ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ: ಯುವಜನರ ನಿರ್ಲಕ್ಷ್ಯ ಸಲ್ಲ

Last Updated 5 ಏಪ್ರಿಲ್ 2013, 8:42 IST
ಅಕ್ಷರ ಗಾತ್ರ

ದಾವಣಗೆರೆ: ಯುವಜನರು ಮತದಾನ ಮಾಡಲು ನಿರ್ಲಕ್ಷ್ಯ ಮಾಡಿದರೆ ಅರ್ಹರನ್ನು ಆಯ್ಕೆ ಮಾಡುವಲ್ಲಿ ವಿಫಲರಾಗುತ್ತೇವೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಕಿವಿ ಮಾತು ಹೇಳಿದರು.

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ಸಾಂಸ್ಕೃತಿಕ, ಕ್ರೀಡೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮದು ಅತಿದೊಡ್ಡ ಪ್ರಜಾಪ್ರಭುತ್ವ ದೇಶ. ಇಲ್ಲಿ ಸರ್ಕಾರಗಳು ಬದಲಾಗುವ ಅವಧಿಯಲ್ಲಿ ಎಲ್ಲವೂ ಶಾಂತಿಯುತವಾಗಿರುತ್ತವೆ. ಅರಾಜಕತೆ ಸೃಷ್ಟಿಯಾಗುವುದಿಲ್ಲ. ಇಲ್ಲಿ ಚುನಾವಣೆ ಅತ್ಯಂತ ಮಹತ್ವದ್ದು. 18 ತುಂಬಿದ ಎಲ್ಲ ವ್ಯಕ್ತಿಗಳೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು.

ಯುವಜನರು ಮತದಾನದಲ್ಲಿ ಬಾಗವಹಿಸಿ ಅರ್ಹರನ್ನು ಆಯ್ಕೆ ಮಾಡಬೇಕು. ತನ್ಮೂಲಕ ದೇಶ ಇನ್ನಷ್ಟು ಬಲಿಷ್ಠವಾದ ಪ್ರಜಾಪ್ರಭುತ್ವ ದೇಶವಾಗಬೇಕು ಎಂದು ಆಶಿಸಿದರು.

ಅಂತರರಾಷ್ಟ್ರೀಯ ಕ್ರೀಡಾಪಟು ಐ.ಎ. ಶಿವಾನಂದ ಮಾತನಾಡಿ, ಕ್ರೀಡೆ ಕಡಿಮೆ ಖರ್ಚಿನಲ್ಲಿ ವಿಶ್ವ ಪ್ರಸಿದ್ಧಿ ತಂದುಕೊಡಬಲ್ಲುದು. 14ರಿಂದ 28ನೇ ವಯಸ್ಸು ಕ್ರೀಡೆಯ್ಲ್ಲಲಿ ತೊಡಗಿಕೊಳ್ಳಲು ಸೂಕ್ತ ಕಾಲ. ಸರಿಯಾದ ಯೋಜನೆ ರೂಪಿಸಿಕೊಂಡು ಪರಿಶ್ರಮದಿಂದ ಮಂದುವರಿದಲ್ಲಿ ಯಶಸ್ಸು ಸಾಧ್ಯ ಎಂದರು.

ಕವಿ, ಸಾಹಿತಿ ಇಟಗಿ ಈರಣ್ಣ ಮಾತನಾಡಿ, ಮಕ್ಕಳಲ್ಲಿ ಸ್ವತಂತ್ರ ಆಲೋಚನೆಗಳನ್ನು ಬೆಳೆಸಬೇಕೆ ವಿನಾ ಸಿದ್ಧ ಉತ್ತರಗಳನ್ನಲ್ಲ. ವಿದ್ಯಾರ್ಥಿಗಳು ಧನಾತ್ಮಕ ಆಲೋಚನೆ ಮಾಡಬೇಕು. ನಾವು ಎಂದರೆ ನಮ್ಮ ಆಲೋಚನೆಗಳೇ ಆಗಿರುತ್ತವೆ ಎಂದರು.

ದೇಶದಲ್ಲಿ ವಿರೋಧ ಪಕ್ಷ ಎಂದು ಇರಬಾರದು. ಬದಲಾಗಿ ಮಾರ್ಗದರ್ಶಿ ಪಕ್ಷ ಎಂದು ಇರಬೇಕು. ವಿರೋಧ ಪಕ್ಷ ಎಂದರೆ ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸುವವರು ಎಂದಾಗಿಬಿಟ್ಟಿದೆ. ಈ ಪರಿಕಲ್ಪನೆ ಹೋಗಬೇಕು ಎಂದರು. ಪ್ರಾಂಶುಪಾಲ ಡಿ. ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಗೌರಮ್ಮ  ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT