ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಿನಲ್ಲಿ ಗೋದ್ರೆಜ್ ಅಲ್ಪೈನ್ ವಸತಿ ಯೋಜನೆ

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮುಂಬೈ ಮೂಲದ ಗೋದ್ರೆಜ್ ಸಮೂಹದ ರಿಯಲ್ ಎಸ್ಟೇಟ್ ಅಂಗಸಂಸ್ಥೆಯಾಗಿರುವ ಗೋದ್ರೆಜ್ ಪ್ರಾಪರ್ಟಿಸ್ ಲಿಮಿಟೆಡ್ (ಜಿಪಿಎಲ್), ಮಂಗಳೂರಿನಲ್ಲಿ `ಗೋದ್ರೆಜ್ ಅಲ್ಪೈನ್~ ಹೆಸರಿನ ವಸತಿ ಯೋಜನೆ ಆರಂಭಿಸಿದೆ.

ಮಂಗಳೂರು ನಗರದಲ್ಲಿ ಗುಣಮಟ್ಟದ ವಸತಿ ಯೋಜನೆಗಳಿಗೆ ಉತ್ತಮ ಬೇಡಿಕೆ ಇದೆ ಎನ್ನುವ ಕಾರಣಕ್ಕೆ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. `ಗೋದ್ರೆಜ್ ಅಲ್ಪೈನ್~, ತನ್ನ ನಿವಾಸಿಗಳಿಗೆ ಆಧುನಿಕ, ಸಮಕಾಲೀನ ಜೀವನ ಶೈಲಿಯನ್ನು ನೈಸರ್ಗಿಕ ಪರಿಸರದಲ್ಲಿ ಒದಗಿಸಲಿದೆ ಎಂದು ಗೋದ್ರೆಜ್ ಪ್ರಾಪರ್ಟೀಸ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಪಿರೋಜ್ಶಾ ಗೋದ್ರೆಜ್ ಹೇಳುತ್ತಾರೆ.

ವಿಮಾನ ನಿಲ್ದಾಣ ರಸ್ತೆಯಲ್ಲಿನ ಯಯ್ಯಾಡಿಯ 4.5 ಎಕರೆ ಭೂ ಪ್ರದೇಶದಲ್ಲಿ ಜಾಗತಿಕ ಗುಣಮಟ್ಟದ ಮತ್ತು ಸಮಕಾಲೀನ ವಿನ್ಯಾಸದ ವಸತಿ ಯೋಜನೆಯು ತಲಾ 19 ಅಂತಸ್ತುಗಳ ಮೂರು ಗೋಪುರಗಳನ್ನು ಒಳಗೊಂಡಿರಲಿದೆ. ಒಟ್ಟು 449 ಆಧುನಿಕ ಅಪಾರ್ಟ್‌ಮೆಂಟ್‌ಗಳು ಇಲ್ಲಿ ನಿರ್ಮಾಣಗೊಳ್ಳಲಿವೆ. ಗ್ರಾಹಕರು 1,203 ಚದರ ಅಡಿಗಳಿಂದ 1695 ಚದರ ಅಡಿಗಳಷ್ಟು ವಿಸ್ತಾರದ 2 ಮತ್ತು 3 ಬೆಡ್‌ರೂಂಗಳ ಆಧುನಿಕ ಅಪಾರ್ಟ್‌ಮೆಂಟ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. 2,700 ರಿಂದ 3,500 ಚದರ ಅಡಿಗಳಷ್ಟು ವಿಸ್ತೀರ್ಣದ ಪೆಂಟ್‌ಹೌಸ್‌ಗಳನ್ನೂ ಖರೀದಿಸುವ ಸೌಲಭ್ಯ ಇಲ್ಲಿದೆ.

ಅಂತರರಾಷ್ಟ್ರೀಯ ವಿನ್ಯಾಸ, ಸಮಕಾಲೀನ  ಸ್ವರೂಪ ಮತ್ತು ಜಾಗತಿಕ ಗುಣಮಟ್ಟದ ಸೌಲಭ್ಯಗಳಾದ ಸ್ಕ್ವಾಷ್, ಟೆನಿಸ್, ಬ್ಯಾಡ್ಮಿಂಟನ್ ಕೋರ್ಟ್, ಬಿಲಿಯರ್ಡ್ಸ್, ಟೇಬಲ್ ಟೆನಿಸ್ ರೂಮ್ ಮತ್ತಿತರ ಸೌಲಭ್ಯಗಳನ್ನು ಒಳಗೊಂಡಿರಲಿದೆ. ಜಿಮ್ನಾಸಿಯಂ, ಹೆಲ್ತ್ ಕ್ಲಬ್, ಈಜುಗೊಳ ಮುಂತಾದವು ಇತರ ಆಕರ್ಷಣೆಗಳಾಗಿವೆ. ಅತಿಥಿಗಳಿಗಾಗಿ ಸರ್ವಿಸ್ ಅಪಾಟ್‌ಮೆಂಟ್ಸ್, ಬಹು ಉದ್ದೇಶದ ಸಭಾಂಗಣ ಮತ್ತು ಕೆಫೆಟೇರಿಯಾ ಕೂಡ ಈ ಯೋಜನೆಯ ಇತರ ಆಕರ್ಷಣೆಗಳಾಗಿವೆ.

ಸುತ್ತಮುತ್ತಲೂ ಬೆಟ್ಟಗುಡ್ಡಗಳಿರುವ ಸುಂದರ ಸ್ಥಳದಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ವಸತಿ ಯೋಜನೆಯು, ನಗರದ ಮಧ್ಯ ಭಾಗಕ್ಕೆ, ರಾಷ್ಟ್ರೀಯ ಹೆದ್ದಾರಿಗೆ ನೇರ ಸಂಪರ್ಕವನ್ನೂ ಕಲ್ಪಿಸಿಕೊಡಲಿದೆ.

ಇಲ್ಲಿ ನೆಲೆಸುವವರಿಗೆ ಪರಿಸರ ಸ್ನೇಹಿ ಸೌಲಭ್ಯ ಕಲ್ಪಿಸಲು ಸಂಸ್ಥೆ ಬದ್ಧವಾಗಿದೆ. ಶೇ 80ರಷ್ಟು ಮುಕ್ತ ಪ್ರದೇಶ ಇಲ್ಲಿ ಇರಲಿದೆ ಎಂದು ಸಂಸ್ಥೆ ತಿಳಿಸಿದೆ.

`ಜಿಪಿಎಲ್~ನ ಇತರ ಯೋಜನೆಗಳಂತೆ, ಲಾರ್ಸನ್ ಆಂಡ್ ಟುಬ್ರೊ (ಎಲ್‌ಆಂಡ್‌ಟಿ) ಈ ವಸತಿ ಯೋಜನೆಯ ನಿರ್ಮಾಣ ಕೈಗೆತ್ತಿಕೊಳ್ಳಲಿದೆ.  `ಗೋದ್ರೆಜ್ ಅಲ್ಪೈನ್~ ಜಂಟಿ ಯೋಜನೆಯಾಗಿದ್ದು,  ಬಿ. ಎಂ. ಫಾರೂಕ್ ಅವರ ಜತೆ ಒಪ್ಪಂದ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT