ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಒತ್ತಡಕ್ಕೆ ಒಳಗಾಗಿಲ್ಲ: ರಾಜಪಕ್ಸೆ

Last Updated 28 ಜೂನ್ 2011, 19:30 IST
ಅಕ್ಷರ ಗಾತ್ರ

ಕೊಲಂಬೊ (ಪಿಟಿಐ): `ಭಾರತದ ಒತ್ತಡಕ್ಕೆ ಒಳಗಾಗಿ ಅಲ್ಪಸಂಖ್ಯಾತ ತಮಿಳರ ಸಮಸ್ಯೆಗಳನ್ನು ಬಗೆಹರಿಸಲು ಯಾವುದೇ ರಾಜಕೀಯ ಪರಿಹಾರದ ಪ್ರಸ್ತಾವ ಮಾಡಿಲ್ಲ. ಇಂತಹ ಯಾವುದೇ ಪರಿಹಾರ ಕ್ರಮಕ್ಕೆ ಸಂಸತ್‌ನ ಅಂಗೀಕಾರ ಅಗತ್ಯ~ ಎಂದು ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಸ್ಪಷ್ಟಪಡಿಸಿದ್ದಾರೆ.

ಈ ಸಮಸ್ಯೆಗೆ ಯಾವುದೇ ಪರಿಹಾರೋಪಾಯ ಇದ್ದರೂ ಅದನ್ನು ಸಂಸತ್ ಅಂಗೀಕರಿಸಬೇಕು. ಅಂಥದ್ದನ್ನು ಮಾತ್ರ  ಬೆಂಬಲಿಸುವುದಾಗಿ ಅವರು ಸುದ್ದಿಗಾರರಿಗೆ ಮಂಗಳವಾರ ತಿಳಿಸಿದ್ದಾರೆ.

`ಮೂಲನಿವಾಸಿಗಳ ಹಕ್ಕುಗಳ ಕುರಿತಂತೆ ಸಂಸದೀಯ ಆಯ್ಕೆ ಸಮಿತಿ (ಪಿಎಸ್‌ಸಿ) ನೇಮಿಸುವುದು ವಿಳಂಬ ಧೋರಣೆಯ ತಂತ್ರಗಾರಿಕೆಯಾಗದು. ಈ ವಿಚಾರವಾಗಿ ರಾಜಕೀಯ ಪಕ್ಷಗಳು ಈಗಾಗಲೇ ತಮಿಳು ರಾಷ್ಟ್ರೀಯ ಒಕ್ಕೂಟದೊಂದಿಗೆ  ಚರ್ಚೆ ಆರಂಭಿಸಿವೆ.

ಇದೇ ವೇಳೆಗೆ ಪಿಎಸ್‌ಸಿ ಕೂಡ ಈ ಬಗ್ಗೆಚಿಂತನೆ ನಡೆಸಲಿದೆ. ರಾಜಕೀಯ ಪಕ್ಷಗಳು ಆರಂಭಿಸಿರುವ ಚರ್ಚೆ ಮುಗಿಯುವರೆಗೂ ಕಾದು ನಂತರ ಪಿಎಸ್‌ಸಿ ಈ ವಿಷಯವನ್ನು ಕೈಗೆತ್ತಿಕೊಳ್ಳುವುದಾದರೆ ಮಾತ್ರ ವಿಳಂಬ ಆಗುತ್ತದೆ~ ಎಂದು ರಾಜಪಕ್ಸೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT