸ್ ಲೇಡೀಸ್ ಸರ್ಕಲ್ 107'. ಇತ್ತೀಚೆಗೆ ಸಂಸ್ಥೆಯು `ಲಿಟ್ಲ್ ಮಾಸ್ಟರ್ ಶೆಫ್' (ಭಲೇ ಪುಟಾಣಿ ಬಾಣಸಿಗ) ಸ್ಪರ್ಧೆಯೊಂದನ್ನು ಬೆಂಗಳೂರು ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಆಯೋಜಿಸಿತ್ತು.

`ಮಿಸ್ ಅರ್ತ್ 2010' ಕಿರೀಟ ತೊಟ್ಟಿದ್ದ ನಿಕೋಲ್ ಫರಿಯಾ ಹಾಗೂ `ಸಾಫ್ಟ್ ಸ್ಕಿಲ್' ತರಬೇತುದಾರ ಇಯಾನ್ ಫರಿಯಾ ಸ್ಪರ್ಧೆಗೆ ಸಾಕ್ಷಿಯಾದರು. ತಮಗೆ ತೋಚಿದ ತಿನಿಸು, ಪಾನೀಯಗಳನ್ನು ಸಿದ್ಧಪಡಿಸಿ ಮಕ್ಕಳು ಖುಷಿಪಟ್ಟರು. ಅವುಗಳ ರುಚಿ ಸವಿದ ಮಕ್ಕಳ ಮುಖಗಳೂ ಅರಳಿದವು. ಬಹುಮಾನ ಪಡೆದ ಮಕ್ಕಳಂತೂ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT