ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕಠಿಣ ಶಿಕ್ಷೆ

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸೋಲ್ (ಯೋನ್‌ಹ್ಯಾಪ್): ವಿದ್ಯಾರ್ಥಿಗಳ ಮೇಲೆ, ಅದರಲ್ಲೂ ಅಂಗವಿಕಲ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲು ದಕ್ಷಿಣ ಕೊರಿಯ ಸರ್ಕಾರ ನಿರ್ಧರಿಸಿದೆ.

ಇಂತಹ ಅಪರಾಧಕ್ಕಾಗಿ ಶಿಕ್ಷೆ ಅನುಭವಿಸಿದ್ದರೆ ಅಥವಾ ದಂಡ ತೆತ್ತಿದ್ದರೆ ಅಂತಹ ಶಿಕ್ಷಕರನ್ನು ಅಥವಾ ಶಿಕ್ಷಕ ಆಕಾಂಕ್ಷಿಗಳನ್ನು ಶಾಶ್ವತವಾಗಿ ಆ ಕೆಲಸದಿಂದ ದೂರ ಇರಿಸಲು ಸಹ ಸರ್ಕಾರ ತೀರ್ಮಾನಿಸಿದೆ.

ಇದರಿಂದ, ಅಂಗವಿಕಲರ ಮೇಲೆ ಅತ್ಯಾಚಾರ ನಡೆಸುವವರಿಗೆ ಈವರೆಗೆ ಇದ್ದ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಐದು ವರ್ಷಕ್ಕೆ ಏರಿಕೆಯಾಗಲಿದೆ. ಇಷ್ಟೇ ಅಲ್ಲದೆ ಇಂತಹ ದುಷ್ಕೃತ್ಯ ಎಸಗಿದವರು ಎಲೆಕ್ಟ್ರಾನಿಕ್ ಕಾಲಂದಿಗೆಯನ್ನೂ ಹಾಕಿಕೊಳ್ಳಬೇಕಾಗುತ್ತದೆ.ದೌರ್ಜನ್ಯಕ್ಕೆ ಒಳಗಾದವರು ದೂರು ನೀಡದೆಯೂ ಶಂಕಿತರ ಮೇಲೆ ಪ್ರಕರಣ ದಾಖಲಿಸಲು ಸಾಧ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT