ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿಕ್ಷಾ ಪಾತ್ರೆ ಮರ

Last Updated 9 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಚಿತ್ರದಲ್ಲಿ ಕಾಣುವುದು ಸೊಕೆಕಾಯಿ ಮರ.ಇದನ್ನು ‘ಭಿಕ್ಷಾ ಪಾತ್ರೆ’ (ಬೆಗ್ಗರ್ ಬೌಲ್ ಟ್ರೀ) ಮರ ಎಂದೂ ಕರೆಯುತ್ತಾರೆ. ಹಿಂದೆ ಋಷಿ ಮುನಿಗಳು, ಭಿಕ್ಷುಕರು ಈ ಕಾಯಿಗಳ ಬುರುಡೆಯನ್ನು ಪಾತ್ರೆ ರೂಪದಲ್ಲಿ ಬಳಸುತ್ತಿದುದ್ದರಿಂದ ‘ಭಿಕ್ಷಾ ಪಾತ್ರೆ’ ಮರ ಎಂಬ ಹೆಸರು ಬಂದಿದೆ.

ತಮಿಳಿನಲ್ಲಿ ಇದಕ್ಕೆ ‘ತಿರುವಟ್ಟು ಕಾಯಿ’ ಎನ್ನುತ್ತಾರೆ. ಅರಣ್ಯ ಪ್ರದೇಶದಲ್ಲಿ ಬೆಳೆಯುವ ಈ ಮರದ ಮೂಲ ಮಧ್ಯ ಅಮೆರಿಕಾ. ಇದರ ಸಸ್ಯಶಾಸ್ತ್ರೀಯ ಹೆಸರು ಕ್ರೆಸೆನ್ಸಿಯಾ ಕುಜೆಟೆ. ಇದು ಬಿಗ್ನೊನಿಯೇಷಿಯಾ ಕುಟುಂಬಕ್ಕೆ ಸೇರಿದೆ.

ಬಲಿತ ಕಾಯಿಯ ಮೇಲಿನ ಸ್ವಲ್ಪ ಭಾಗವನ್ನು ಬ್ಲೇಡ್‌ನಿಂದ ಕತ್ತರಿಸಿ, ಒಳಭಾಗದ ತಿರುಳು ತೆಗೆದು, ಒಣಗಿಸಿ ಪಾತ್ರೆ ರೂಪದಲ್ಲಿ ಬಳಸಬಹುದು. ನೀರು, ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಕೊಂಡೊಯ್ಯಬಹುದು.

ಮರ  ಸಾಮಾನ್ಯವಾಗಿ 6-10 ಮೀ. ಎತ್ತರಕ್ಕೆ ಬೆಳೆಯುತ್ತದೆ. ಕೊಂಬೆಗಳು ತಳಭಾಗದಿಂದಲೇ ವಿಶಾಲವಾಗಿ ಹರಡಿಕೊಳ್ಳುತ್ತವೆ. ಪ್ರತಿ ಕೊಂಬೆಗಳಲ್ಲೂ ಕಾಯಿಗಳು ಕೆಳಹಂತದಿಂದಲೇ ಒತ್ತೊತ್ತಾಗಿ ಬೆಳೆದು ತೊನೆದಾಡುತ್ತವೆ. ‘ಕಾಯಿ’ ಮೊಟ್ಟೆ ಆಕಾರದಲ್ಲಿದ್ದು ಗಟ್ಟಿಯಾಗಿರುತ್ತವೆ.

ಮೇ-ಜನವರಿ ತಿಂಗಳ ಅವಧಿಯಲ್ಲಿ ಮರ ‘ಹೂ’ ಬಿಡುತ್ತದೆ. ಹಸಿರು-ಬಿಳಿ ಮಿಶ್ರಿತ ಬಣ್ಣದ ಹೂಗಳು  ಆಕರ್ಷಕವಾಗಿರುತ್ತವೆ. ಕಾಯಿ ಚೆನ್ನಾಗಿ ಬಳಿತಾಗ ತಿರುಳು ಒಣಗಿ ಕಾಯಿ ಬುರುಡೆ ರೀತಿ ಕಾಣಿಸುತ್ತದೆ. ‘ಕಾಯಿ’ ಎಳೆದಿದ್ದಾಗ ಕೆಲವರು ತರಕಾರಿಯಂತೆ ಬಳಸುತ್ತಾರೆ.

ಮರದ ಕಾಯಿಗಳಲ್ಲಿ ಔಷಧೀಯ ಗುಣಗಳಿವೆ. ಅಸ್ತಮಾ, ಹೊಟ್ಟೆನೋವು, ಶೀತ, ಕೆಮ್ಮು, ಅತಿಸಾರ, ಶ್ವಾಸಕೋಶ ಸಂಬಂಧಿತ ಕಾಯಿಲೆಗಳಿಗೆ ಇದರ ‘ಕಾಯಿ’, ಸಿದ್ಧೌಷದ. ರಕ್ತದ ಒತ್ತಡ ನಿಯಂತ್ರಣಕ್ಕೆ ‘ಎಲೆ’ ಪರಿಣಾಮಕಾರಿ ಔಷಧ. ಆದರೆ, ವೈದ್ಯರ ಸಲಹೆ ಪಡೆದು ಬಳಸಬೇಕು.

ಕೆಲವರು ಮನೆಯಂಗಳದಲ್ಲಿ ಅಲಂಕಾರಿಕ ಗಿಡವನ್ನಾಗಿ ಬೆಳಸುತ್ತಾರೆ. ಕಾಯಿಗಳು ಗಟ್ಟಿಯಾಗಿರುವುದರಿಂದ ಸಣ್ಣ ಸಂಗೀತ ವಾದ್ಯಗಳ ತಯಾರಿಕೆಗೂ ಬಳಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT