ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯರು ಒಪ್ಪಿಕೊಂಡಿದ್ದಕ್ಕೆ ಸನ್ನಿಗೆ ಸಂತಸ

ಪಂಚರಂಗಿ
Last Updated 21 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕಪ್ಪು ಕಂಗಳ, ನೀಲಿ ಚಿತ್ರಗಳ ಚೆಲುವೆ ಸನ್ನಿ ಲಿಯೋನ್ ಭಾರತೀಯರು ತಮ್ಮನ್ನು ಒಪ್ಪಿಕೊಂಡಿದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

`ಭಾರತೀಯರು ನನ್ನ ಮತ್ತಷ್ಟು ಚಿತ್ರಗಳನ್ನು ನೋಡಲು ಬಯಸಿದ್ದಾರೆ. ಜತೆಗೆ ತಾನು ನಟಿಸಿದ ಚಿತ್ರಗಳನ್ನು ಹಾಗೂ ರಾಯಭಾರಿಯಾಗಿರುವ ಉತ್ಪನ್ನಗಳನ್ನು ಖರೀದಿಸಲು ಉತ್ಸುಕರಾಗಿದ್ದಾರೆ' ಎಂದು ಸನ್ನಿ ಸಂತಸ ವ್ಯಕ್ತಪಡಿಸಿದ್ದಾರೆ.

ಪಂಜಾಬ್ ಮೂಲದ ಸನ್ನಿ ಲಿಯೋನ್ ಕೆನಡಾದಲ್ಲಿ ನೆಲೆಸಿದ್ದಾರೆ. `ಬಿಗ್ ಬಾಸ್'ನ ಐದನೇ ಆವೃತ್ತಿಯ ಮೂಲಕ ಭಾರತದ ಮನರಂಜನಾ ಕ್ಷೇತ್ರಕ್ಕೆ ಅವರು ಪದಾರ್ಪಣೆ ಮಾಡಿದರು. ನಂತರ `ಜಿಸ್ಮ್ 2' ಹಾಗೂ ಕೆಲವು ಉತ್ಪನ್ನಗಳ ಜಾಹೀರಾತಿಗೂ ಸಹಿ ಹಾಕಿದ್ದರು. ಕೆಲವೇ ದಿನಗಳಲ್ಲಿ ಗಿಗಿಗಿ ಎಂಬ ಶಕ್ತಿವರ್ಧಕ ಪೇಯದ ಪ್ರಚಾರ ರಾಯಭಾರಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ.

`ಭಾರತೀಯರು ನನ್ನನ್ನು ಒಪ್ಪಿಕೊಂಡಿದ್ದಾರೆ. ಎಲ್ಲಾ ವಯೋಮಾನದವರೂ ಇಷ್ಟಪಟ್ಟಿದ್ದಾರೆ. ಇದಕ್ಕಾಗಿ ನಾನು ಭಾರತೀಯರಿಗೆ ಆಭಾರಿಯಾಗಿದ್ದೆ' ಎಂದಿರುವ ಸನ್ನಿ, `ಶೂಟೌಟ್ ಅಟ್ ವಾಡಾಲಾ' ಚಿತ್ರದಲ್ಲಿ ಓ ಲೈಲಾ ಎಂಬ ಐಟಂ ಗೀತೆಗೆ ಹೆಜ್ಜೆ ಹಾಕಿದ್ದಾರೆ.

ಜತೆಗೆ `ರಾಗಿಣಿ ಎಂಎಂಎಸ್2' ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್‌ನಲ್ಲಿ ಹಲವು ಅವಕಾಶಗಳನ್ನು ಅವರು ಬಾಚಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT