ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸೂರೆಗೊಂಡ ಭರತನಾಟ್ಯ ನೃತ್ಯಾಂಜಲಿ

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಗುಲ್ಬರ್ಗ: `ವರ್ಣಸಿಂಧು ನೃತ್ಯ ಕಲಾಕೇಂದ್ರ~ದ 16ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಸಂಜೆ ಇಲ್ಲಿನ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನಡೆದ `ಭರತನಾಟ್ಯ ನೃತ್ಯಾಂಜಲಿ~ ಕಾರ್ಯಕ್ರಮದಲ್ಲಿ ಕಲಾವಿದರು ರಸದೌತಣ ನೀಡಿದರು.

ಸುಮಾರು ಮೂರು ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಕಲಾಕೇಂದ್ರದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ನೀಡಿದ ನಾಟ್ಯ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಯಿತು.

ಅಲರಿಪುದಲ್ಲಿ (ಅಡವುಗಳ ನೃತ್ಯ) ಚಿಕ್ಕ ಮಕ್ಕಳು ನಡೆಸಿಕೊಟ್ಟ ಪ್ರದರ್ಶನ ಆಕರ್ಷಕವಾಗಿತ್ತು. ದೇವರನಾಮ ಹಾಗೂ ತಾಳಕ್ಕೆ ತಕ್ಕಂತೆ ಬಾಲಕಿಯರು ಪುಟ್ಟ ಪುಟ್ಟ ಹೆಜ್ಜೆ ಹಾಕಿ ನೃತ್ಯ ಮಾಡುತ್ತ, ನೋಡುಗರನ್ನು ಚಕಿತಗೊಳಿಸಿದರು.

ಹಿರಿಯ ಕಲಾವಿದರು `ಜಯ ಜಾನಕೀರಮಣ~ ಕೀರ್ತನೆಯ ಜತೆಗೆ ಶಿವಸ್ತುತಿ, ನಟೇಶ ಸ್ತುತಿಗೆ ಮಾಡಿದ ನಾಟ್ಯ ಮನಮೋಹಕವಾಗಿತ್ತು. ಪಂಚ ಮೂರ್ತಾಂಗನೆ ನೃತ್ಯವೂ ಗಮನ ಸೆಳೆಯಿತು. ಕೂಚುಪುಡಿ ಶೈಲಿಯ `ತರಂಗಂ ನೃತ್ಯ~ದಲ್ಲಿ ತಲೆ ಹಾಗೂ ಎರಡೂ ಕೈಗಳಲ್ಲಿ ದೀಪ ಇಟ್ಟುಕೊಂಡು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಕಲಾವಿದರು, ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT